ಮೆಲ್ಬರ್ನ್‌ಡಿಯ18): ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಪ್ರೇಲಿಯಾ ಏಕದಿನ ತಂಡದಲ್ಲಿ ಮಾರ್ನಸ್‌ ಲಬುಶೇನ್‌ ಸ್ಥಾನ ಪಡೆದಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಲಬುಶೇನ್‌ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಚಂಡ ಲಯದಲ್ಲಿರುವ ಲಬುಶೇನ್‌, ಏಕದಿನದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. 

ಇದನ್ನೂ ಓದಿ: ರಾಹುಲ್ ಸೆಂಚುರಿ ಸೆಲೆಬ್ರೇಷನ್‌ ಹಿಂದಿದೆ ಫುಟ್ಬಾಲಿಗನ ಸಂಭ್ರಮಾಚರಣೆ.!

ಜ.14ರಂದು ಮುಂಬೈನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಜ.17ರಂದು ರಾಜ್‌ಕೋಟ್‌ನಲ್ಲಿ 2ನೇ ಏಕದಿನ, ಜ. 19ರಂದು ಬೆಂಗಳೂರಿನಲ್ಲಿ 3ನೇ ಪಂದ್ಯ ನಡೆಯಲಿದೆ.

ತಂಡ: ಆ್ಯರೋನ್‌ ಫಿಂಚ್‌(ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಆ್ಯಸ್ಟನ್‌ ಟರ್ನರ್‌, ಅಲೆಕ್ಸ್‌ ಕಾರ್ರಿ, ಸೀನ್‌ ಅಬ್ಬೊಟ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್, ಆ್ಯಸ್ಟನ್‌ ಅಗರ್‌, ಕೇನ್‌ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಇದನ್ನೂ ಓದಿ: 2ನೇ ಏಕದಿನ: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ವೆಸ್ಟ್ ಇಂಡೀಸ್, ಇಲ್ಲಿದೆ ಕಾರಣ!

2019ರ ಸಾಲಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊನೆಯ ಸರಣಿ ಆಡುತ್ತಿರುವ ಭಾರತ, ಹೊಸ ವರ್ಷ ಸತತ ಕ್ರಿಕೆಟ್ ಆಡಲಿದೆ. ಶ್ರೀಲಂಕಾ ವಿರುದ್ಧದ  ಸರಣಿಯೊಂದಿಗೆ 2020ರ ಕ್ರಿಕೆಟ್ ಪಯಣ ಆರಂಭಗೊಳ್ಳಲಿದೆ.  ಲಂಕಾ ಹಾಗೂ ಆಸೀಸ್ ಸರಣಿ ಬಳಿಕ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.