ಕ್ಯಾನ್‌ಬೆರ್ರಾ(ಡಿ.30): ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಉಳಿದೆರಡು ಪಂದ್ಯಗಳಿಗೆ 18 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು,  ಡೇವಿಡ್‌ ವಾರ್ನರ್‌ ತಂಡ ಕೂಡಿಕೊಂಡಿದ್ದಾರೆ. ಡೇವಿಡ್‌ ವಾರ್ನರ್‌ ಮಾತ್ರವಲ್ಲದೇ ಶಾನ್ ಅಬೋಟ್‌ ಹಾಗೂ ವಿಲ್‌ ಪುಕೋವಸ್ಕಿ ಕೂಡಾ ಆಸ್ಟ್ರೇಲಿಯಾ ತಂಡ ಕೂಡಿಕೊಂಡಿದ್ದಾರೆ. 

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಭರ್ಜರಿಯಾಗಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು.

ಸಿಡ್ನಿಯಲ್ಲೇ ನಡೆಯಲಿದೆ ಇಂಡೋ-ಆಸೀಸ್‌ 3ನೇ ಟೆಸ್ಟ್‌ ಪಂದ್ಯ

ಇನ್ನು ಸರಣಿಯಲ್ಲಿ ರನ್‌ ಬರ ಅನುಭವಿಸಿದ ಜೋ ಬರ್ನ್‌ ಉಳಿದೆರಡು ಟೆಸ್ಟ್‌ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಜನವರಿ 07ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ಆಸ್ಟ್ರೇಲಿಯಾ ತಂಡ ಹೀಗಿದೆ:

ಟಿಮ್‌ ಪೈನ್‌(ನಾಯಕ), ಶಾನ್‌ ಅಬೋಟ್, ಪ್ಯಾಟ್ ಕಮಿನ್ಸ್, ಕ್ಯಾಮರೋನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಸ್ ಹ್ಯಾಜಲ್‌ವುಡ್‌, ತ್ರಾವಿಸ್‌ ಹೆಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ನೇಸರ್, ಜೇಮ್ಸ್ ಪ್ಯಾಟಿನ್‌ಸ್ಸನ್, ವಿಲ್ ಫುಕೊವಿಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ವ್ಯಾಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.