ಆಫ್ಘಾನ್ ಎದುರು ಸೋತರೂ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಆಸೀಸ್ ನಾಯಕ ಮಿಚೆಲ್ ಮಾರ್ಷ್..!
ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡು ಅಜೇಯವಾಗಿಯೇ ಸೂಪರ್ 8 ಹಂತ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಆಫ್ಘನ್ನರ ಸಂಘಟಿತ ಪ್ರದರ್ಶನದ ಎದುರು ಕಾಂಗರೂ ಪಡೆಗೆ ಸೋಲಿಗೆ ಶರಣಾಗಬೇಕಾಯಿತು. ಈ ಸೋಲು ಆಸೀಸ್ ತಂಡದ ಸೆಮೀಸ್ ಕನಸನ್ನೇ ಡೋಲಾಯಮಾನವಾಗಿಸಿದೆ.
ಕಿಂಗ್ಸ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಸೂಪರ್ 8 ಹಂತದ ಪಂದ್ಯದಲ್ಲಿ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ಎದುರು 21 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಂಗರೂ ಪಡೆ ಎದುರು ಆಫ್ಘನ್ನರು ದಾಖಲಿಸಿದ ಮೊದಲ ದಿಗ್ವಿಜಯ ಎನಿಸಿದೆ.
ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡು ಅಜೇಯವಾಗಿಯೇ ಸೂಪರ್ 8 ಹಂತ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಆಫ್ಘನ್ನರ ಸಂಘಟಿತ ಪ್ರದರ್ಶನದ ಎದುರು ಕಾಂಗರೂ ಪಡೆಗೆ ಸೋಲಿಗೆ ಶರಣಾಗಬೇಕಾಯಿತು. ಈ ಸೋಲು ಆಸೀಸ್ ತಂಡದ ಸೆಮೀಸ್ ಕನಸನ್ನೇ ಡೋಲಾಯಮಾನವಾಗಿಸಿದೆ. ಜೂನ್ 24ರಂದು ಸೇಂಟ್ ಲೂಸಿಯಾದಲ್ಲಿನ ಡ್ಯಾರೆನ್ ಸ್ಯಾಮಿ ಮೈದಾನದಲ್ಲಿ ಭಾರತ ಎದುರು ನಡೆಯಲಿರುವ ಪಂದ್ಯವು ಆಸ್ಟ್ರೇಲಿಯನ್ನರ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಭಾರತ ಎದುರು ಮೈಕೊಡವಿಕೊಂಡು ಹೋರಾಟ ಮಾಡಲು ಆಸ್ಟ್ರೇಲಿಯನ್ನರು ಸಜ್ಜಾಗಿದ್ದಾರೆ. ಇದರ ನಡುವೆ ಟೀಂ ಇಂಡಿಯಾಗೆ ಆಸೀಸ್ ನಾಯಕ ಮಿಚೆಲ್ ಮಾರ್ಷ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
T20 World Cup 2024: ಆಫ್ಘಾನ್‌ಗೆ ಶರಣಾದ ಆಸ್ಟ್ರೇಲಿಯಾ; ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ...!
"ನಮಗೆ ಮೊದಲನೆಯದಾಗಿ ಹಾಗೂ ಅತಿಮುಖ್ಯವಾಗಿ, ನಾವು ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು ಎನ್ನುವುದು ಸ್ಪಷ್ಟವಾಗಿದೆ. ಅದು ಒಂದು ಉತ್ತಮ ತಂಡದ ಎದುರು ಗೆಲ್ಲಲು ಒಳ್ಳೆಯ ಅವಕಾಶ ಬಂದೊದಗಿದೆ. ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ನಮಗಿಂತ ಚೆನ್ನಾಗಿ ಆಡಿದರು. ಹೀಗಾಗಿ ಅವರಿಗೆ ಗೆಲುವಿನ ಶ್ರೇಯ ಸಿಗಲೇಬೇಕು. ನಾವೀಗ ಮುಂದಿನ ಹೋರಾಟಕ್ಕೆ ಚುರುಕಾಗಿ ಸಜ್ಜಾಗಬೇಕಿದೆ" ಎಂದು ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಜೂನ್ 24ರಂದು ಡ್ಯಾರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವು ಆಸ್ಟ್ರೇಲಿಯನ್ನರಿಗೆ ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಒಂದು ವೇಳೆ ಆಸೀಸ್ ಈ ಪಂದ್ಯವನ್ನು ಸೋತರೇ ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬೀಳಲಿದೆ. ಇದೆ ವೇಳೆ ಬಾಂಗ್ಲಾದೇಶ ಎದುರು ಆಫ್ಘಾನಿಸ್ತಾನ ಗೆಲುವು ಸಾಧಿಸಿದರೆ ಗೂಪ್ 1ರಿಂದ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮೀಸ್‌ಗೇರಲಿವೆ.
ಈ ಕ್ರಿಕೆಟಿಗನೊಂದಿಗೆ ಲವ್ವಲ್ಲಿ ಬಿದ್ದಿದ್ದ ಮಾಧುರಿ ದೀಕ್ಷಿತ್, ಆದ್ರೆ ಮದುವೆಯಾಗದಿರಲು ನಿರ್ಧರಿಸಿದ್ದೇಕೆ?
ಸದ್ಯ ಸೂಪರ್ 8 ಹಂತದಲ್ಲಿ ಭಾರತ ತಾನಾಡಿದ ಎರಡು ಪಂದ್ಯ ಗೆದ್ದು ಗ್ರೂಪ್ 1ರಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೇ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿವೆ. ಇನ್ನು ಬಾಂಗ್ಲಾದೇಶ ತಂಡವು ತಾನಾಡಿದ ಎರಡು ಪಂದ್ಯ ಸೋತು ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ.