#DhoniRetires vs #DhoniNeverTires: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್..!
ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಅಗ್ರಗಣ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬುಧವಾರ ರಾತ್ರಿ ಧೋನಿ ಕುರಿತಾಗಿ ಎರಡು ಹ್ಯಾಷ್‌ಟ್ಯಾಗ್‌ಗಳು ಸಾಕಷ್ಟು ಟ್ರೆಂಡಿಂಗ್ ಆಗಿದ್ದವು. ಕೊರೋನಾದಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿರುವ ಬೆನ್ನಲ್ಲೇ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಆರಂಭವಾಗಿವೆ. 2019ರ ಏಕದಿನ ವಿಶ್ವಕಪ್ ಮುಕ್ತಾಯವಾದ ದಿನದಿಂದ ಧೋನಿ ಕ್ರಿಕೆಟ್ ಭವಿಷ್ಯ ಏನು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.
ಕೆಲವರು ಧೋನಿ ರಿಟೈರ್ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದರೆ, ಧೋನಿ ಅಭಿಮಾನಿಗಳು, ಧೋನಿ ಎಂದಿಗೂ ದಣಿಯುವುದಿಲ್ಲ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ #DhoniNeverTires ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ಧೋನಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೆಂಡತಿ-ಮಗಳೊಂದಿಗೆ ನೆಮ್ಮದಿಯ ಜೀವನ ಲೀಡ್ ಮಾಡ್ತಾ ಇದ್ದಾರೆ. ಈ ಕುರಿಯಾದ ಒಂದಷ್ಟು ಫೋಟೋ ಝಲಕ್ ಇಲ್ಲಿದೆ ನೋಡಿ.
ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ತಮ್ಮ ನಾಯಕನ ಬೆನ್ನಿಗೆ ನಿಂತಿದೆ. ಧೋನಿ ನಿವೃತ್ತಿ ಬಗೆಗಿನ ಎಲ್ಲಾ ಗಾಳಿ ಸುದ್ದಿಗಳನ್ನು CSK ತಳ್ಳಿ ಹಾಕಿದೆ. ಮಾಹಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ.
ಧೋನಿ ಅಭಿಮಾನಿಗಳು ಮಾಜಿ ನಾಯಕನ ಸಾಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು(ಐಸಿಸಿ ಟಿ20, ಏಕದಿನ ವಿಶ್ವಕಪ್ ಹಾಗೂ ಆಂಪಿಯನ್ಸ್ ಟ್ರೋಫಿ) ಗೆದ್ದ ಏಕೈಕ ನಾಯಕ ಧೋನಿ.
MS ಧೋನಿಯ ನಾಯಕತ್ವದ ಜತೆಗೆ ಅವರ ಸರಳತೆ ಕೂಡಾ ಅವರ ಮೇಲೆ ಅಭಿಮಾನಿಗಳಿಗೆ ಇನ್ನಷ್ಟು ಗೌರವ ಹೆಚ್ಚುವಂತೆ ಮಾಡಿದೆ.
ಧೋನಿ ರಿಟೈರ್ಸ್ ಟ್ರೆಂಡ್ ಮಾಡಿದವರನ್ನು ಹೊಡೆಯಲು ಹುಡುಕುವಂತಿದೆ ಅಭಿಮಾನಿಗಳ ಈ ಪೋಸ್ಟ್.
ಸದ್ಯದಲ್ಲೇ ಧೋನಿ ನಿವೃತ್ತಿಯಾಗಲಿದ್ದಾರೆ. ಅವಿಸ್ಮರಣೀಯ ನೆನಪುಗಳನ್ನು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ಕೆಲವರು .
ಧೋನಿ ರಿಟೈರ್ಸ್ ಟ್ರೆಂಡ್‌ನಿಂದ ಜಗತ್ತು ಏನೂ ಬದಲಾಗಲ್ಲ ಎನ್ನುವುದ ಧೋನಿ ಬೆಂಬಲಿಗರ ಅಚಲವಾದ ನಂಬಿಕೆ.
ಧೋನಿಗೆ ಧೋನಿಯೇ ಸಾಟಿ ಎನ್ನುವುದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಅಂಬೋಣ.
ನಿವೃತ್ತಿಯ ಬಗ್ಗೆ ಧೋನಿ ಮನಸ್ಸಿನಲ್ಲಿ ಏನಿದೆ ಎನ್ನುವುದು ಧೋನಿ ಬಿಟ್ಟು ಉಳಿದವರಿಗೆ ಯಾರಿಗೂ ಗೊತ್ತಿಲ್ಲ.
ಧೋನಿ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿ ಹರಡಬೇಡಿ, ಆದಷ್ಟು ಬೇಗ ಮೈದಾನಕ್ಕಿಳಿಯಲಿದ್ದಾರೆ ಎನ್ನುವುದು ಅಭಿಮಾನಿಗಳ ಮನವಿ.
ರಾತ್ರಿ 12ರ ಸುಮಾರಿಗೆ ಈ ಎಲ್ಲಾ ಗಾಳಿಸುದ್ದಿಗೆ ಧೋನಿ ಪತ್ನಿ ಸಾಕ್ಷಿ ಬ್ರೇಕ್ ಹಾಕಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲವರ ಮನಸ್ಸು ಹಾಳಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಈ ಟ್ವೀಟ್ ಅಳಿಸಿ ಹಾಕಿದ್ದಾರೆ.