Asianet Suvarna News Asianet Suvarna News

Asia Cup ಆಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಪಾಕ್, ಈ ಪಂದ್ಯದ ಮೇಲಿದೆ ಟೀಂ ಇಂಡಿಯಾ ಭವಿಷ್ಯ!

ಏಷ್ಯಾಕಪ್ ಟೂರ್ನಿಯಲ್ಲಿಂದು ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದ  ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಭಾರತದ ಪಾಲಿಗೂ ಅತ್ಯಂತ ಪ್ರಮುಖವಾಗಿದೆ.

Asia cup 2022 T20 Pakistan wins toss and chose bowl first against Afghanistan Super 4 clash ckm
Author
First Published Sep 7, 2022, 7:02 PM IST

ದುಬೈ(ಸೆ.07) ಏಷ್ಯಾಕಪ್ ಟೂರ್ನಿಯಿಂದ ಒಂದು ಕಾಲು ಹೊರಗಿಟ್ಟಿರುವ ಟೀಂ ಇಂಡಿಯಾ ಇಂದು ಆಫ್ಘಾನಿಸ್ತಾನ ತಂಡಕ್ಕೆ ಬೆಂಬಲ ನೀಡಿದೆ. ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ತಾನ ಗೆಲುವು ಸಾಧಿಸಿದರೆ, ಭಾರತದ ಕೊನೆಯ ಹಾಗೂ ಕ್ಷೀಣ ಅವಕಾಶದ ಬಾಗಿಲೊಂದು ತೆರೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.  ಈ ಮೂಲಕ ಟೀಂ ಇಂಡಿಯಾ ಲೆಕ್ಕಾಚಾರ ಆರಂಭದಲ್ಲೇ ಉಲ್ಟಾ ಹೊಡೆಯುವ ಲಕ್ಷಣಗಳು ಕಾಣಿಸುತ್ತಿದೆ.

ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಭಾರತಕ್ಕೆ ಅತ್ಯಂತ ಮಹತ್ವದ ಪಂದ್ಯವಾಗಿದೆ.  ಈ ಪಂದ್ಯದ ಫಲಿತಾಂಶ ಭಾರತ ಹಾಗೂ ಆಫ್ಘಾನಿಸ್ತಾನ ಎರಡೂ ತಂಡಕ್ಕೂ ಮುಖ್ಯವಾಗಿದೆ. ಆದರೆ ಪಾಕಿಸ್ತಾನ ಗೆಲುವು ಸಾಧಿಸಿದರೆ, ಟೀಂ ಇಂಡಿಯಾ ಹಾಗೂ ಆಫ್ಘಾನಿಸ್ತಾನ ಎರಡೂ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.  ರೋಹಿತ್ ಶರ್ಮಾ ಸೈನ್ಯ ಹಾಗೂ ಟೀಂ ಇಂಡಿಯಾ ಅಭಿಮಾನಿಗಳು ಆಫ್ಘಾನಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. 

ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದಿದ್ದ ಪಾಕಿಸ್ತಾನ ಈ ಪಂದ್ಯದಲ್ಲೂ ಜಯಿಸಿ ಫೈನಲ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನು ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ ಸೋತಿದ್ದ ಆಫ್ಘನ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ತಂಡ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ. 

ಟೀಂ ಇಂಡಿಯಾದ ಈ ಪರಿಸ್ಥಿತಿಗೆ ಕಾರಣ ಸೂಪರ್ 4 ಹಂತದಲ್ಲಿ ಸತತ ಎರಡು ಸೋಲು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು. ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಸೋತಿತ್ತು. 

ಭಾರತದ ಫೈನಲ್‌ ಆಸೆಗೆ ಲಂಕಾ ಪೆಟ್ಟು!
8ನೇ ಬಾರಿಗೆ ಏಷ್ಯಾಕಪ್‌ ಗೆಲ್ಲುವ ಭಾರತ ತಂಡದ ಕನಸು ಬಹುತೇಕ ಭಗ್ನಗೊಂಡಿದೆ. ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಸೂಪರ್‌-4 ಹಂತದ ಪಂದ್ಯದಲ್ಲಿ 6 ವಿಕೆಟ್‌ ಸೋಲು ಅನುಭವಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಬಾಕಿ ಇರುವ 3 ಪಂದ್ಯಗಳ ಫಲಿತಾಂಶಗಳು ತನ್ನ ಪರವಾಗಿ ಬಂದರಷ್ಟೇ ಭಾರತ ಫೈನಲ್‌ಗೇರುವ ಸಾಧ್ಯತೆ ಇರಲಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಷ್ಟಭಾರತ ರೋಹಿತ್‌ ಶರ್ಮಾ ಏಕಾಂಗಿ ಹೋರಾಟದ ನೆರವಿನಿಂದ 20 ಓವರಲ್ಲಿ 8 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ ತನ್ನ ಆರಂಭಿಕರಾದ ಪಥುಂ ನಿಸ್ಸಾಂಕ ಮತ್ತು ಕುಸಾಲ್‌ ಮೆಂಡಿಸ್‌ರ ಅರ್ಧಶತಕಗಳ ನೆರವಿನಿಂದ ಇನ್ನೂ 0 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಸತತ 3 ಪಂದ್ಯಗಳಲ್ಲಿ ಲಂಕಾ ಯಶಸ್ವಿಯಾಗಿ ಗುರಿ ಬೆನ್ನತ್ತಿ ಸಂಭ್ರಮಿಸಿತು.

ಮೊದಲ ವಿಕೆಟ್‌ಗೆ ಲಂಕಾ 11.1 ಓವರಲ್ಲಿ ಲಂಕಾ 97 ರನ್‌ ಜೊತೆಯಾಟ ಕಂಡಿತು. ನಿಸ್ಸಾಂಕ 52, ಮೆಂಡಿಸ್‌ 57 ರನ್‌ ಗಳಿಸಿದರು. ಆ ಬಳಿಕ 18 ಎಸೆತಗಳ ಅಂತರದಲ್ಲಿ ಲಂಕಾ 4 ವಿಕೆಟ್‌ ಕಳೆದುಕೊಂಡಿತು. ಚಹಲ್‌ 3, ಅಶ್ವಿನ್‌ 1 ವಿಕೆಟ್‌ ಕಿತ್ತರು. 5ನೇ ವಿಕೆಟ್‌ಗೆ ಭನುಕ ರಾಜಪಕ್ಸೆ ಮತ್ತು ನಾಯಕ ದಸುನ್‌ ಶಾನಕ ಜೊತೆಯಾದಾಗ ಗೆಲ್ಲಲು ಇನ್ನೂ 64 ರನ್‌ ಬೇಕಿತ್ತು. ಈ ಜೋಡಿಯು ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಗೆಲುವಿನ ದಡ ಸೇರಿಸಿದರು. ರಾಜಪಕ್ಸೆ 00 ರನ್‌ ಗಳಿಸಿ ಔಟಾಗದೆ ಉಳಿದರೆ, ಶಾನಕ 00 ರನ್‌ ಗಳಿಸಿದರು.
 

Follow Us:
Download App:
  • android
  • ios