ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇಂದು ಹಾಂಕಾಂಗ್ ವಿರುದ್ದ ಹೋರಾಟ ನಡೆಸಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹಾಗಾದರೆ ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ? ಇಲ್ಲಿದೆ ವಿವರ.

ದುಬೈ(ಆ.31); ಏಷ್ಯಾಕಪ್ ಟೂರ್ನಿ ಆರಂಭಿಕ ಹಂತದಲ್ಲಿ ರೋಚಕ ಹೋರಾಟದ ಮೂಲಕ ಗಮನ ಸೆಳೆಯುತ್ತಿದೆ. ಇಂದು ಭಾರತ ಹಾಗೂ ಹಾಂಕಾಂಗ್ ಹೋರಾಟ. ಹಾಂಕಾಂಗ್ ಭಾರತಕ್ಕೆ ಸುಲಭ ತುತ್ತು. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ. ಟೀಂ ಇಂಡಿಯಾ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಲು ಇದು ಸದವಕಾಶ ಅನ್ನೋ ಕಾರಣಕ್ಕೆ ಬದಲಾವಣೆ ಮಾತುಗಳು ಕೇಳಿಬರುತ್ತಿದೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಪ್ರತಿ ಪಂದ್ಯವೂ ಮುಖ್ಯವಾಗಿರುವ ಕಾರಣ ಟೀಂ ಇಂಡಿಯಾ ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್‌ಗೆ ಸ್ಥಾನ ನೀಡಬೇಕು ಅನ್ನೋ ಒತ್ತಾಯ ಹೆಚ್ಚಿದೆ. ಇನ್ನೂ ದೀಪಕ್ ಹೂಡ, ರವಿ ಬಿಶ್ನೋಯ್ ಹಾಗೂ ಆರ್ ಅಶ್ವಿನ್ ಕೂಡ ಸ್ಥಾನಕ್ಕಾಗಿ ಕಾದುಕುಳಿತಿದ್ದಾರೆ. ಹೀಗಾಗಿ ಹಾಂಕಾಂಗ್ ವಿರುದ್ಧದ ಪಂದ್ಯ ಇದೀಗ ಪ್ಲೇಯಿಂಗ್ 11 ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿದೆ.

Asia Cup 2022 Cricket ಭಾರತ ಹಾಗೂ ಹಾಂಕಾಂಗ್ ತಂಡದ ಸಂಭವನೀಯ(Playing 11) ಆಟಗಾರರ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್‌(ನಾಯಕ), ರಾಹುಲ್‌, ಕೊಹ್ಲಿ, ಸೂರ್ಯ, ಕಾರ್ತಿಕ್‌, ಜಡೇಜಾ, ಪಾಂಡ್ಯ, ಭುವನೇಶ್ವರ್‌, ಯಜುವೇಂದ್ರ ಚಹಲ್‌, ಅರ್ಶದೀಪ್ ಸಿಂಗ್, ಆವೇಶ್‌ ಖಾನ್.

Asia Cup ಪಾಕ್ ವಿರುದ್ಧ ಗೆದ್ದ ಭಾರತಕ್ಕಿಂದು ಹಾಂಕಾಂಗ್ ಸವಾಲು!

ಹಾಂಕಾಂಗ್‌ ಪ್ಲೇಯಿಂಗ್ 11
ಮುರ್ತುಜಾ, ನಿಜಾಕತ್‌(ನಾಯಕ), ಬಾಬರ್‌, ಕಿಂಚಿತ್‌ ಶಾ, ಐಜಾಜ್‌ ಖಾನ್‌, ಸ್ಕಾಟ್‌ ಮೆಕೆನ್ಜಿ, ಝೀಶಾನ್‌ ಅಲಿ, ಹರೂನ್‌, ಎಹ್ಸಾನ್‌, ಮೊಹಮದ್‌, ಆಯುಷ್‌.

ಈ ಹಿಂದೆ ಭಾರತ ಹಾಗಾ ಹಾಂಕಾಂಗ್((India vs Hong Kong) 2 ಬಾರಿ ಮುಖಾಮುಖಿಯಾಗಿದೆ. ಆದರೆ ಅವೆರೆಡು ಪಂದ್ಯದಳು ಏಕದಿನವಾಗಿತ್ತು. ಇದೇ ಮೊದಲ ಬಾರಿಗೆ ಭಾರತ ಹಾಗೂ ಹಾಂಕಾಂಗ್ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನ(India vs Pakistan) ವಿರುದ್ದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ದ ಭಾರತ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್‌ನಲ್ಲಿ ಸುಲಭ ಗುರಿ ಚೇಸ್ ಮಾಡಲು ಪ್ರಯಾಸ ಪಟ್ಟಿತ್ತು. ಆದರೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಹೋರಾಟದಿಂದ ಟೀಂ ಇಂಡಿಯಾ ಇನ್ನು ಎರಡು ಎಸೆತ ಬಾಕಿ ಇರುವಂತೆ ಪಾಕಿಸ್ತಾನ ಮಣಿಸಿತ್ತು. ಈ ಮೂಲಕ 2021ರ ಟಿ20 ವಿಶ್ವಕಪ್ ಟೂರ್ನಿಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಪಾಕಿಸ್ತಾನ ಮಣಿಸಿದ ಹಾರ್ದಿಕ್ ಪಾಂಡ್ಯಗೆ ಟಿವಿ ಪರದೆ ಮೇಲೆ ಮುತ್ತಿಕ್ಕಿದ ಆಫ್ಘಾನಿಸ್ತಾನ ಫ್ಯಾನ್!

ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ಪರಾಕ್ರಮ
ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆಫ್ಘಾನಿಸ್ತಾನ ದಿಟ್ಟ ಹೋರಾಟದ ಮೂಲಕ ಶ್ರೀಲಂಕಾ ವಿರುದ್ದ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಆಫ್ಘಾನಿಸ್ತಾನ 7 ವಿಕೆಟ್ ಗೆಲುವು ದಾಖಲಿಸಿದೆ. ಆಡಿದ ಎರಡು ಪಂದ್ಯದಲ್ಲಿ ಪ್ರಮುಖ 2 ತಂಡಗಳನ್ನು ಬಗ್ಗು ಬಡಿದಿದೆ.