Asianet Suvarna News Asianet Suvarna News

Asia Cup ಟಾಸ್ ಗೆದ್ದ ಹಾಂಕಾಂಗ್, ಭಾರತ ತಂಡದಲ್ಲಿ ಮಹತ್ವದ 1 ಬದಲಾವಣೆ!

ಟೀಂ ಇಂಡಿಯಾ ಇಂದು ಹಾಂಕಾಂಗ್ ವಿರುದ್ದ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕ್ ಕಾಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

Asia Cup T20 2022 Hong Kong wins toss and opt bowl first against Team India ckm
Author
First Published Aug 31, 2022, 7:05 PM IST

ದುಬೈ(ಆ.31):  ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಹಾಂಕಾಂಗ್ ಹೋರಾಟ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕ್ ಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಮಹತ್ವದ ಒಂದು ಬದಲಾವಣೆ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ರಿಷಬ್ ಪಂತ್ ತಂಡ ಸೇರಿಕೊಂಡಿದ್ದಾರೆ.  ಹಾರ್ದಿಕ್ ಪಾಂಡ್ಯ ಅವಶ್ಯಕತೆ ತಂಡಕ್ಕೆ ಹೆಚ್ಚಿದೆ. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.  ಏಷ್ಯಾಕಪ್ ಅರ್ಹತಾ ಸುತ್ತಿನಲ್ಲಿ ಯುಎಇ ವಿರುದ್ದ ಆಡಿದ ತಂಡವನ್ನೇ ಇಂದು ಭಾರತದ ವಿರುದ್ದ ಕಣಕ್ಕಿಳಿಸಲಾಗಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜುವೇಂದ್ರ ಚಹಾಲ್, ಅರ್ಶದೀಪ್ ಸಿಂಗ್

ಪಾಕ್ ವಿರುದ್ಧ ಅಬ್ಬರಿಸಿದ ಹಾರ್ದಿಕ್ ಪಾಂಡ್ಯಗೆ ಗುಡ್ ನ್ಯೂಸ್, ರ‍್ಯಾಂಕಿಂಗ್‌ನಲ್ಲಿ ಜಿಗಿತ!

ಏಷ್ಯಾಕಪ್ 2022 ಟೂರ್ನಿಯಲ್ಲಿ ಹಾಂಕಾಂಗ್(Hong Kong) ತಂಡಕ್ಕೆ ಇದು ಮೊದಲ ಪಂದ್ಯ. ಆದರೆ ಭಾರತ(Team india) ಮೊದಲ ಪಂದ್ಯದಲ್ಲಿ ಪಾಕಿಸ್ತಾನ(IND vs PAK) ಮಣಿಸಿ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ದ ಭಾರತ 5 ವಿಕೆಟ್ ಗೆಲುವು ದಾಖಲಿಸಿತ್ತು. ಭಾರತ ಹಾಗೂ ಹಾಂಕಾಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಎರಡು ಭಾರಿ ಮುಖಾಮುಖಿಯಾಗಿದೆ. 2008 ಹಾಗೂ 2018ರಲ್ಲಿ ಹಾಂಕಾಂಗ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಈ ಎರಡೂ ಪಂದ್ಯಗಳು ಏಕದಿನ ಮಾದರಿಯಲ್ಲಿ ನಡೆದಿತ್ತು.  ಕಳೆದ 14 ವರ್ಷಗಳಲ್ಲಿ ಹಾಂಕಾಂಗ್‌ ತಂಡಕ್ಕೆ ಭಾರತ ವಿರುದ್ಧ 3ನೇ ಪಂದ್ಯ ಇದಾಗಿದೆ.

ಏಷ್ಯಾಕಪ್(Asia Cup 2022) ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಾಂಕಾಂಗ್ ಏಷ್ಯಾಕಪ್ ಟೂರ್ನಿಗೆ ಪ್ರವೇಶ ಪಡೆದಿದೆ. ಯುಎಇ ಹಾಗೂ ಕುವೈಟ್ ತಂಡವನ್ನು ಹಿಂದಿಕ್ಕಿದ ಹಾಂಕಾಂಗ್ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಪಡೆದಿತ್ತು. ಇದೀಗ ಭಾರತ ವಿರುದ್ಧ ಪ್ರಬಲ ಹೋರಾಟ ನೀಡುವ ವಿಶ್ವಾಸ ಹೊಂದಿದೆ.

 ಗಣೇಶನೊಂದಿಗೆ ಡೇವಿಡ್‌ ವಾರ್ನರ್ ಪೋಸ್ಟ್‌, ಭಾರತದ ಅಭಿಮಾನಿಗಳು ಫುಲ್‌ ಖುಷ್‌!

ಟೀಂ ಇಂಡಿಯಾ ಸದ್ಯ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ. ವಿರಾಟ್ ಕೊಹ್ಲಿ(Virat Kohli Form) ಕಳೆದ ಪಂದ್ಯದಲ್ಲಿ 35 ರನ್ ಸಿಡಿಸಿದರೂ ಪೂರ್ಣ ಪ್ರಮಾಣದಲ್ಲಿ ಕಮ್‌ಬ್ಯಾಕ್ ಮಾಡಿಲ್ಲ. ಕೆಎಲ್ ರಾಹುಲ್(KL Rahul) ಲಯ ಕಂಡುಕೊಂಡಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ವಿಶ್ವಾಸ ಮೂಡಿಸಿಲ್ಲ. ಹೀಗಾಗಿ ಹಾಂಕಾಂಗ್ ವಿರುದ್ಧದ ಪಂದ್ಯ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ಲಯ ಕಂಡುಕೊಳ್ಳಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉತ್ತಮ ಪಂದ್ಯವಾಗಿದೆ. 

ಲೀಗ್ ಹಂತದಲ್ಲಿ ಟೀಂ ಇಂಡಿಯಾಗಿದು ಕೊನೆಯ ಪಂದ್ಯವಾಗಿದೆ. ಸೆಪ್ಟೆಂಬರ್ 4 ರಿಂದ ಸೂಪರ್ 4 ಹಂತದ ಪಂದ್ಯಗಳು ನಡೆಯಲಿದೆ. ಸೆಪ್ಟೆಂಬರ್ 9 ರವರೆಗೆ ಸೂಪರ್ ಹಂತದ ಪಂದ್ಯಗಳು ನಡೆಯಲಿದೆ. ಸೆಪ್ಟೆಂಬರ್ 11 ರಂದು ಏಷ್ಯಾಕಪ್ 2022ರ ಫೈನಲ್ ಪಂದ್ಯ ನಡೆಯಲಿದೆ. ಸೂಪರ್ 4 ಹಾಗೂ ಫೈನಲ್ ಪಂದ್ಯವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಲೀಗ್ ಹಂತದ ಪಂದ್ಯಗಳು ಶಾರ್ಜಾ ಕ್ರಿಕೆಟ್ ಮೈದಾನ ಹಾಗೂ ದುಬೈ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 

Latest Videos
Follow Us:
Download App:
  • android
  • ios