2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯಟೂರ್ನಿ ಮುಂದೂಡುವ ಪ್ರಸ್ತಾಪ ನಮ್ಮ ಮುಂದಿಲ್ಲವೆಂದ ಎಸಿಸಿಪಾಕಿಸ್ತಾನ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟು
ನವದೆಹಲಿ(ಮೇ.02): ಪಾಕಿಸ್ತಾನದಲ್ಲಿ ನಡೆಯಬೇಕಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಮುಂದೂಡಿಕೆಯಾಗಬಹುದು ಅಥವಾ ಟೂರ್ನಿ ರದ್ದುಗೊಳಿಸಿ ಬೇರೆ ರೀತಿ ಟೂರ್ನಿ ಆಯೋಜಿಸಬಹುದು ಎಂಬ ವರದಿಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮೂಲಗಳು ತಳ್ಳಿಹಾಕಿದ್ದು, ಇಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಟೂರ್ನಿಯನ್ನು ಪಾಕಿಸ್ತಾನದಲ್ಲೇ ನಡೆಸಿ, ಭಾರತದ ಪಂದ್ಯಗಳನ್ನು ಬೇರೆ ದೇಶದಲ್ಲಿ ನಡೆಸಲು ಉದ್ದೇಶಿಸಿತ್ತು. ಆದರೆ ಈ ಬಗ್ಗೆ ಎಸಿಸಿ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ನಡುವೆ ಸಂಪೂರ್ಣ ಟೂರ್ನಿಯನ್ನು ಬೇರೆ ದೇಶದಲ್ಲಿ ಆಯೋಜಿಸಲು ಪಿಸಿಬಿ ಸಿದ್ಧವಿಲ್ಲ. ಹೀಗಾಗಿ ಟೂರ್ನಿ ಮುಂದೂಡಿಕೆ ಅಥವಾ ರದ್ದಾಗಲಿದೆ ಎಂದು ಕೆಲ ಪಾಕ್ ಮಾಧ್ಯಗಳಲ್ಲಿ ವರದಿಯಾಗಿತ್ತು.
ಸಸೆಕ್ಸ್ ತಂಡದ ಪರ ಒಟ್ಟಿಗೇ ಆಡಲಿರುವ ಸ್ಮಿತ್-ಪೂಜಾರ
ಈಸ್ಟ್ ಸಸೆಕ್ಸ್: ಜೂನ್ 7ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಎರಡೂ ತಂಡಗಳ ಪ್ರಮುಖ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಸ್ಟೀವ್ ಸ್ಮಿತ್ ಇಂಗ್ಲೆಂಡ್ ಕೌಂಟಿ ತಂಡ ಸಸೆಕ್ಸ್ ಪರ ಒಟ್ಟಿಗೇ ಆಡಲಿದ್ದಾರೆ. ಸದ್ಯ ಪೂಜಾರ ಡಿವಿಶನ್ 2 ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸಸೆಕ್ಸ್ ತಂಡವನ್ನು ಮುನ್ನಡೆಸುತ್ತಿದ್ದು, 5 ಇನ್ನಿಂಗ್್ಸಗಳಲ್ಲಿ 2 ಶತಕ ಸೇರಿ 332 ರನ್ ಕಲೆಹಾಕಿದ್ದಾರೆ. ಸ್ಮಿತ್ ಶೀಘ್ರವೇ ತಂಡ ಸೇರ್ಪಡೆಯಾಗಿ ಮೇ 4ರ ಬಳಿಕ 3 ಪಂದ್ಯಗಳನ್ನಾಡಲಿದ್ದಾರೆ.
ಈ ಐಪಿಎಲ್‌ನಲ್ಲಿ 20 ಬಾರಿ 200+ ಮೊತ್ತ: ದಾಖಲೆ!
ನವದೆಹಲಿ: 16ನೇ ಆವೃತ್ತಿಯ ಐಪಿಎಲ್ ಹಲವು ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಅತಿಹೆಚ್ಚು 200+ ಮೊತ್ತವನ್ನು ಕಂಡ ಆವೃತ್ತಿ ಎನ್ನುವ ದಾಖಲೆ ನಿರ್ಮಾಣವಾಗಿದೆ. ಮೊದಲ 40 ಪಂದ್ಯಗಳಲ್ಲೇ 20 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದ್ದು, 2022ರ ದಾಖಲೆ ಉತ್ತಮಗೊಂಡಿದೆ.
IPL 2023 ಆರ್‌ಸಿಬಿ ದಾಳಿಗೆ ಲಖನೌ ಉಡೀಸ್, ಗೆಲುವಿನ ಜೊತೆಗೆ ಗಂಭೀರ್‌ಗೆ ಠಕ್ಕರ್ ನೀಡಿದ ವಿರಾಟ್!
ಕಳೆದ ಆವೃತ್ತಿಯಲ್ಲಿ ಒಟ್ಟು 18 ಬಾರಿ ತಂಡಗಳು 200ಕ್ಕೂ ಹೆಚ್ಚು ರನ್ ಗಳಿಸಿದ್ದವು. ಇನ್ನು 7 ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ರನ್ ದಾಖಲಾಗಿದೆ. 2022ರಲ್ಲಿ 5 ಪಂದ್ಯಗಳಲ್ಲಿ ಈ ಮೈಲಿಗಲ್ಲು ಕಂಡು ಬಂದಿತ್ತು. ಇದೇ ವೇಳೆ ಈ ಐಪಿಎಲ್‌ನಲ್ಲಿ ತಂಡಗಳು ಸರಾಸರಿ 8.91ರ ರನ್‌ರೇಟ್‌ನಲ್ಲಿ ರನ್ ಕಲೆಹಾಕುತ್ತಿದ್ದು, ಇದೂ ದಾಖಲೆ ಎನಿಸಿದೆ. 2018ರಲ್ಲಿ 8.64ರ ರನ್‌ರೇಟ್‌ನಲ್ಲಿ ತಂಡಗಳು ರನ್ ಗಳಿಸಿದ್ದವು.
ಐಪಿಎಲ್‌ನಲ್ಲಿ ಗರಿಷ್ಠ ಮೊತ್ತ
ತಂಡ ವಿರುದ್ಧ ರನ್ ವರ್ಷ
ಆರ್‌ಸಿಬಿ vs ಪುಣೆ 263/5 - 2013
ಲಖನೌ vs ಪಂಜಾಬ್ 257/5 - 2023
ಆರ್‌ಸಿಬಿ vs ಗುಜರಾತ್ 248/3 - 2016
ಚೆನ್ನೈ vs ರಾಜಸ್ಥಾನ 246/5 - 2010
ಕೆಕೆಆರ್ vs ಪಂಜಾಬ್ 245/6 - 2018
