Asianet Suvarna News Asianet Suvarna News

ರವೀಂದ್ರ ಜಡೇಜಾ ಬಾಳಲ್ಲಿ ಬೆಂಕಿ ಬಿರುಗಾಳಿ..! ತಂದೆಯಿಂದ ಮಗನನ್ನ ದೂರ ಮಾಡಿದ್ರಾ ಸೊಸೆ..?

ಜಡೇಜಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಆದ್ರೆ, ಈ ಸಂಭ್ರಮದಲ್ಲಿರೋವಾಗ್ಲೇ, ಜಡ್ಡು ಪರ್ಸ್ನಲ್ ಲೈಫಲ್ಲಿ ಬೆಂಕಿ ಬಿರುಗಾಳಿ ಎದ್ದಿದೆ. ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಜಡೇಜಾರ ತಂದೆ ಅನಿರುದ್ಧ್ ಸಿಂಗ್, ಜಡೇಜಾ ಪತ್ನಿ ರಿವಾಬಾ ವಿರುದ್ಧ ಸಿಡಿದೆದಿದ್ದಾರೆ. ಸೊಸೆಯಿಂದ ನಮ್ಮನೆ ನಮ್ಮದಿ ಹಾಳಾಗಿದೆ ಅಂತ ಆರೋಪಿಸಿದ್ದಾರೆ. 

Ravindra Jadeja responds to fathers Allegation call it an attempt to tarnish wife Rivaba image kvn
Author
First Published Feb 10, 2024, 12:56 PM IST

ಬೆಂಗಳೂರು(ಫೆ.10) ಒಂದೆಡೆ ವಿರಾಟ್ ಕೊಹ್ಲಿ ಪರ್ಸ್ನಲ್ ಲೈಫಲ್ಲಿ ಏನಾಗ್ತಿದೆ. ಕೊಹ್ಲಿ ಕ್ರಿಕೆಟ್ನಿಂದ ದೂರ ಉಳಿದಿರೋದ್ಯಾಕೆ ಅನ್ನೋದೆ ಗೊತ್ತಿಲ್ಲ. ಮತ್ತೊಂದೆಡೆ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನ ಬಾಳಲ್ಲಿ ಬೆಂಕಿ ಬಿರುಗಾಳಿ ಎದ್ದಿದೆ. ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಯಾರು ಆ ಆಟಗಾರ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ ಗೊತ್ತಾಗುತ್ತೆ. 

ತಂದೆಯಿಂದ ಮಗನನ್ನ ದೂರ ಮಾಡಿದ್ರಾ ಸೊಸೆ..? 

ರವೀಂದ್ರ ಜಡೇಜಾ..! ಸದ್ಯ ವಿಶ್ವಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸೋ ಪ್ಲೇಯರ್. ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡೋ ಫೈಟರ್.ಕ್ಷಣಾರ್ಧದಲ್ಲಿ ಓವರ್ ಕಂಪ್ಲೀಟ್ ಮಾಡೋ ಕ್ವಿಕ್ ಸ್ಪಿನ್ನರ್. ಹಲವು ಪಂದ್ಯಗಳಲ್ಲಿ ಭಾರತಕ್ಕೆ  ಗೆಲುವು ತಂದುಕೊಟ್ಟ ಮ್ಯಾಚ್ ವಿನ್ನರ್. ಇಂತಹ ಅದ್ಭುತ ಆಟಗಾರ ಅಂತಾ ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 15 ವರ್ಷಗಳಾಗಿವೆ. 

ಇಂಗ್ಲೆಂಡ್ ಎದುರಿನ ಕೊನೆಯ 3 ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ; ಕೊಹ್ಲಿ, ಅಯ್ಯರ್ ಔಟ್, RCB ಕ್ರಿಕೆಟಿಗನಿಗೆ ಜಾಕ್‌ಪಾಟ್

ಯೆಸ್, ಜಡೇಜಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಆದ್ರೆ, ಈ ಸಂಭ್ರಮದಲ್ಲಿರೋವಾಗ್ಲೇ, ಜಡ್ಡು ಪರ್ಸ್ನಲ್ ಲೈಫಲ್ಲಿ ಬೆಂಕಿ ಬಿರುಗಾಳಿ ಎದ್ದಿದೆ. ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಜಡೇಜಾರ ತಂದೆ ಅನಿರುದ್ಧ್ ಸಿಂಗ್, ಜಡೇಜಾ ಪತ್ನಿ ರಿವಾಬಾ ವಿರುದ್ಧ ಸಿಡಿದೆದಿದ್ದಾರೆ. ಸೊಸೆಯಿಂದ ನಮ್ಮನೆ ನಮ್ಮದಿ ಹಾಳಾಗಿದೆ ಅಂತ ಆರೋಪಿಸಿದ್ದಾರೆ. 

ಸದ್ಯ ನಮಗೂ ಮತ್ತು ಜಡೇಜಾಗೂ ಯಾವುದೇ ಮಾತುಕತೆ ಇಲ್ಲ. ನಾವು ಅವರಿಗೆ ಫೋನ್ ಮಾಡಲ್ಲ. ಅವ್ರು ನಮಗೆ ಪೋನ್ ಮಾಡಲ್ಲ. ಜಡೇಜಾ ಪತ್ನಿ ಜೊತೆ ಜಾಮ್‌ನಗರದಲ್ಲಿರೋ ಬಂಗಲೆಯಲ್ಲಿ ವಾಸವಿದ್ದಾರೆ. ನಾವು ಬೇರೆ ಕಡೆ ಇದ್ದೇವೆ. ಜಡೇಜಾ ಮದುವೆಯಾದ ಎರಡ್ಮೂರು ತಿಂಗಳಿಗೇನೆ ನಮ್ಮ ಕುಟುಂಬದಲ್ಲಿ ಒಡಕು ಮೂಡಿತ್ತು. ರಿವಾಬಾ ಎಲ್ಲಾ ಆಸ್ತಿಯನ್ನ ತನ್ನೆಸರಿಗೆ ಮಾಡಬೇಕು ಅಂತ ಜಡೇಜಾಗೆ ಹೇಳಿದ್ಳು. ರಿವಾಬಾ, ಜಡೇಜಾಗೆ ಅದೇನು ಮ್ಯಾಜಿಕ್ ಮಾಡಿದ್ದಾಳೋ ಗೊತ್ತಿಲ್ಲ. ಜಡೇಜಾ ಕ್ರಿಕೆಟರ್ ಆಗದೇ ಇದ್ರೆ ಚೆನ್ನಾಗಿರ್ತಿತ್ತು, ನಮಗೆ ಈ ಪರಿಸ್ಥಿತಿ ಬರ್ತಿರಲಿಲ್ಲ ಅಂತ ಅನಿರುದ್ಧ್ ಸಿಂಗ್ ಹೇಳಿದ್ದಾರೆ. 

ಪತ್ನಿ ಪರ ನಿಂತ ಆಲ್ರೌಂಡರ್, ತಂದೆಗೆ ಕೌಂಟರ್..!

ಇನ್ನು ತನ್ನ ಹೆಂಡತಿ ವಿರುದ್ಧ ತಂದೆ ಮಾಡಿರೋ ಆರೋಪಗಳಿಗೆ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ನನ್ನ ತಂದೆಯ ಇಂಟರ್‌ವ್ಯೂವ್‌ ಸ್ಕ್ರಿಪ್ಟೆಡ್ ಅಂತ ಟ್ವಿಟರ್ನಲ್ಲಿ ಪೋಸ್ಟ್‌ ಮಾಡಿರೋ ಜಡೇಜಾ, ಇಂಟರ್ವ್ಯೂವ್ನಲ್ಲಿ ಹೇಳಿರೋದೆಲ್ಲಾ ಶುದ್ಧ ಸುಳ್ಳು, ಆ ಮಾತುಗಳಿಗೆ ಯಾವುದೇ ಅರ್ಥ ಇಲ್ಲ. ನನ್ನ ಪತ್ನಿಯ ಘನತೆಯನ್ನ ಹಾಳು ಮಾಡೋ ಹುನ್ನಾರ ಇದರ ಹಿಂದೆ ಅಡಗಿದೆ. ಇದು ಒಳ್ಳಯೆದಲ್ಲ, ನಾನು ಅದನ್ನ ತೀವ್ರವಾಗಿ ಖಂಡಿಸುತ್ತೇನೆ. ನಾನು ಹಲವು ವಿಷಯಗಳನ್ನ ಹೇಳಬಹುದು. ಆದ್ರೆ, ಹೇಳದೇ ಇದ್ರೇನೆ ಒಳ್ಳೆಯದು ಅಂತ ಸುಮ್ಮನಿದ್ದೇನೆ ಅಂತ ಜಡೇಜಾ ಟ್ವೀಟ್ ಮಾಡಿದ್ದಾರೆ. 

ಕೊಹ್ಲಿ-ಅನುಷ್ಕಾ 2ನೇ ಮಗು ನಿರೀಕ್ಷೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ, ಎಬಿಡಿ ಯು ಟರ್ನ್!

ಜಡೇಜಾ ಕುಟಂಬದ ಕಲಹ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಇನ್ನು ಜಡೇಜಾ 2016ರಲ್ಲಿ ರಿವಾಬಾರನ್ನ ಮದುವೆಯಾದ್ರು. 2022ರಲ್ಲಿ ನಡೆದ ಗುಜರಾತ್ ಅಸೆಂಬ್ಲಿ ಎಲೆಕ್ಷನ್ನಲ್ಲಿ ರಿವಾಬಾ ಬಿಜೆಪಿ ಕಡೆಯಿಂದ ಸ್ಪರ್ಧಿಸಿ MLA ಆಗಿ ಆಯ್ಕೆಯಾದ್ರು. 

ಕಳೆದ ವರ್ಷ IPL ಫೈನಲ್ನಲ್ಲಿ ಜಡೇಜಾ ಅಬ್ಬರಿಸಿದ್ರು. ಅದ್ಭುತ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ಗೆ ಕಪ್ ಗೆಲ್ಲಿಸಿಕೊಟ್ಟಿದ್ರು. ಮ್ಯಾಚ್ ನಂತರ ಜಡೇಜಾ ಪತ್ನಿ ಜಡೇಜಾರನ್ನ ಅಪ್ಪಿಕೊಂಡು ಅಭಿನಂದಿಸಿದ್ರು. ಆವತ್ತು ಅದನ್ನ ನೋಡಿದ್ದ ಫ್ಯಾನ್ಸ್, ಜಡೇಜಾ ಇಂತಹ ಹೆಂಡತಿಯನ್ನ ಪಡೆಯೋದಕ್ಕೆ ಪುಣ್ಯ ಮಾಡಿದ್ರು  ಅಂತ ಕೊಂಡಾಡಿದ್ರು. ಅದೇ ಫ್ಯಾನ್ಸ್  ಇಂದು ಜಡೇಜಾ ಪತ್ನಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅದೇನೆ ಇರಲಿ, ಜಡೇಜಾ ಫ್ಯಾಮಿಲಿಯ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿ. ತಂದೆ-ಮಗ ಒಂದಾಗಲಿ ಅನ್ನೋದೆ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios