Ganesh Chaturthi: ಗಣೇಶನೊಂದಿಗೆ ಡೇವಿಡ್‌ ವಾರ್ನರ್ ಪೋಸ್ಟ್‌, ಭಾರತದ ಅಭಿಮಾನಿಗಳು ಫುಲ್‌ ಖುಷ್‌!

ಭಾರತೀಯ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಹಿಡಿದು, ಬಾಲಿವುಡ್‌ನ ಹಿಟ್‌ ಹಾಡುಗಳಿಗೆ ನೃತ್ಯ ಮಾಡುವವರೆಗೆ, ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್, ಸೋಶಿಯಲ್‌ ಮೀಡಿಯಾದಲ್ಲಿ ಭಾರತದ ಉತ್ಸಾಹಿ ಕ್ರಿಕೆಟ್‌ ಅಭಿಮಾನಿಗಳನ್ನು ಅದ್ಭುತವಾಗಿ ರಂಜಿಸುತ್ತಿದ್ದಾರೆ.

David Warner dedicates post to Lord Ganesha Ganesh Chaturthi Indian fans delighted san

ಬೆಂಗಳೂರು (ಆ.31): ಭಾರತದ ಕ್ರಿಕೆಟ್‌ ಅಭಿಮಾನಿಗಳು ಟೀಮ್‌ ಇಂಡಿಯಾದ ಕ್ರಿಕೆಟಿಗರ ಹೊರತಾಗಿ ವಿದೇಶದ ಕ್ರಿಕೆಟಿಗರ ಅಭಿಮಾನಿಗಳಾಗುವದು ಬಹಳ ಕಡಿಮೆ. ಆದರೆ, ಐಪಿಎಲ್‌ ಬಳಿಕ ಇದು ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ಭಾರತದ ಸಂಸ್ಕೃತಿ, ಆಚರಣೆಗಳನ್ನು ಆದರಿಸಿ ಗೌರವ ನೀಡುವ ವಿದೇಶಿ ಕ್ರಿಕೆಟಿಗರನ್ನು ಅಭಿಮಾನಿಯಾಗಿ ಮಾಡಿಕೊಂಡವರಿದ್ದಾರೆ. ಅದರಲ್ಲಿ ಪ್ರಮುಖವಾದವರು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌. ಬಹುಶಃ. ಡೇವಿಡ್‌ ವಾರ್ನರ್‌ಗೆ ಆಸ್ಟ್ರೇಲಿಯಾದಲ್ಲಿ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ ಎನ್ನುವುದು ಗೊತ್ತಿಲ್ಲ. ಭಾರತದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ತವರು ದೇಶಕ್ಕಿಂತ ಹೆಚ್ಚಿದೆ ಎನ್ನುವುದಂತೂ ನಿಜ. ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ನೀಡಿರುವ ಈ ಪ್ರೀತಿಯನ್ನು ಡೇವಿಡ್‌ ವಾರ್ನರ್‌ ಕೂಡ ಜತನದಿಂದ ಕಾಯ್ದುಕೊಂಡಿದ್ದಾರೆ. ಬಾಲಿವುಡ್‌ ಹಾಡುಗಳಿಗೆ ಇಡೀ ಕುಟುಂಬದೊಂದಿಗೆ ನೃತ್ಯ ಮಾಡುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಡೇವಿಡ್‌ ವಾರ್ನರ್‌, ಭಾರತದ ಹಬ್ಬಗಳ ಸಮಯದಲ್ಲೂ ವಿಶೇಷವಾಗಿ ಶುಭ ಕೋರುತ್ತಾರೆ. ಈಗ ಮತ್ತೊಮ್ಮೆ ಅದೇ ಕಾರಣದಿಂದಾಗಿ ಡೇವಿಡ್‌ ವಾನರ್ನರ್‌ ಸುದ್ದಿಯಾಗಿದ್ದಾರೆ. ಇಡೀ ಭಾರತದಲ್ಲಿ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡುತ್ತಿರುವ ವೇಳೆ, ಭಾರತದ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಕೋರಲು ಡೇವಿಡ್‌ ವಾರ್ನರ್‌ ಮರೆಯಲಿಲ್ಲ.

ಮೋದಕ ಪ್ರಿಯ ಗಣೇಶನಿಗೆ ಪ್ರಾರ್ಥನೆ ಮಾಡುವಂತಿರುವ ಫೋಟೋಶಾಪ್ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಡೇವಿಡ್‌ ವಾರ್ನರ್‌ ಹಂಚಿಕೊಂಡಿದ್ದಾರೆ. "ನನ್ನ ಎಲ್ಲ ಸ್ನೇಹಿತರಿಗೆ, ಗಣೇಶ ಚತುರ್ಥಿಯ ಶುಭಾಶಯಗಳು. ನಿಮಗೆ ಬಹಳಷ್ಟು ಸಂತೋಷ ಮತ್ತು ಸಂತೋಷದ ಶುಭಾಶಯಗಳು!' ಎಂದು ಬರೆದುಕೊಂಡಿದ್ದು, ಫ್ರೆಂಡ್ಸ್‌, ಫ್ಯಾಮಿಲಿ ಹಾಗೂ ಮೇಟ್ಸ್‌ ಎನ್ನುವ ಟ್ಯಾಗ್‌ಅನ್ನು ಹಾಕಿದ್ದಾರೆ.


ಡೇವಿಡ್‌ ವಾರ್ನರ್‌ ಪ್ರಸ್ತುತ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದಾರೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2-0ಯಿಂದ ಮುಂದಿದೆ. 2ನೇ ಏಕದಿನ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಗಮನಸೆಳೆಯಲು ವಿಫಲರಾಗಿದ್ದಾರೆ. 9 ಎಸೆತಗಳನ್ನು ಎದುರಿಸಿ 13 ರನ್ ಬಾರಿಸಿ ಡೇವಿಡ್‌ ವಾರ್ನರ್‌ ಔಟಾಗಿದ್ದಾರೆ. ಸ್ಟೀವನ್‌ ಸ್ಮಿತ್‌ ಅಜೇಯ 47 ರನ್‌ ಬಾರಿಸಿದರೆ, ಅಲೆಕ್ಸ್‌ ಕ್ಯಾರಿ ಅಜೇಯ 26 ರನ್‌ ಸಿಡಿಸಿದರು. ಇದರಿಂದಾಗಿ ಜಿಂಬಾಬ್ವೆ ನೀಡಿದ 97 ರನ್‌ಗಳ ಗುರಿಯನ್ನು ಪಂದ್ಯ ಮುಗಿಯಲು ಇನ್ನೂ ನಿಗದಿತ ನಾಲ್ಕು ಗಂಟೆಗಳ ಮುಂಚಿತವಾಗಿಯೇ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ್ದ ಡೇವಿಡ್‌ ವಾರ್ನರ್‌ 66 ಎಸೆತಗಳಲ್ಲಿ 57 ರನ್‌ ಸಿಡಿಸಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ ಗೆಲುವು ಸಾಧಿಸಿತ್ತು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಟೌನ್ಸ್‌ವಿಲ್ಲೆಯಲ್ಲಿ ಶನಿವಾರ ನಡೆಯಲಿದೆ.

IPL 2022: ಕೊನೆಗೂ ಸನ್‌ರೈಸರ್ಸ್ ವಿರುದ್ದ ಬೇಸರ ಹೊರಹಾಕಿದ ಡೇವಿಡ್ ವಾರ್ನರ್..!

ರೋಹಿತ್ ಎದ್ದೇಳಿ ಎಂದ ಫ್ಯಾನ್ಸ್‌: ಒಂದೆಡೆ ಡೇವಿಡ್‌ ವಾರ್ನರ್‌ (David Warner) ಗಣೇಶ ಚತುರ್ಥಿಗಾಗಿ (Ganesh Chaturthi) ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ ಟೀಮ್‌ ಇಂಡಿಯಾ ಅಭಿಮಾನಿಗಳು ರೋಹಿತ್ ಶರ್ಮಾ (HitMan)  ಅವರ ಕಾಲೆಳೆದಿದ್ದಾರೆ.  ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ (Maharastra) ದೊಡ್ಡ ಹಬ್ಬವಾಗಿದೆ ಮತ್ತು ರೋಹಿತ್ ಶರ್ಮ ಕೂಡ ಮಹಾರಾಷ್ಟ್ರದವರು. ಆದ್ದರಿಂದ ಶುಭ ಸಂದರ್ಭದಲ್ಲಿ ಭಾರತೀಯ ನಾಯಕನಿಂದ ಯಾವುದೇ ಶುಭಾಶಯದ ಸಂದೇಶ ಸೋಶಿಯಲ್‌ ಮೀಡಿಯಾದಲ್ಲಿ (Social Media) ಪೋಸ್ಟ್‌ ಆಗದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

David Warner: ಈತ ಮಾಡ್ರನ್​​ ಕ್ರಿಕೆಟ್​​ನ ‘ತ್ಯಾಗ’ರಾಜ..!

'ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮ ಯಾಕೆ ರಾಮ ನವಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶಿವರಾತ್ರಿ ಸೇರಿದಂತೆ ಹಿಂದು ಹಬ್ಬಗಳಿಗೆ ವಿಶ್‌ ಮಾಡುವುದನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ, ಬೇರೆ ಧರ್ಮದ ಹಬ್ಬಗಳ ಆಚರಣೆಯ ವಿಶ್‌ ಮಾಡುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ' ಎಂದು ಪ್ರೇಮ್‌ ತಂಗರಾಜ್‌ (@pst_nadar) ಎನ್ನುವವರು ಟ್ವೀಟ್‌ ಮಾಡಿದ್ದಾರೆ. 

Latest Videos
Follow Us:
Download App:
  • android
  • ios