ಏಷ್ಯಾಕಪ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ. ಭಾರತ ವಿರುದ್ದ ಮುಗ್ಗರಿಸಿದ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲು ಹಾಂಕಾಂಗ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಸೋತಿದೆ.
ಶಾರ್ಜಾ(ಸೆ.02): ಪಾಕಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಂತ ಮಹತ್ವದ ಪಂದ್ಯ. ಗೆದ್ದ ತಂಡ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಸೋತ ತಂಡದ ಹೋರಾಟ ಅಂತ್ಯಗೊಳ್ಳಲಿದೆ. ಭಾರತ ವಿರುದ್ದ ಮುಗ್ಗರಿಸಿರುವ ಪಾಕಿಸ್ತಾನ ಇದೀಗ ಸುಲಭ ತುತ್ತಾಗಿರುವ ಹಾಂಗಾಂಗ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಹಾಂಕಾಂಗ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಂಕಾಂಗ್ ಹಾಗೂ ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪಾಕಿಸ್ತಾನ ಪ್ಲೇಯಿಂಗ್ 11
ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ
ಏಷ್ಯಾಕಪ್‌ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್‌ಗೆ ಬುಲಾವ್!
ಹಾಂಗ್ ಕಾಂಗ್ ಪ್ಲೇಯಿಂಗ್ 11
ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಷಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಗಜನ್ಫರ್
ಎ ಗುಂಪಿನಲ್ಲಿರುವ ಪಾಕಿಸ್ತಾನ ಹಾಗೂ ಹಾಂಕಾಂಗ್(Pakistan vs Hong Kong) ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಎರಡೂ ತಂಡಗಳು ಭಾರತದ ವಿರುದ್ದ ಮುಗ್ಗರಿಸಿತ್ತು. ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ರೋಚಕ ಗೆಲುವು ಕಂಡಿತ್ತು. ಇನ್ನು ಹಾಂಕಾಂಗ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ(Team India) 40 ರನ್ ಗೆಲುವು ದಾಖಲಿಸಿತ್ತು. ಹಾಂಕಾಂಗ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿತ್ತು. ಇದೀಗ ಎ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯ ನಿರ್ಣಾಯವಾಗಿದೆ. ಗೆದ್ದ ತಂಡ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಸೋತ ತಂಡ ಏಷ್ಯಾಕಪ್(Asia Cup 2022) ಟೂರ್ನಿಯಿಂದ ಹೊರಬೀಳಲಿದೆ. ಬಿ ಗುಂಪಿನಿಂದ ಈಗಾಗಲೇ ಬಾಂಗ್ಲಾದೇಶ ಹೊರಬಿದ್ದಿದೆ.
ಕಿಂಗ್ ಕೊಹ್ಲಿಗೆ ಹಾಂಕಾಂಗ್ ತಂಡದ ಸ್ಪೆಷಲ್ ಗಿಫ್ಟ್ 'ಒಂದು ಯುಗದ ಕ್ರಿಕೆಟಿಗರ ಸ್ಫೂರ್ತಿ ನೀವು' ಎಂದ ಟೀಮ್
ಬಾಂಗ್ಲಾದೇಶ ಔಟ್
ಏಷ್ಯಾಕಪ್ ಟಿ20 ಟೂರ್ನಿಯಿಂದ ಬಾಂಗ್ಲಾದೇಶ(Bangaladesh T20) ಹೊರಬಿದ್ದಿದೆ. ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ(Sri lanka) ವಿರುದ್ಧ 2 ವಿಕೆಟ್ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ಅಷ್ಘಾನಿಸ್ತಾನಕ್ಕೆ ಶರಣಾಗಿದ್ದ ಬಾಂಗ್ಲಾದೇಶ, ಸತತ 2ನೇ ಸೋಲಿನೊಂದಿಗೆ ನಿರಾಸೆ ಅನುಭವಿಸಿತು. ಶ್ರೀಲಂಕಾ ಸಹ ಆಫ್ಘನ್ ವಿರುದ್ಧ ಸೋಲುಂಡಿತ್ತು. ಆದರೆ ಈ ಗೆಲುವಿನೊಂದಿಗೆ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಿತು. ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಶ್ರೀಲಂಕಾ 19.2 ಓವರಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಸ್ಕೋರ್: ಬಾಂಗ್ಲಾದೇಶ 20 ಓವರಲ್ಲಿ 183/7(ಅಫೀಫ್ 39, ಮೆಹದಿ 38, ಚಾಮಿಕ 2-32), ಶ್ರೀಲಂಕಾ 20 ಓವರಲ್ಲಿ 000/0(ಕುಸಾಲ್ 60, ಶಾನಕ 45, ಎಬಾದತ್ 3-51)
