Asianet Suvarna News Asianet Suvarna News

Asia Cup 2022 ಕೊನೇ ಓವರ್‌ನಲ್ಲಿ ಡೈರೆಕ್ಟ್‌ ಹಿಟ್‌ ಮಿಸ್‌ ಮಾಡಿದ ಪಂತ್‌, ಟ್ವಿಟರ್‌ನಲ್ಲಿ Miss You MS Dhoni ಟ್ರೆಂಡ್‌!

ಶ್ರೀಲಂಕಾ ವಿರುದ್ಧ ಏಷ್ಯಾಕಪ್‌ ಪಂದ್ಯದ ಕೊನೇ ಓವರ್‌ನಲ್ಲಿ ವಿಕೆಟ್‌ ಕೀಪರ್‌ ರಿಷಭ್‌ ಪಂತ್ ಡೈರೆಕ್ಟ್‌ ಹಿಟ್‌ಅನ್ನು ಯಶಸ್ವಿಯಾಗಿ ಮಾಡಿದ್ದರೆ, ಭಾರತಕ್ಕೆ ಗೆಲುವಿನ ಒಂದು ಸಣ್ಣ ಅವಕಾಶ ಖಂಡಿತಾ ಇತ್ತು. ಆದರೆ, ಪಂತ್‌ ಸ್ಟಂಪ್ಸ್‌ ಮಿಸ್‌ ಮಾಡಿದ್ದರಿಂದ, ಭಾರತದ ಕ್ರಿಕೆಟ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಎಂಎಸ್‌ ಧೋನಿಯನ್ನು ನೆನಪಿಸಿಕೊಂಡಿದ್ದಾರೆ. ಇಂಥಾ ಸಂದರ್ಭದಲ್ಲಿ ಎಂಎಸ್‌ ಧೋನಿ ಮಾಡಿರುವ ಸ್ಟಂಪ್‌ಔಟ್‌ಗಳ ವಿಡಿಯೋಗಳನ್ನು ಹಾಕಿ  #MissYouMSDhoni ಎನ್ನುವ ಹ್ಯಾಶ್‌ಟ್ಯಾಗ್‌ಅನ್ನು ಟ್ರೆಂಡ್‌ ಮಾಡಿದ್ದಾರೆ.
 

Asia Cup Match fans write miss you MS Dhoni on Twitter afterRishabh Pant misses direct hit in final over san
Author
First Published Sep 7, 2022, 2:05 PM IST

ಬೆಂಗಳೂರು (ಸೆ.7):  ಶ್ರೀಲಂಕಾ ವಿರುದ್ಧದ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯ ಬಹಳ ರೋಚಕವಾಗಿ ಮುಕ್ತಾಯ ಕಂಡಿತು. ಕೊನೇ ಎರಡು ಎಸೆತಗಳಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ 2 ರನ್‌ ಬೇಕಿದ್ದವು. ಆದರೆ, 20ನೇ ಓವರ್‌ನ 5ನೇ ಎಸೆತದಲ್ಲಿ ಎರಡು ರನ್‌ ಕದಿಯುವ ಮೂಲಕ ಶ್ರೀಲಂಕಾ ತಂಡ ಪಂದ್ಯದಲ್ಲಿ ಗೆಲುವು ಕಂಡಿತು. ಆದರೆ, ಈ ಅವಳಿ ರನ್‌ ಕದಿಯುವ ವೇಳೆ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ಡೈರೆಕ್ಟ್‌ ಹಿಟ್‌ ಮಾಡಿದ್ದಲ್ಲಿ, ಖಂಡಿತವಾಗಿ ಪಂದ್ಯದ ಫಲಿತಾಂಶ ಬೇರೆ ಆಗುವ ಸಾಧ್ಯತೆಗಳಿದ್ದವು. ಅದರೆ, ರಿಷಭ್‌ ಪಂತ್‌ ಡೆರೆಕ್ಟ್‌ ಹಿಟ್‌ ಮಾಡಲು ಪ್ರಯತ್ನಿಸಿದರಾದರೂ, ಅದು ಸ್ಟಂಪ್‌ಗೆ ತಾಗದೇ ಹೋಯಿತು. ಆರ್ಶ್‌ ದೀಪ್‌ ಸಿಂಗ್‌ ಎಸೆದ ಎಸೆತವನ್ನು ಗಲ್ಲು ಕಡೆಗೆ ತಳ್ಳಿ ಒಂದು ರನ್‌ ಕದಿಯುವ ಪ್ರಯತ್ನವನ್ನು ದಸುನ್‌ ಶನಕ ಮಾಡಿದ್ದರು. ಆದರೆ, ಚೆಂಡು ತಮ್ಮ ಬಳಿಗೆ ಬರಬಹುದು ಎನ್ನುವ ಅಂದಾಜಿನಲ್ಲಿ ಬಲಗೈನಲ್ಲಿದ್ದ ವಿಕೆಟ್‌ ಕೀಪಿಂಗ್‌ ಗ್ಲೌಸ್‌ ಕೂಡ ತೆಗೆದಿದ್ದರು. ನಿರೀಕ್ಷೆಯಂತೆ ಪಂತ್‌ ಬಳಿಗೆ ಚೆಂಡು ಬಂದಿತ್ತು. ಅದನ್ನು ರಿಷಭ್‌ ಪಂತ್‌ ಸ್ಟಂಪ್‌ನತ್ತ ಗುರಿ ಇಟ್ಟು ಎಸೆದಿದ್ದರು. ಆದರೆ, ಅದು ಸ್ಟಂಪ್‌ಗೆ ತಾಗಲೇ ಇಲ್ಲ. ನಾನ್‌ ಸ್ಟ್ರೈಕರ್‌ ಆಗಿದ್ದ ಭಾನುಕ ರಾಜಪಕ್ಸ, ಚೆಂಡು ಸ್ಟಂಪ್‌ ದಾಟಿ ಹೋಗುವ ಸಮಯದಲ್ಲಿ ವಿಡಿಯೋ ಫ್ರೇಮ್‌ನಲ್ಲಿಯೇ ಕಾಣಿಸಿಕೊಂಡಿರಲಿಲ್ಲ.


ರಿಷಭ್‌ ಪಂತ್‌ (Rishabh Pant) ಸುಲಭದ ಡೈರೆಕ್ಟ್‌ ಹಿಟ್‌ಅನ್ನು ತಪ್ಪಿಸಿಕೊಂಡ ಬೆನ್ನಲ್ಲಿಯೇ ಕ್ರಿಕೆಟ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ (Social Media) ಎಂಎಸ್‌ ಧೋನಿಯ (MS Dhoni) ನೆನಪುಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಅದರಲ್ಲೂ ಪಂದ್ಯದ ಇಂಥ ರೋಚಕ ಘಟ್ಟದಲ್ಲಿರುವ ಸಂದರ್ಭದಲ್ಲಿ ಎಂಎಸ್ ಧೋನಿ ಎಂದಿಗೂ ಸ್ಟಂಪ್‌ ಔಟ್‌ಗಳನ್ನು (Stump Out) ಮಿಸ್‌ ಮಾಡುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು, ಹಾಗೇನಾದರೂ ಪಂತ್‌ ಜಾಗದಲ್ಲಿ ಎಂಎಸ್ ಧೋನಿ ಇದ್ದದ್ದರೆ, ಖಂಡಿತಾ ಭಾರತ ಈ ಪಂದ್ಯವನ್ನು ಗೆಲ್ಲುತ್ತಿತ್ತು ಎಂದು ಬರೆದುಕೊಂಡಿದ್ದಾರೆ.


ಇದರಲ್ಲಿ ಪಂತ್‌ ಮಾತ್ರವೇ ಡೈರೆಕ್ಟ್‌ ಹಿಟ್‌ ಮಾಡಿರಲಿಲ್ಲ. ಪಂತ್‌ ಎಸೆದ ಚೆಂಡು ಸ್ಟಂಪ್‌ಗೆ ತಾಕುವ ಬದಲು ನೇರವಾಗಿ ಬೌಲರ್‌ ಆರ್ಶ್‌ದೀಪ್‌ ಸಿಂಗ್ (Arshdeep Singh) ಕೈಸೇರಿತ್ತು. ಈ ಹಂತದಲ್ಲಿ ಆರ್ಶ್‌ದೀಪ್‌ ಸಿಂಗ್‌, ನಾನ್‌ ಸ್ಟ್ರೈಕರ್‌ ಎಂಡ್‌ ಬಳಿಗೆ ಓಡುತ್ತಿದ್ದ ದಸುನ್‌ ಶನಕರನ್ನು ಔಟ್‌ ಮಾಡಲು ಥ್ರೋ ಮಾಡಿದರು. ಆದರೆ, ಈ ಥ್ರೋ ಕೂಡ ಸ್ಟಂಪ್‌ಗೆ ತಾಕಲು ವಿಫಲವಾಯಿತು. ಚೆಂಡು ಬರುವ ವೇಳೆಗೆ ಶನಕ ಡೈವ್‌ ಹೊಡೆದ ಬೆನ್ನಲ್ಲಿಯೇ ಚೆಂಡು ಸ್ಟಂಪ್‌ನ ದಾಟಿ ಆಚೆ ಹೋಯಿತು. ಅರ್ಶ್‌ದೀಪ್ ಎಸೆತವು ಓವರ್‌ಥ್ರೋಗೆ ಕಾರಣವಾಯಿತು, ಇದು ಶ್ರೀಲಂಕಾಕ್ಕೆ ಮತ್ತೊಂದು ರನ್ ತೆಗೆದುಕೊಂಡು ರನ್-ಚೇಸ್ ಅನ್ನು ಪೂರ್ಣಗೊಳಿಸಲು ಅವಕಾಶವನ್ನು ನೀಡಿತು.

IND vs SL ಲಂಕಾ ವಿರುದ್ಧ ರೋಹಿತ್ ಸೈನ್ಯಕ್ಕೆ ಸೋಲು, ಆಫ್ಘಾನಿಸ್ತಾನ ಮೇಲೆ ನಿಂತಿದ ಭಾರತದ ಭವಿಷ್ಯ!

ಪಂದ್ಯದ ಬಹುಪಾಲು ಸಮಯದಲ್ಲಿ ಶ್ರೀಲಂಕಾ (Sri Lanka) ತಂಡ ಬಹಳ ಸುಲಭವಾಗಿ ಪಂದ್ಯ ಗೆಲ್ಲಲಿದೆ ಎನ್ನುವ ರೀತಿಯಲ್ಲಿತ್ತು. ಪಥುಮನ್‌ ನಿಸ್ಸಾಂಕ ಹಾಗೂ ಕುಸಲ್‌ ಮೆಂಡಿಸ್‌ ಮೊದಲ ವಿಕೆಟ್‌ಗೆ ಆಕರ್ಷಕ 97 ರನ್‌ ಜೊತೆಯಾಟ ಆಡುವ ಮೂಲಕ ಶ್ರೀಲಂಕಾ ತಂಡದ ಸುಲಭ ಗೆಲುವಿನ ಸಾಧ್ಯತೆ ಅಡಿಪಾಯ ಹಾಕಿದ್ದರು.

IND vs SA ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗೆ ತಂಡ ಪ್ರಕಟಿಸಿದ ಸೌತ್ ಆಫ್ರಿಕಾ!

ಆದರೆ, ಮಧ್ಯಮ ಓವರ್‌ಗಳಲ್ಲಿ ಭಾರತ ಕೆಲ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಶ್ರೀಲಂಕಾ ತಂಡದ ಬ್ಯಾಟಿಂಗ್‌ ಮೇಲೆ ಕಡಿವಾಣ ಹೇರಿತು. ಕೊನೆಯಲ್ಲಿ ಭಾನುಕ ರಾಜಪಕ್ಸ (Bhanuka Rajapaksa) ಹಾಗೂ ದಸುನ್‌ ಶನಕ (Dasun Shanaka) ಆಕರ್ಷಕ ಆಟವಾಡುವ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

Follow Us:
Download App:
  • android
  • ios