Asianet Suvarna News Asianet Suvarna News

ಕೊರೋನಾದಿಂದ ಕ್ರಿಕೆಟ್‌ಗೆ ಮತ್ತೊಂದು ಹೊಡೆತ; ಏಷ್ಯಾಕಪ್ ಟೂರ್ನಿ ರದ್ದು!

  • ಐಪಿಎಲ್ ಟೂರ್ನಿ ಸ್ಥಗಿತಗೊಂಡ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ರದ್ದು
  • ಕೊರೋನಾ ಆತಂಕದಿಂದ ಟೂರ್ನಿ ಆಯೋಜಿಸಲು ಅಸಾಧ್ಯ
  • ಕ್ರಿಕೆಟಿಗರ 2ನೇ ವರ್ಷ ಕೊರೋನಾ ಕಾರಣ ಮನೆಯೊಳಗೆ ಬಂಧಿ
     
Asia Cup 2021 called off over the COVID 19 pandemic threat CKM
Author
Bengaluru, First Published May 19, 2021, 9:12 PM IST

ಕೊಲೊಂಬೊ(ಮೇ.19): ಕೊರೋನಾ ವೈರಸ್ ಇದೀಗ ಪ್ರತಿ ಕ್ಷೇತ್ರಕ್ಕೆ ಹೊಡೆತ ನೀಡುತ್ತಿದೆ. ಕೊರೋನಾ ನಡುವೆ ಆರಂಭಿಸಿದ ಐಪಿಎಲ್ ಟೂರ್ನಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರದ್ದಾಯಿತು. ಇದೀಗ ಪ್ರತಿಷ್ಠಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಕೊರೋನಾ ಕಾರಣದಿಂದ ರದ್ದಾಗಿದೆ.

ಆಸೀಸ್‌ ಕ್ವಾರಂಟೈನ್‌ಗೂ ಬಿಸಿಸಿಐನಿಂದಲೇ ಹಣ!

ಶ್ರೀಲಂಕಾದಲ್ಲಿ ಆಯೋಜಿಸಲು ಉದ್ದೇಶಿಸಿದ್ದ 2021ರ ಏಷ್ಯಾಕಪ್ ಟೂರ್ನಿ ರದ್ದಾಗಿದೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಆಶ್ಲೇ ಡಿ ಸಿಲ್ವ ಸ್ಪಷ್ಟಪಡಿಸಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಬಹುತೇಕ ದೇಶದಲ್ಲಿ ಕೊರೋನಾ 2ನೇ ಅಲೆ ವಿಪರೀತವಾಗಿದೆ. ಹೀಗಾಗಿ ಟೂರ್ನಿ ಅನಿವಾರ್ಯವಾಗಿ ರದ್ದು ಮಾಡಬೇಕಿದೆ ಎಂದು ಅ್ಯಶ್ಲೇ ಹೇಳಿದ್ದಾರೆ.

ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಆತಿಥೇಯ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಮಲೇಷಿಯಾ ತಂಡಗಳು ಪಾಲ್ಗೊಳ್ಭೇಕಿತ್ತು. ಆದರೆ ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೋನಾ ಅಲೆ ಆತಂಕದ ವಾತಾರವಣ ಸೃಷ್ಟಿಸಿದೆ. 

ಕೋವಿಡ್ ಸೋಂಕಿನಿಂದ ಹಸ್ಸಿ ಗುಣಮುಖ, ಸಾಹಗೆ ಮತ್ತೆ ಪಾಸಿಟಿವ್‌!

ಕೊರೋನಾ ಕಾರಣ ಜೂನ್ ತಿಂಗಳಲ್ಲಿ ಏಷ್ಯಾಕಪ್ ಟೂರ್ನಿ ಅಸಾಧ್ಯವಾಗಿದೆ. ಕೆಲ ದಿನಗಳಲ್ಲಿ ಕೊರೋನಾ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ಲಕ್ಷಣಗಳಿಲ್ಲ. ಇದರ ಜೊತೆಗೆ ಕೆಲ ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನೂ ರದ್ದುಮಾಡಿದೆ. ಪರಿಸ್ಥಿತಿ ಹೀಗಿರುವಾಗ ಕ್ರಿಕೆಟ್ ಆಯೋಜನೆ ಸಾಧ್ಯವಿಲ್ಲ ಎಂದು ಆ್ಯಶ್ಲೆ ಹೇಳಿದ್ದಾರೆ. 2021ರ ಏಷ್ಯಾಕಪ್ ಟೂರ್ನಿಯನ್ನು 2023ರ ವಿಶ್ವಕಪ್ ಟೂರ್ನಿ ಬಳಿಕ ಆಯೋಜಿಸಲಾಗುವುದು ಎಂದಿದ್ದಾರೆ.

Follow Us:
Download App:
  • android
  • ios