ICC Rankings ಪಾಕ್ ವಿರುದ್ಧ ಅಬ್ಬರಿಸಿದ ಹಾರ್ದಿಕ್ ಪಾಂಡ್ಯಗೆ ಗುಡ್ ನ್ಯೂಸ್!
ಏಷ್ಯಾಕಪ್ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗಾಗಲೇ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದ್ದು, ಹಾರ್ದಿಕ್ ಪಾಂಡ್ಯ ಜಿಗಿತ ಕಂಡಿದ್ದಾರೆ.
ದುಬೈ(ಆ.31): ಏಷ್ಯಾಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅಲ್ರೌಂಡರ್ ಪ್ರದರ್ಶನ ಟೀಂ ಇಂಡಿಯಾಗೆ ವರವಾಗಿದೆ. ಸಂಪೂರ್ಣ ಫಿಟ್ನೆಸ್ ಕಾಯ್ದುಕೊಂಡು ತಂಡಕ್ಕೆ ಮರಳಿರುವ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಪಾಂಡ್ಯ ಪ್ರದರ್ಶನದಿಂದ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 5 ವಿಕೆಟ್ ಗೆಲುವು ದಾಖಲಿಸಿತ್ತು. ಇದೀಗ ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದೆ. ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಬರೋಬ್ಬರಿ 8 ಸ್ಥಾನ ಜಿಗಿತ ಕಂಡಿದ್ದಾರೆ. ಈ ಮೂಲಕ ತಮ್ಮ ಕರಿಯರ್ ಬೆಸ್ಟ್ 5ನೇ ಸ್ಥಾನ ಅಲಂಕರಿಸಿದ್ದಾರೆ. ಇಂಜುರಿಯಿಂದ ಸುದೀರ್ಘ ದಿನಗಳ ಕಾಲ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ 2022ರ ಐಪಿಎಲ್ ಟೂರ್ನಿ ಮೂಲಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಚಾಂಪಿಯನ್ ಕಿರಿಟೀ ತೊಡಿಸಿದ ಹಾರ್ದಿಕ್ ಇದೀಗ ಭಾರತಕ್ಕೆ ಏಷ್ಯಾಕಪ್ ಚಾಂಪಿಯನ್ ಪಟ್ಟ ತೊಡಿಸಲು ಸಜ್ಜಾಗಿದ್ದಾರೆ.
ಐಸಿಸಿ ಆಲ್ರೌಂಡರ್(ICC All Rounder) ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) 5ನೇ ಸ್ಥಾನಕ್ಕೆ ಏರಿರುವುದು ಪಾಂಡ್ಯ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಜುರಿಯಿಂದ ತಂಡದಿಂದ ಹೊರಗುಳಿದಿದ್ದ ಪಾಂಡ್ಯ ತಕ್ಕ ಸಮಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಪಾಂಡ್ಯ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್(Asia Cup 2022) ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. 25 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ಪಾಂಡ್ಯ, ಬ್ಯಾಟಿಂಗ್ ಮೂಲಕ ಕೇವಲ 17 ಎಸೆತದಲ್ಲಿ 33 ರನ್ ಸಿಡಿಸಿ ಟೀಂ ಇಂಡಿಯಾಗೆ(Team India) ರೋಚಕ 5 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಹಾರ್ದಿಕ್ ಪಾಂಡ್ಯ ಪರ್ಫಾಮೆನ್ಸ್ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೂ(T20 World Cup) ಭಾರತ ತಂಡಕ್ಕೆ ಸಹಕಾರಿಯಾಗಿದೆ.
ತಂಡದಿಂದ ಹೆಚ್ಚು ಸಮಯ ದೂರವಿದ್ದರೂ ಸಹ ಆಟಗಾರರು ನನ್ನ ಆಟವನ್ನು ಗೌರವಿಸುತ್ತಾರೆ. ಇದರಿಂದ ನನಗೆ ನನ್ನ ಆಟದಲ್ಲಿ ಇನ್ನಷ್ಟುಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಂಡದ ನಾಯಕ ಮತ್ತು ಆಡಳಿತವು ಉತ್ತಮ ವಾತಾವರಣ ನಿರ್ಮಿಸಿದ್ದು, ಆಟಗಾರರು ಧೈರ್ಯವಾಗಿ ಆಡಬಹುದಾಗಿದೆ ಎಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದರು.
ಟೀಂ ಇಂಡಿಯಾ ರೋಹಿತ್ ಶರ್ಮಾ(Rohit sharma) ಕೂಡ ಹಾರ್ದಿಕ್ ಪಾಂಡ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿರುವ ಪಾಂಡ್ಯ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವೂ ಉತ್ತಮವಾಗಿದೆ. ಇದು ತಂಡಕ್ಕೆ ನೆರವಾಗಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದರು.
ಪಾಕಿಸ್ತಾನ ವಿರುದ್ದ ಹಾರ್ದಿಕ್ ಪಾಂಡ್ಯ 194ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿದ್ದಾರೆ. ಹೀಗಾಗಿ ಪಾಂಡ್ಯ ಇನ್ನು ಏಷ್ಯಾಕಪ್ ಸೂಪರ್ ಓವರ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಿಟ್ನೆಸ್(Fitness) ಗಮನದಲ್ಲಿಟ್ಟು ಪಾಂಡ್ಯಗೆ ವಿಶ್ರಾಂತಿ(Rested) ನೀಡಲಾಗಿದೆ.