ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದಿದ್ದು, ಮುಂಬರುವ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಜ.16): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಶುಕ್ರವಾರ ಮುಂಬೈ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದರು.
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹರಾರಯಣ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಅರ್ಜುನ್ 1 ವಿಕೆಟ್ ಕಬಳಿಸಿದರು. ವಿಶೇಷ ಎಂದರೆ ಸಚಿನ್ ಮುಂಬೈ ಪರ ತಮ್ಮ ಕೊನೆ ಪಂದ್ಯವನ್ನು ಹರಾರಯಣ ವಿರುದ್ಧ ಆಡಿದ್ದರು. ಇದೀಗ 21 ವರ್ಷದ ಅರ್ಜುನ್ ತೆಂಡುಲ್ಕರ್ ತಮ್ಮ ಮೊದಲ ಪಂದ್ಯವನ್ನು ಹರಾರಯಣ ವಿರುದ್ಧ ಆಡಿದ್ದಾರೆ. ಒಟ್ಟು 3 ಓವರ್ ಬೌಲಿಂಗ್ ಮಾಡಿದ ಅರ್ಜುನ್ 34 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕಿಂದು ರೈಲ್ವೇಸ್ ಸವಾಲು
ಹಿರಿಯರ ತಂಡದಲ್ಲಿ ಆಡಿದ ಕಾರಣ, ಅರ್ಜುನ್ ಐಪಿಎಲ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಅರ್ಜುನ್ ಯಾವುದಾದರೂ ಒಂದು ತಂಡದ ಪಾಲಾಗುವ ನಿರೀಕ್ಷೆ ಇದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 19.3 ಓವರ್‌ಗಳಲ್ಲಿ 143 ರನ್ ಬಾರಿಸಿ ಆಲೌಟ್ ಆಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹರ್ಯಾಣ ತಂಡ ಹಿಮಾಂಶು ರಾಣಾ ಆಕರ್ಷಕ (75 ರನ್ 53 ಎಸೆತ) ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ ಮುಂಬೈ ತಂಡ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸತತ 3 ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
