* ಅಸ್ಟ್ರೇಲಿಯಾಗೆ ವಾಪಾಸ್ಸಾದ ಐಪಿಎಲ್‌ನಲ್ಲಿ ಪಾಲ್ಗೊಂಡ ಆಟಗಾರರು* ಮಾಲ್ಡೀವ್ಸ್‌ನಿಂದ ಸಿಡ್ನಿಗೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರು* ಸಿಡ್ನಿಯಲ್ಲಿನ ಕ್ವಾರಂಟೈನ್‌ ವ್ಯವಸ್ಥೆಗೂ ಬಿಸಿಸಿಐನದ್ದೇ ಹಣ

ಸಿಡ್ನಿ(ಮೇ.19): ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಆಟಗಾರನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವವರೆಗೂ ಟೂರ್ನಿ ಮುಗಿಯುವುದಿಲ್ಲ ಎಂದಿದ್ದ ಬಿಸಿಸಿಐ, ತಾನು ಕೊಟ್ಟಿದ್ದ ಮಾತು ಉಳಿಸಿಕೊಳ್ಳುತ್ತಿದೆ. 

ಆಸ್ಪ್ರೇಲಿಯಾದ ಆಟಗಾರರು, ಕೋಚ್‌, ಸಿಬ್ಬಂದಿ ಸೇರಿ 38 ಮಂದಿಯನ್ನು ಮಾಲ್ಡೀವ್ಸ್‌ನ ರೆಸಾರ್ಟ್‌ನಲ್ಲಿ 10 ದಿನಗಳ ಕಾಲ ಇರಿಸಿದ್ದ ಬಿಸಿಸಿಐ, ವಿಶೇಷ ವಿಮಾನದ ಮೂಲಕ ಸೋಮವಾರ ಆಸ್ಪ್ರೇಲಿಯಾ ತಲುಪಿಸಿತು. ಆಸ್ಪ್ರೇಲಿಯಾ ಸರ್ಕಾರದ ನಿಯಮದ ಪ್ರಕಾರ 14 ದಿನಗಳ ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇರಬೇಕಿದ್ದು, ಹೋಟೆಲ್‌ ಬಿಲ್‌ ಅನ್ನು ಸಹ ಬಿಸಿಸಿಐಯೇ ಭರಿಸಲಿದೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ. ಅಲ್ಲದೆ ಬಿಸಿಸಿಐನ ಕಾಳಜಿಗೆ ಧನ್ಯವಾದ ತಿಳಿಸಿದೆ.

ಐಪಿಎಲ್ 2021: 'ಆಸ್ಟ್ರೇಲಿಯಾ ಆಟಗಾರರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ'

ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಬರುವ ವಿಮಾನಗಳಿಗೆ ಮೇ.15ರ ವರೆಗೆ ಪ್ರಯಾಣ ನಿರ್ಬಂಧ ಹೇರಿದ್ದರಿಂದ, ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಬಯೋ ಬಬಲ್‌ನೊಳಗೆ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. 

ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರು ತವರಿಗೆ ಮರಳಲು ತಮಗೇನು ವ್ಯವಸ್ಥೆ ಬೇಕು ಅದನ್ನು ಅವರೇ ಮಾಡಿಕೊಳ್ಳಬೇಕು. ಈ ಆಟಗಾರರಿಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ಸರ್ಕಾರ ಒದಗಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಶನ್ ಈ ಹಿಂದೆಯೇ ಹೇಳಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona