Asianet Suvarna News Asianet Suvarna News

ಮನೆಯೊಡೆದ ಸೊಸೆ; ಮಾವನ ಆರೋಪಕ್ಕೆ ಖಡಕ್ ತಿರುಗೇಟು ಕೊಟ್ಟ ಜಡೇಜಾ ಪತ್ನಿ ರಿವಾಬ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕಿ ಹಾಗೂ ರವೀಂದ್ರ ಜಡೇಜಾ ಪತ್ನಿ ರಿವಾಬ ಅವರನ್ನು ಈ ಕುರಿತಂತೆ ಮಾತಿಗೆಳೆಯಲಾಯಿತು. "ನಾವಿಲ್ಲಿ ಯಾಕೆ ಬಂದಿದ್ದೇವೆ ಹೇಳಿ?. ನೀವು ಏನನ್ನು ಕೇಳಬೇಕು ಅಂದುಕೊಂಡಿದ್ದೀರೋ ಅದನ್ನು ನೇರವಾಗಿ ನನ್ನ ಬಳಿಯೇ ಕೇಳಿ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ.

Asked About Accusations By Ravindra Jadeja Father Rivaba Jadeja Stern Response kvn
Author
First Published Feb 12, 2024, 5:01 PM IST

ಸೌರಾಷ್ಟ್ರ(ಫೆ.12): ಭಾರತ ಕ್ರಿಕೆಟ್‌ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ. ಮಾಧ್ಯಮವೊಂದರಲ್ಲಿ ರವೀಂದ್ರ ಜಡೇಜಾ ಅವರ ತಂದೆ ನೀಡಿದ ಸಂದರ್ಶನದಲ್ಲಿ ಸೊಸೆ ರಿವಾಬ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ಸಂದರ್ಶನದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಇದೀಗ ತಮ್ಮ ಮಾವ ಮಾಡಿರುವ ಗಂಭೀರ ಆರೋಪದ ಕುರಿತಂತೆ ಕೇಳಲಾದ ಪ್ರಶ್ನೆಗೆ ರವೀಂದ್ರ ಜಡೇಜಾ ಪತ್ನಿ ಹಾಗೂ ಬಿಜೆಪಿ ಶಾಸಕಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕಿ ಹಾಗೂ ರವೀಂದ್ರ ಜಡೇಜಾ ಪತ್ನಿ ರಿವಾಬ ಅವರನ್ನು ಈ ಕುರಿತಂತೆ ಮಾತಿಗೆಳೆಯಲಾಯಿತು. "ನಾವಿಲ್ಲಿ ಯಾಕೆ ಬಂದಿದ್ದೇವೆ ಹೇಳಿ?. ನೀವು ಏನನ್ನು ಕೇಳಬೇಕು ಅಂದುಕೊಂಡಿದ್ದೀರೋ ಅದನ್ನು ನೇರವಾಗಿ ನನ್ನ ಬಳಿಯೇ ಕೇಳಿ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ.

ರವೀಂದ್ರ ಜಡೇಜಾ ಬಾಳಲ್ಲಿ ಬೆಂಕಿ ಬಿರುಗಾಳಿ..! ತಂದೆಯಿಂದ ಮಗನನ್ನ ದೂರ ಮಾಡಿದ್ರಾ ಸೊಸೆ..?

ಜಡೇಜಾ ತಂದೆ ಆರೋಪವೇನು?

ಸದ್ಯ ನಮಗೂ ಮತ್ತು ಜಡೇಜಾಗೂ ಯಾವುದೇ ಮಾತುಕತೆ ಇಲ್ಲ. ನಾವು ಅವರಿಗೆ ಫೋನ್ ಮಾಡಲ್ಲ. ಅವ್ರು ನಮಗೆ ಪೋನ್ ಮಾಡಲ್ಲ. ಜಡೇಜಾ ಪತ್ನಿ ಜೊತೆ ಜಾಮ್‌ನಗರದಲ್ಲಿರೋ ಬಂಗಲೆಯಲ್ಲಿ ವಾಸವಿದ್ದಾರೆ. ನಾವು ಬೇರೆ ಕಡೆ ಇದ್ದೇವೆ. ಜಡೇಜಾ ಮದುವೆಯಾದ ಎರಡ್ಮೂರು ತಿಂಗಳಿಗೇನೆ ನಮ್ಮ ಕುಟುಂಬದಲ್ಲಿ ಒಡಕು ಮೂಡಿತ್ತು. ರಿವಾಬಾ ಎಲ್ಲಾ ಆಸ್ತಿಯನ್ನ ತನ್ನೆಸರಿಗೆ ಮಾಡಬೇಕು ಅಂತ ಜಡೇಜಾಗೆ ಹೇಳಿದ್ಳು. ರಿವಾಬಾ, ಜಡೇಜಾಗೆ ಅದೇನು ಮ್ಯಾಜಿಕ್ ಮಾಡಿದ್ದಾಳೋ ಗೊತ್ತಿಲ್ಲ. ಜಡೇಜಾ ಕ್ರಿಕೆಟರ್ ಆಗದೇ ಇದ್ರೆ ಚೆನ್ನಾಗಿರ್ತಿತ್ತು, ನಮಗೆ ಈ ಪರಿಸ್ಥಿತಿ ಬರ್ತಿರಲಿಲ್ಲ ಅಂತ ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿಂಗ್ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. 

ರಾಜ್‌ಕೋಟ್‌ ಟೆಸ್ಟ್‌ನಲ್ಲಿ 500 ವಿಕೆಟ್ ಕ್ಲಬ್ ಸೇರಲು ರವಿಚಂದ್ರನ್ ಅಶ್ವಿನ್ ರೆಡಿ

ಇನ್ನು ತನ್ನ ಹೆಂಡತಿ ವಿರುದ್ಧ ತಂದೆ ಮಾಡಿರೋ ಆರೋಪಗಳಿಗೆ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ನನ್ನ ತಂದೆಯ ಇಂಟರ್‌ವ್ಯೂವ್‌ ಸ್ಕ್ರಿಪ್ಟೆಡ್ ಅಂತ ಟ್ವಿಟರ್ನಲ್ಲಿ ಪೋಸ್ಟ್‌ ಮಾಡಿರೋ ಜಡೇಜಾ, ಇಂಟರ್ವ್ಯೂವ್ನಲ್ಲಿ ಹೇಳಿರೋದೆಲ್ಲಾ ಶುದ್ಧ ಸುಳ್ಳು, ಆ ಮಾತುಗಳಿಗೆ ಯಾವುದೇ ಅರ್ಥ ಇಲ್ಲ. ನನ್ನ ಪತ್ನಿಯ ಘನತೆಯನ್ನ ಹಾಳು ಮಾಡೋ ಹುನ್ನಾರ ಇದರ ಹಿಂದೆ ಅಡಗಿದೆ. ಇದು ಒಳ್ಳಯೆದಲ್ಲ, ನಾನು ಅದನ್ನ ತೀವ್ರವಾಗಿ ಖಂಡಿಸುತ್ತೇನೆ. ನಾನು ಹಲವು ವಿಷಯಗಳನ್ನ ಹೇಳಬಹುದು. ಆದ್ರೆ, ಹೇಳದೇ ಇದ್ರೇನೆ ಒಳ್ಳೆಯದು ಅಂತ ಸುಮ್ಮನಿದ್ದೇನೆ ಅಂತ ಜಡೇಜಾ ಟ್ವೀಟ್ ಮಾಡಿದ್ದರು.
 

Follow Us:
Download App:
  • android
  • ios