Asianet Suvarna News Asianet Suvarna News

ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ ಪ್ರಕಟ!

ಕೊರೋನಾ ವೈರಸ್ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ಜೊತೆಗಿನ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯ ವೇಳಾಪಟ್ಟಿ ಪ್ರಕಟಿಸಿದೆ. ವಿಶೇಷ ಅಂದರೆ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಡೆ ಅಂಡ್ ನೈಟ್ ಟೆಸ್ಟ್ ಆಡಲಿದೆ. ವೇಳಾಪಟ್ಟಿ ವಿವರ ಇಲ್ಲಿದೆ.

Australia announces fixtures  against team india during coronavirus
Author
Bengaluru, First Published May 28, 2020, 9:16 PM IST

ಮೆಲ್ಬೋರ್ನ್(ಮೇ.28): ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕ್ರೀಡಾ ಚಟುವಟಿಕೆಗಳಿಗೆ ತಯಾರಿ ಆರಂಭವಾಗುತ್ತಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ಸರಣಿ ವೇಳಾಪಟ್ಟಿ ಪ್ರಕಟಿಸಿದೆ. ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 4 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯದ ವೇಳಾಪಟ್ಟಿ ಪ್ರಕಟಿಸಿದೆ.\

 ಐಸಿಸಿ ಅಧ್ಯಕ್ಷ ಹುದ್ದೆ ರೇಸ್‌ಗೆ ಸೌರವ್ ಗಂಗೂಲಿ

ಡಿಸೆಂಬರ್ 3 ರಿಂದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಆಸೀಸ್ ಪ್ರಕಟಿಸಿರುವ ನೂತನ ವೇಳಾಪಟ್ಟಿ ಪ್ರಕಾರ ನವೆಂಬರ್ 21 ರಿಂದ 25ರ ವರೆಗೆ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ. ಇದಾದ ಬಳಿಕ ಡಿಸೆಂಬರ್ 3 ರಿಂದ ಆಸ್ಟ್ರೇಲಿಯಾ-ಭಾರತ ಡಿಸೆಂಬರ್ 3 ರಿಂದ ಬ್ರಿಸ್ಬೇನ್‌ನಲ್ಲಿ ಮುಖಾಮುಖಿಯಾಗಲಿದೆ.

#DhoniRetires vs #DhoniNeverTires: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್..!.

ಆಡಿಲೇಡ್ ಓವಲ್‌ನಲ್ಲಿ ಡಿಸೆಂಬರ್ 11 ರಿಂದ 15ರ ವರೆಗೆ ನಡೆಯಲಿರುವ 2ನೇ ಟೆಸ್ಟ್ ಪಂದ್ಯ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಿರಲಿದೆ. ಈ ಮೂಲಕ ಭಾರತ ಮೊದಲ ಬಾರಿಗೆ ವಿದೇಶದಲ್ಲಿ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಡಲಿದೆ. ಟೆಸ್ಟ್ ಸರಣಿ ಬಳಿಕ ಜನವರಿ 12 ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. 

ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಲಿದೆ. ಅಕ್ಟೋಬರ್ 11 ರಿಂದ 17 ವರೆಗೆ 3 ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ. ಆದರೆ ಕೊರೋನೈ ವೈರಸ್ ನಡುವೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಹಾಗೂ ಕ್ರಿಕೆಟ್ ಆಯೋಜನೆ ಇದೀಗ ದೊಡ್ಡ ಸವಾಲಾಗಿದೆ.

ಭಾರತ-ಆಸ್ಟ್ರೇಲಿಯಾ ಟಿ20
1ನೇ ಟಿ20: ಅಕ್ಟೋಬರ್ 11, ಬ್ರಿಸ್ಬೇನ್
2ನೇ ಟಿ20:ಅಕ್ಟೋಬರ್ 14, ಕ್ಯಾನಬೆರಾ
3ನೇ ಟಿ20:ಅಕ್ಟೋಬರ್ 17,ಆಡಿಲೇಡ್

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ
1ನೇ ಟೆಸ್ಟ್: ಡಿಸೆಂಬರ್ 2, ಬ್ರಿಸ್ಬೇನ್
2ನೇ ಟೆಸ್ಟ್: ಡಿಸೆಂಬರ್ 11, ಆಡಿಲೇಡ್
3ನೇ ಟೆಸ್ಟ್: ಡಿಸೆಂಬರ್ 26, ಮೆಲ್ಬೋರ್ನ್
4ನೇ ಟೆಸ್ಟ್: ಜನವರಿ 3, ಸಿಡ್ನಿ

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ
1ನೇ ಏಕದಿನ: ಜನವರಿ 12, ಪರ್ತ್
2ನೇ ಏಕದಿನ: ಜನವರಿ 15, ಮೆಲ್ಪೋರ್ನ್
3ನೇ ಏಕದಿನ: ಜನವರಿ 17, ಸಿಡ್ನಿ

Follow Us:
Download App:
  • android
  • ios