Asianet Suvarna News Asianet Suvarna News

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್‌ ಮುಡಿಗೆ ಚೊಚ್ಚಲ ಟಿ20 ಟ್ರೋಫಿ

ಅನ್ಮೋಲ್‌ಪ್ರೀತ್ 61 ಎಸೆತದಲ್ಲಿ 113 ರನ್ ಸಿಡಿಸಿದರೆ, ನೇಹಲ್ ವಧೇರಾ 27 ಎಸೆತದಲ್ಲಿ 61 ರನ್ ಚಚ್ಚಿದರು. ಇವರಿಬ್ಬರ ಸ್ಫೋಟಕ ಆಟದ ನೆರವಿನಿಂದ ಪಂಜಾಬ್ 20 ಓವರಲ್ಲಿ 4 ವಿಕೆಟ್‌ಗೆ 223 ರನ್ ಪೇರಿಸಿತು. ಕೊನೆಯ 21 ಎಸೆತಗಳಲ್ಲಿ ಪಂಜಾಬ್ 9 ಸಿಕ್ಸರ್, 3 ಬೌಂಡರಿ ಸಿಡಿಸಿತು. ಕೊನೆಯ 10 ಓವರಲ್ಲಿ 143 ರನ್ ಚಚ್ಚಿತು.

Anmolpreet hundred Arshdeep four-for guide Punjab to 20 run win over Baroda and maiden SMAT title kvn
Author
First Published Nov 7, 2023, 12:52 PM IST

ಮೊಹಾಲಿ(ನ.07): ಅನ್ಮೋಲ್‌ಪ್ರೀತ್ ಸಿಂಗ್‌ರ ಶತಕ ಹಾಗೂ ಅರ್ಶ್‌ದೀಪ್ ಸಿಂಗ್‌ರ ಆಕರ್ಷಕ ಡೆತ್ ಓವರ್ ಬೌಲಿಂಗ್ ನೆರವಿನಿಂದ ಪಂಜಾಜ್ ಇದೇ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟ್ರೋಫಿ ಗೆದ್ದಿದೆ. ಸೋಮವಾರ ನಡೆದ ಫೈನಲ್‌ನಲ್ಲಿ ಪಂಜಾಬ್, 2 ಬಾರಿ ಚಾಂಪಿಯನ್ ಬರೋಡಾ ವಿರುದ್ಧ 20 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಅನ್ಮೋಲ್‌ಪ್ರೀತ್ 61 ಎಸೆತದಲ್ಲಿ 113 ರನ್ ಸಿಡಿಸಿದರೆ, ನೇಹಲ್ ವಧೇರಾ 27 ಎಸೆತದಲ್ಲಿ 61 ರನ್ ಚಚ್ಚಿದರು. ಇವರಿಬ್ಬರ ಸ್ಫೋಟಕ ಆಟದ ನೆರವಿನಿಂದ ಪಂಜಾಬ್ 20 ಓವರಲ್ಲಿ 4 ವಿಕೆಟ್‌ಗೆ 223 ರನ್ ಪೇರಿಸಿತು. ಕೊನೆಯ 21 ಎಸೆತಗಳಲ್ಲಿ ಪಂಜಾಬ್ 9 ಸಿಕ್ಸರ್, 3 ಬೌಂಡರಿ ಸಿಡಿಸಿತು. ಕೊನೆಯ 10 ಓವರಲ್ಲಿ 143 ರನ್ ಚಚ್ಚಿತು.

ಬೃಹತ್ ಮೊತ್ತ ಬೆನ್ನತ್ತಿದ ಬರೋಡಾ 20 ಓವರಲ್ಲಿ 7 ವಿಕೆಟ್‌ಗೆ 203 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಅಭಿಮನ್ಯು ಸಿಂಗ್, ನಿನಾದ್, ಕೃನಾಲ್ ರ ಹೋರಾಟ ವ್ಯರ್ಥವಾಯಿತು. ಆರ್ಶದೀಪ್ 4 ಓವರಲ್ಲಿ ಕೇವಲ 23 ರನ್‌ಗೆ 4 ವಿಕೆಟ್ ಕಿತ್ತರು.

ಸ್ಕೋರ್: 
ಪಂಜಾಬ್ 20 ಓವರಲ್ಲಿ 223/4 (ಅನ್ಮೋಲ್‌ಪ್ರೀತ್ 113, ನೇಹಲ್ 61*, ಕೃನಾಲ್ 30/1),
ಬರೋಡಾ 20 ಓವರಲ್ಲಿ 203/7 (ಅಭಿಮನ್ಯು 61, ನಿನಾದ್ 47, ಕೃನಾಲ್ 45, ಅರ್ಶ್‌ದೀಪ್ 23/4)

ಆಸೀಸ್‌ ವಿರುದ್ಧ ಟಿ20 ಸರಣಿಗೆ ರಿಯಾನ್‌?

ನವದೆಹಲಿ: ಏಕದಿನ ವಿಶ್ವಕಪ್‌ ಮುಕ್ತಾಯಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿರುವ ಭಾರತ ತಂಡದಲ್ಲಿ ಯುವ ಆಲ್ರೌಂಡರ್‌ ರಿಯಾನ್‌ ಪರಾಗ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ.23ರಂದು ಸರಣಿ ಆರಂಭಗೊಳ್ಳಲಿದ್ದು, ಮುಂದಿನ ವಾರ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌, ಸಂಜು ಸ್ಯಾಮ್ಸನ್‌ಗೂ ಸ್ಥಾನ ಸಿಗಬಹುದು ಎನ್ನಲಾಗಿದೆ.

ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟರ್: ರಿಕಿ ಪಾಂಟಿಂಗ್

ನವದೆಹಲಿ: ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ. ‘ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟರ್. ಅದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮಾತನ್ನು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ’ ಎಂದಿರುವ ಪಾಂಟಿಂಗ್, ‘ಕೊಹ್ಲಿ ತಾವು ಶ್ರೇಷ್ಠ ಬ್ಯಾಟರ್ ಎನ್ನುವುದನ್ನು ಸಾಬೀತುಪಡಿಸಲು ಸಚಿನ್ ತೆಂಡುಲ್ಕರ್‌ರ ದಾಖಲೆಗಳನ್ನು ಮುರಿಯಬೇಕು ಎಂದೇನಿಲ್ಲ. ಅವರ ಬ್ಯಾಟಿಂಗ್ ಅಂಕಿ-ಅಂಶಗಳನ್ನು ಗಮನಿಸಿದರೆ ಸಾಕು ಯಾರಾದರೂ ಅವರು ಶ್ರೇಷ್ಠ ಆಟಗಾರ ಎಂದು ಒಪ್ಪಲೇಬೇಕು’ ಎಂದಿದ್ದಾರೆ.

ಭಾರತ ವಿರುದ್ದ ಸೋಲು: ಸರ್ಕಾರದಿಂದ ಲಂಕಾ ಕ್ರಿಕೆಟ್ ಮಂಡಳಿ ವಜಾ!

ಕೊಲಂಬೊ: ಭಾರತ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಆ ದೇಶದ ಕ್ರೀಡಾ ಸಚಿವ ರೋಶನ್ ರಣಸಿಂಘೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿದ್ದಾರೆ. ಮಂಡಳಿಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ಹುದ್ದೆಯಿಂದ ಕೆಳಗಿಳಿಸಿರುವ ಸಚಿವ ರಣಸಿಂಘೆ, ಮಾಜಿ ನಾಯಕ ಅರ್ಜುನ ರಣತುಂಗ ಅವರ ನೇತೃತ್ವದಲ್ಲಿ 7 ಸದಸ್ಯರ ತಾತ್ಕಾಲಿಕ ಕ್ರಿಕೆಟ್ ಸಮಿತಿಯೊಂದನ್ನು ರಚಿಸಿದ್ದಾರೆ.

Follow Us:
Download App:
  • android
  • ios