ಪಾಕ್ ವಿರುದ್ಧ ಭಾರತದ ಕಳಪೆ ಆಟ ಟ್ರೋಲ್ ನಡುವೆ ದಾಖಲೆ ಬರೆದ ಪಾಂಡ್ಯ-ಕಿಶನ್!
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಟ್ರೋಲ್ ಆಗಿದೆ. ಇದರ ನಡುವೆ ಇಶಾನ್ ಕಿಶನ್ ಹಾಗೂ ಹಾರ್ಧಿಕ್ ಪಾಂಡ್ಯ ದಾಖಲೆ ಬರೆದಿದ್ದಾರೆ.
ಪಲ್ಲಕೆಲೆ(ಸೆ.02) ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಬ್ಬರದ ಬ್ಯಾಟಿಂಗ್ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಕಾರಣ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕಳಪೆ ಆಟ ಟೀಂ ಇಂಡಿಯಾವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ ಕಳಪೆ ಆಟಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್ ಹರಿದಾಡುತ್ತಿದೆ. ಈ ಟೀಕೆ ನಡುವೆ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ಭಾರತ ಚೇತರಿಸಿಕೊಂಡಿತ್ತು. ಒಂದೆಡೆ ವಿಕೆಟ್ ಉಳಿಸಿಕೊಂಡು ಇಶಾನ್ ಹಾಗೂ ಹಾರ್ದಿಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ 5ನೇ ವಿಕೆಟ್‌ಗೆ 2ನೇ ಗರಿಷ್ಠ ಜೊತೆಯಾಟ ಅನ್ನೋ ದಾಖಲೆಗೆ ಪಾತ್ರವಾಯಿತು.
ಪಾಕ್ ವಿರುದ್ಧ ಗಳಿಸಿದ್ದು 11 ರನ್ ಮಾತ್ರ, ಆದರೂ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ!
ಇಶಾನ್ ಕಿಶನ್ 82 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ ಶತಕ ಮಿಸ್ ಮಾಡಿಕೊಂಡರು. 66 ರನ್‌ಗೆ ಭಾರತ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುಕಾಗಿತ್ತು. ಆದರೆ 5ನೇ ವಿಕೆಟ್ ಪಾಂಡ್ಯ ಹಾಗೂ ಕಿಶನ್ ಪಾಕಿಸ್ತಾನ ಲೆಕ್ಕಾಚಾರ ಉಲ್ಟಾ ಮಾಡಿದರು.5ನೇ ವಿಕೆಟ್‌ಗೆ ಈ ಜೋಡಿ 138ರನ್ ಜೊತೆಯಾಟ ನೀಡಿತು.
ಭಾರತ-ಪಾಕಿಸ್ತಾನ ಏಕದಿನ ಪಂದ್ಯದಲ್ಲಿ 5ನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ ದಾಖಲೆ
142 ರನ್ - ಇಮ್ರಾನ್ ಖಾನ್ ಹಾಗೂ ಜಾವೇದ್ ಮಿಯಾಂದಾದ್, 1987
138 ರನ್ - ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ , 2023
135 ರನ್ -ರಾಹುಲ್ ದ್ರಾವಿಡ್ ಹಾಗೂ ಮೊಹಮ್ಮದ್ ಕೈಫ್, 2005
132* ರನ್ - ರಾಹುಲ್ ದ್ರಾವಿಡ್ ಹಾಗೂ ಮೊಹಮ್ಮದ್ ಕೈಫ್, 2004
125* ರನ್ - ಎಂಎಸ್ ಧೋನಿ ಹಾಗೂ ಆರ್ ಅಶ್ವಿನ್, 2012
ಏಷ್ಯಾಕಪ್ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟಿಗರ ಶೈಕ್ಷಣಿಕ ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕಾರಣ ಪಾಕಿಸ್ತಾನದ ಮಾರಕ ದಾಳಿಗೆ ವಿಕೆಟ್ ಪತನಗೊಂಡಿತು. ನಾಯಕ ರೋಹಿತ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಸ್ ಅಯ್ಯರ್ 14 ರನ್ ಸಡಿಸಿ ಔಟಾದರು. ಇನ್ನು ಶುಭ್‌ಮನ್ ಗಿಲ್ 32 ಎಸೆತ ಎದುರಿಸಿ 10 ರನ್ ಸಿಡಿಸಿ ಔಟಾದರು. ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ನಿಧಾನವಾಗಿ ಚೇತರಿಸಿಕೊಂಡಿತು.
2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ದ ಆಡುತ್ತಿದೆ. ಇತ್ತ ಪಾಕಿಸ್ತಾನ ಈಗಾಗಲೇ ನೇಪಾಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.