Asianet Suvarna News Asianet Suvarna News

ICC T20 World Cup: ಅಭ್ಯಾಸ ಪಂದ್ಯ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಆಸೀಸ್‌, ಆಗ್ನಿ ಪರೀಕ್ಷೆ..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದ ವೇಳಾಪಟ್ಟಿ ಪ್ರಕಟ
* ಅಕ್ಟೋಬರ್ 10ರಿಂದ ಅಭ್ಯಾಸ ಪಂದ್ಯಗಳು ಆರಂಭ
* ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯವನ್ನಾಡಲಿರುವ ಭಾರತ

ICC T20 World Cup 2022 India to face New Zealand Australia in warm up matches kvn
Author
First Published Sep 8, 2022, 4:41 PM IST

ಮೆಲ್ಬೊರ್ನ್‌(ಸೆ.08): ಮುಂಬರುವ ಅಕ್ಟೋಬರ್ 22ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು, ಐಸಿಸಿ ಟಿ20  ವಿಶ್ವಕಪ್ ಟೂರ್ನಿಗೂ ಮುನ್ನ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಕ್ಟೋಬರ್ 10ರಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ. ಇನ್ನು ಅಕ್ಟೋಬರ್ 23ರಂದು ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದಕ್ಕೂ ಮುನ್ನ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯವನ್ನಾಡಲಿದೆ. ಅಭ್ಯಾಸ ಪಂದ್ಯದಲ್ಲಿಯೇ ಭಾರತದ ಸತ್ವ ಪರೀಕ್ಷೆ ಅನಾವರಣಗೊಳ್ಳಲಿದೆ.

ಭಾರತ ಕ್ರಿಕೆಟ್ ತಂಡವು ತಂಡವು ತನ್ನ ಪಾಲಿನ ಎರಡು ಅಭ್ಯಾಸ ಪಂದ್ಯಗಳನ್ನು ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಡಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 17ರಂದು ನಡೆಯಲಿರುವ ತನ್ನ ಪಾಲಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಅಕ್ಟೋಬರ್ 19ರಂದು ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯಲಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಅಕ್ಟೋಬರ್ 10ರಿಂದಲೇ ಆರಂಭವಾಗುತ್ತವೆಯಾದರೂ, ಸೂಪರ್ 12ಗೆ ನೇರ ಅರ್ಹತೆ ಪಡೆದ ತಂಡಗಳ ಅಭ್ಯಾಸ ಪಂದ್ಯಗಳು ಅಕ್ಟೋಬರ್ 17 ರಿಂದ 19ರವರೆಗೆ ನಡೆಯಲಿವೆ. ಸೂಪರ್ 12ಗೆ ನೇರ ಅರ್ಹತೆ ಪಡೆಯದ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಸೇರಿದಂತೆ ಕೆಲವು ಮೊದಲ ಸುತ್ತಿನ ತಂಡಗಳು ಅಕ್ಟೋಬರ್ 10ರಿಂದ 13ರವರೆಗೆ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳಿಗೆ ಬ್ರಿಸ್ಬೇನ್ ಹಾಗೂ ಮೆಲ್ಬೊರ್ನ್ ಆತಿಥ್ಯ ವಹಿಸಲಿದೆ.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಯುಎಇನಲ್ಲಿದ್ದು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಏಷ್ಯಾಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದ್ದ ಟೀಂ ಇಂಡಿಯಾ, ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿದೆ. ಈಗಾಗಲೇ ಏಷ್ಯಾಕಪ್ ಫೈನಲ್‌ಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸತತ ಎರಡು ಪಂದ್ಯ ಗೆದ್ದು ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದರೆ, ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಸೂಪರ್ 4 ಹಂತದಲ್ಲಿ ತಮ್ಮ ಹೋರಾಟ ಮುಗಿಸಿವೆ.

Asia Cup 2022 ಟೀಂ ಇಂಡಿಯಾ ದುಸ್ಥಿತಿಗೆ ಕಾರಣಗಳೇನು?

ಇನ್ನು ಏಷ್ಯಾಕಪ್ ಟೂರ್ನಿ ಮುಗಿದ ಬಳಿಕ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 04ರವರೆಗೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರು ತಲಾ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಹೀಗಿದೆ ನೋಡಿ

ಅಕ್ಟೋಬರ್ 10: ವೆಸ್ಟ್‌ ಇಂಡೀಸ್ vs ಯುಎಇ, ಜಂಕ್ಷನ್ ಓವಲ್‌, 11:00am 
ಅಕ್ಟೋಬರ್ 10: ಸ್ಕಾಟ್ಲೆಂಡ್ vs ನೆದರ್‌ಲ್ಯಾಂಡ್, ಜಂಕ್ಷನ್ ಓವಲ್‌, 03:00pm 
ಅಕ್ಟೋಬರ್ 10: ಶ್ರೀಲಂಕಾ vs ಜಿಂಬಾಬ್ವೆ, ಎಂಸಿಜಿ, 07:00pm 

ಅಕ್ಟೋಬರ್ 11: ನಮಿಬಿಯಾ vs ಐರ್ಲೆಂಡ್, ಎಂಸಿಜಿ, 07:00pm 

ಅಕ್ಟೋಬರ್ 12: ವೆಸ್ಟ್‌ ಇಂಡೀಸ್ vs ನೆದರ್‌ಲ್ಯಾಂಡ್, ಎಂಸಿಜಿ, 07:00pm 

ಅಕ್ಟೋಬರ್ 13: ಜಿಂಬಾಬ್ವೆ vs ನಮಿಬಿಯಾ, ಜಂಕ್ಷನ್ ಓವಲ್‌, 11:00am 
ಅಕ್ಟೋಬರ್ 13: ಶ್ರೀಲಂಕಾ vs ಐರ್ಲೆಂಡ್, ಜಂಕ್ಷನ್ ಓವಲ್‌, 03:00am 
ಅಕ್ಟೋಬರ್ 13: ಸ್ಕಾಟ್ಲೆಂಡ್ vs ಯುಎಇ, ಎಂಸಿಜಿ, 07:00pm 

ಅಕ್ಟೋಬರ್ 17: ಆಸ್ಟ್ರೇಲಿಯಾ vs ಭಾರತ, ದ ಗಾಬಾ, 02:00pm 
ಅಕ್ಟೋಬರ್ 17: ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ, ಅಲನ್ ಬಾರ್ಡರ್‌ ಫೀಲ್ಡ್‌, 02:00pm 
ಅಕ್ಟೋಬರ್ 17: ಇಂಗ್ಲೆಂಡ್ vs ಪಾಕಿಸ್ತಾನ, ದ ಗಾಬಾ, 06:00pm 
ಅಕ್ಟೋಬರ್ 17: ಆಫ್ಘಾನಿಸ್ತಾನ vs ಬಾಂಗ್ಲಾದೇಶ, ಅಲನ್ ಬಾರ್ಡರ್ ಫೀಲ್ಡ್, 06:00pm 

ಅಕ್ಟೋಬರ್ 19: ಆಫ್ಘಾನಿಸ್ತಾನ vs ಪಾಕಿಸ್ತಾನ, ದ ಗಾಬಾ, 01:00pm 
ಅಕ್ಟೋಬರ್ 19: ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ, ಅಲನ್ ಬಾರ್ಡರ್ ಫೀಲ್ಡ್, 06:00pm 
ಅಕ್ಟೋಬರ್ 19: ನ್ಯೂಜಿಲೆಂಡ್ vs ಭಾರತ, ದ ಗಾಬಾ, 06:00pm 
 

Follow Us:
Download App:
  • android
  • ios