ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದರೂ ಪಂದ್ಯದ ಕುರಿತು ರೋಚಕ ಕತೆಗಳು ಮುಗಿದಿಲ್ಲ. ಇಂಡೋ ಪಾಕ್ ಪಂದ್ಯವನ್ನು ವೀಕ್ಷಿಸಿದ ಅಫ್ಘಾನಿಸ್ತಾನ ಅಭಿಮಾನಿಗಳು ಭಾರತದ ಗೆಲುವನ್ನು ಅತಿಯಾಗಿ ಸಂಭ್ರಮಿಸಿದ್ದಾರೆ. ಇದರಲ್ಲೊರ್ವ ಪಂದ್ಯ ಗೆಲ್ಲಿಸಿದ ಹಾರ್ದಿಕ್ ಪಾಂಡ್ಯಗೆ ಟಿವಿ ಪರದೆ ಮೇಲೆ ಮುತ್ತಿಕ್ಕಿ ವೈರಲ್ ಆಗಿದ್ದಾನೆ.

ನವದೆಹಲಿ(ಆ.29): ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಹೋರಾಟ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ವಿಶ್ವಾದ್ಯಂತ ಇರುವ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಈ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ಅಭಿಮಾನಿಗಳು ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಇಂಡೋ ಪಾಕ್ ಪಂದ್ಯವನ್ನು ಟಿವಿ ಮುಂದೆ ಕುಳಿತು ನೋಡುತ್ತಿದ್ದ ಆಫ್ಘಾನಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ. ಇದರಲ್ಲಿ ಓರ್ವ ಅಭಿಮಾನಿ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ ಹಾರ್ದಿಕ್ ಪಾಂಡ್ಯಗೆ ತನ್ನ ಟಿವಿ ಸ್ಕ್ರೀನ್ ಮೇಲೆ ಮುತ್ತಿಕ್ಕಿ ಗಮನಸೆಳೆದಿದ್ದಾನೆ. ಭರ್ಜರಿ ಸಿಕ್ಸರ್ ಮೂಲಕ ಪಾಂಡ್ಯ ಭಾರತಕ್ಕೆ ರೋಚಕ 5 ವಿಕೆಟ್ ಗೆಲುವು ತಂದುಕೊಟ್ಟರು. ಈ ವೇಳೆ ಪಾಂಡ್ಯ ಟಿವಿ ಸ್ಕ್ರೀನ್ ಮೇಲೆ ಕಾಣುತ್ತಿದ್ದಂತೆ ಕುಳಿತದಲ್ಲಿಂದ ಎದ್ದು ಬಂದು ಪಾಂಡ್ಯಗೆ ಪರದೆ ಮೇಲೆ ಮುತ್ತಿಕ್ಕಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಆಫ್ಘಾನಿಸ್ತಾನದ ಮನೆಯೊಂದರಲ್ಲಿ ಹಲವರು ಕುಳಿತು ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ ಬೆನ್ನಲ್ಲೇ ಸಂಭ್ರಮ ಮನೆ ಮಾಡಿದೆ. ಇತ್ತ ಓರ್ವ ಅಭಿಮಾನಿ ಎದ್ದು ಬಂದು ಟಿವಿ ಪರದೆಯಲ್ಲಿ ಕಾಣುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಮುತ್ತಿಕ್ಕಿದ್ದಾನೆ. 

Scroll to load tweet…

ಪ್ಲೇಯಿಂಗ್ 11ನಿಂದ ಪಂತ್‌ಗೆ ಠಕ್ಕರ್, ಇಂಡೋ ಪಾಕ್ ಪಂದ್ಯಕ್ಕೆ ಊರ್ವಶಿ ರೌಟೇಲಾ ಹಾಜರ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಅತ್ಯಂತ ರೋಚಕ ಘಟ್ಟ ತಲುಪಿತ್ತು. ಪ್ರತಿ ಎಸೆತವೂ ಕುತೂಹಲ ಮೂಡಿಸಿತ್ತು. ಅಂತಿಮ ಓವರ್ ವರೆಗೂ ಪಂದ್ಯ ಯಾರ ಕಡೆ ವಾಲಲಿದೆ ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇತ್ತು. 15ನೇ ಓವರಲ್ಲಿ 89 ರನ್‌ಗೆ 4 ವಿಕೆಟ್‌ ಕಳೆದುಕೊಂಡ ಭಾರತ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ 5ನೇ ವಿಕೆಟ್‌ಗೆ 52 ರನ್‌ ಜೊತೆಯಾಟವಾಡಿದ ಜಡೇಜಾ, ಹಾರ್ದಿಕ್‌ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇವರಿಬ್ಬರ ಜೊತೆಯಾಟ ಪಾಕಿಸ್ತಾನಕ್ಕೆ ಮುಳುವಾಯಿತು. ಕೊನೆ 3 ಓವರಲ್ಲಿ ಗೆಲ್ಲಲು 32 ರನ್‌ ಬೇಕಿತ್ತು. ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದರು. 18ನೇ ಓವರಲ್ಲಿ 11 ರನ್‌ ಪಡೆದ ಭಾರತ, 19ನೇ ಓವರಲ್ಲಿ 14 ರನ್‌ ಚಚ್ಚಿ ಗೆಲುವಿನ ಹೊಸ್ತಿಲು ತಲುಪಿತು. ಜಡೇಜಾ 35 ರನ್‌ ಗಳಿಸಿ ಔಟಾದರು. ಹಾರ್ದಿಕ್‌ ಔಟಾಗದೆ 27 ರನ್‌ ಗಳಿಸಿದರು. ಇನ್ನೂ ಎರಡೂ ಎಸೆತ ಬಾಕಿ ಇರುವಂತೆ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸ್ಕೋರ್‌: ಪಾಕಿಸ್ತಾನ 19.5 ಓವರಲ್ಲಿ 147/10(ರಿಜ್ವಾನ್‌ 43, ಅಹ್ಮದ್‌ 28, ಭುವನೇಶ್ವರ್‌ 4-26, ಹಾರ್ದಿಕ್‌ 3-25, ಅಶ್‌ರ್‍ದೀಪ್‌ 2-33, ಆವೇಶ್‌ 1-19), ಭಾರತ 00.0 ಓವರಲ್ಲಿ 000/0 (ಕೊಹ್ಲಿ 35, ಜಡೇಜಾ , ಹಾರ್ದಿಕ್‌, ನಸೀಂ 2-16, ನವಾಜ್‌ 3-26)

ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!