Asianet Suvarna News Asianet Suvarna News

Asia Cup 2022: ರೋಹಿತ್‌ಗೆ ವಿಶ್ರಾಂತಿ, ಕೆಎಲ್‌ ರಾಹುಲ್‌ ಕ್ಯಾಪ್ಟನ್‌, ಟೀಮ್‌ ಇಂಡಿಯಾ ಮೊದಲು ಬ್ಯಾಟಿಂಗ್‌

ಈಗಾಗಲೇ ಏಷ್ಯಾಕಪ್‌ನಿಂದ ಅಭಿಯಾನ ಮುಗಿಸಿರುವ ಭಾರತ ಸೂಪರ್‌ 4 ಹಂತದಲ್ಲಿ ಕನಿಷ್ಠ ಒಂದು ಗೆಲುವನ್ನಾದರೂ ಕಂಡು ಅಭಿಯಾನ ಮುಗಿಸುವ ಇರಾದೆಯಲ್ಲಿದೆ. ಇನ್ನೊಂದೆಡೆ ಅಫ್ಘಾನಿಸ್ತಾನ ಕೂಡ ಇದೇ ಗುರಿಯಲ್ಲಿ ಕಣಕ್ಕಿಳಿಯಲಿದೆ.
 

Asia Cup 2022 India vs Afghanistan Super Four Match Afgan won the toss opt to bowl san
Author
First Published Sep 8, 2022, 7:11 PM IST

ದುಬೈ (ಸೆ.8): ಏಷ್ಯಾಕಪ್‌ನಲ್ಲಿ ಈಗಾಗಲೇ ಟೀಮ್‌ ಇಂಡಿಯಾ ತನ್ನ ಸೂಪರ್‌-4 ಹಂತದ ಅಂತಿಮ ಪಂದ್ಯದಲ್ಲಿ ಗುರುವಾರ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಟಾಸ್‌ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ಸೂಪರ್‌-4 ಹಂತದಲ್ಲಿ ಕನಿಷ್ಠ ಒಂದು ಗೆಲುವನ್ನಾದರೂ ಸಾಧಿಸಿ ಏಷ್ಯಾಕಪ್‌ಗೆ ವಿದಾಯ ಹೇಳುವ ಆಸೆಯಲ್ಲಿದೆ. ಏಷ್ಯಾಕಪ್‌ನಲ್ಲಿ ಎಲ್ಲಾ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್‌ ಶರ್ಮಗೆ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್‌ಗೆ ಟೀಮ್‌ ಇಂಡಿಯಾ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಮೊದಲು ಬ್ಯಾಟಿಂಗ್‌ ಮಾಡಬೇಕು ಎನ್ನುವುದೇ ನಮ್ಮ ಆಸೆಯಾಗಿತ್ತು. ಬ್ಯಾಟಿಂಗ್ ಯುನಿಟ್‌ ಆಗಿ ನಮಗೆ ನಾವೇ ಸವಾಲು ನೀಡಲು ಬಯಸಿದ್ದೇವೆ. ರೋಹಿತ್‌ ಶರ್ಮ ವಿಶ್ರಾಂತಿ ಕೇಳಿದ್ದರು. ಇಂಥ ವಾತಾವರಣದಲ್ಲಿ ಸತತವಾಗಿ ಪಂದ್ಯಗಳನ್ನು ಆಡುವುದು ಸುಲಭವಲ್ಲ. ಈ ಟೂರ್ನಿಗೆ ಬರುವ ವೇಳೆಯಲ್ಲಿಯೇ ನಾವು ವಿಶ್ವಕಪ್‌ನ ಬಗ್ಗೆ ಗಮನ ನೀಡಿದ್ದೆವು. ವಿಶ್ವಕಪ್‌ಗೂ ಮುನ್ನ ಇಂಥದ್ದೊಂದು ಟೂರ್ನಿ ಆಡುತ್ತಿರುವುದು ಒಳ್ಳೆಯದಾಗಿದೆ. ಎದುರಾದ ಸೋಲುಗಳಿಂದ ಕೆಲವೊಂದು ಪಾಠಗಳನ್ನು ಕಲಿತಿದ್ದೇವೆ. ವಿಶ್ವಕಪ್‌ಗೂ ಮುನ್ನ ಪ್ರತಿಯೊಬ್ಬರ ಪಾತ್ರವನ್ನು ಇಲ್ಲಿ ಅಂತಿಮ ಮಾಡುತ್ತಿದ್ದೇವೆ ಎಂದು ಟಾಸ್‌ ವೇಳೆ ನಾಯಕ ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಲಾಗಿದ್ದು, ಯಜುವೇಂದ್ರ ಚಾಹಲ್‌, ಹಾರ್ದಿಕ್‌ ಪಾಂಡ್ಯ ಹಾಗೂ ರೋಹಿತ್‌ ಶರ್ಮ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಅವರ ಬದಲಿಗೆ ದೀಪಕ್‌ ಚಹರ್‌ (Deepak Chahar), ದಿನೇಶ್‌ ಕಾರ್ತಿಕ್‌ (Dinesh Karthik) ಹಾಗೂ ಅಕ್ಸರ್‌ ಪಟೇಲ್‌ (Axar Patel) ಆಡುವ ಬಳಗಕ್ಕೆ ಬಂದಿದ್ದಾರೆ. 

ನಾವು ಮೊದಲು ಬೌಲಿಂಗ್‌ ಮಾಡಲಿದ್ದೇವೆ. ಪಾಕಿಸ್ತಾನ ವಿರುದ್ಧ (Asia Cup 2022) ಪಂದ್ಯ ಮುಗಿದ ಬೆನ್ನಲ್ಲಿಯೇ ಹೋಟೆಲ್‌ಗೆ ತೆರಳಿ ನಿದ್ರೆ ಮಾಡಿದ್ದೆವು. ತಂಡಕ್ಕೆ ಬಹಳ ಕಠಿಣ ದಿನ ಅದಾಗಿತ್ತು. ನಾವು ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆವು. ಕೊನೆಯ ಎರಡು ಪಂದ್ಯಗಳನ್ನು ನಾವು ಗೆಲ್ಲಬಹುದಿತ್ತು. ಈ ಪಂದ್ಯದಲ್ಲಿ ಉತ್ತಮ ಕ್ರಿಕೆಟ್‌ ಆಡಲು ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ ಎಂದು ಅಫ್ಘಾನಿಸ್ತಾನ ತಂಡದ ನಾಯಕ ಮೊಹಮದ್‌ ನಬಿ (Mohammad Nabi Afghanistan Captain) ಪಂದ್ಯದ ಟಾಸ್‌ ವೇಳೆ ಹೇಳಿದ್ದಾರೆ.

Shubman Gill: ಗಿಲ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಲೇ ಕಾಲೆಳೆದ ಯುವರಾಜ್ ಸಿಂಗ್..!

ಕ್ಯಾಪ್ಟನ್‌ ಹಾಗೂ ಟೀಮ್‌ಗೆ ಬೆಂಬಲ ನೀಡುವುದು ನನ್ನ ಜವಾಬ್ದಾರಿ. ನಮ್ಮ ತಂಡದ ಉತ್ತಮ ಪ್ರದರ್ಶನ ಹೊರತರಲು ಸಹಾಯ ಮಾಡುತ್ತೇನೆ. ಆದರೆ, ಒಮ್ಮೆ ಮೈದಾನಕ್ಕೆ ಇಳಿದ ಬಳಿಕ ಅದು ನಾಯಕನ ತಂಡವಾಗಿರುತ್ತದೆ. ಎಲ್ಲಾ ಯೋಜನೆಗಳನ್ನು ಹಾಗೂ ಆಟಗಾರರ ಜವಾಬ್ದಾರಿಗಳ ಬಗ್ಗೆ ಆತನೇ ನಿರ್ಧಾರ ಕೈಗೊಂಡು ತಂಡವನ್ನು ಗೆಲುವಿನ ದಡ ಸೇರಿಸಬೇಕಾಗುತ್ತದೆ. ರೋಹಿತ್‌ ಈಗ ನಿರಾಳರಾಗಿದ್ದಾರೆ. ಇಡೀ ತಂಡವೂ ಕೂಡ ಹುಮ್ಮಸ್ಸಿನಲ್ಲಿದೆ. ಈ ಮೈದಾನದಲ್ಲಿ ನಾವು ಕೆಲವೊಂದಿಷ್ಟು ಪಂದ್ಯಗಳನ್ನು ಕಳೆದುಕೊಂಡಿರಬಹುದು, ಆದರೆ, ಇಲ್ಲಿ ಮೊತ್ತವನ್ನು ಡಿಫೆಂಡ್‌ ಮಾಡಿಕೊಳ್ಳುವುದು ಸುಲಭವಲ್ಲ. ಕೆಲವೊಂದು ಪಂದ್ಯ ಸೋತ ಮಾತ್ರಕ್ಕೆ ನಾವು ಕೆಟ್ಟ ಟೀಮ್‌ ಎಂದರ್ಥವಲ್ಲ. ಆದರೆ, ಈ ಸೋಲಿನ ಬಗ್ಗೆ ಹೆಚ್ಚಿನ ಚಿಂತೆ ಮಾಡಬಾರದು. ಈಗ ತಂಡ ಸಮತೋಲಿತವಾಗಿದೆ. ಸೋಲಲಿ ಅಥವಾ ಗೆಲ್ಲಲಿ ತಂಡದ ಸ್ಥೈರ್ಯ ಕುಗ್ಗಬಾರದು ಅದೇ ನಮ್ಮ ಉದ್ದೇಶ ಎಂದು ಟೀಮ್‌ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್‌ (Team India Coach Rahul Dravid)  ತಿಳಿಸಿದ್ದಾರೆ.

ICC T20 World Cup: ಅಭ್ಯಾಸ ಪಂದ್ಯ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಆಸೀಸ್‌, ಆಗ್ನಿ ಪರೀಕ್ಷೆ..!

ಟೀಮ್‌ ಇಂಡಿಯಾ ಪ್ಲೇಯಿಂಗ್‌ ಇಲೆವೆನ್: ಕೆಎಲ್ ರಾಹುಲ್(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಆರ್ಶ್‌ ದೀಪ್‌ ಸಿಂಗ್‌.

ಅಫ್ಘಾನಿಸ್ತಾನ ಪ್ಲೇಯಿಂಗ್‌ ಇಲೆವೆನ್‌: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ಸನಾಯಕ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ
 

Follow Us:
Download App:
  • android
  • ios