ಕಾಠ್ಮಂಡು (ನೇಪಾ​ಳ): ಟಿ20 ಕ್ರಿಕೆಟ್‌ ಟೂರ್ನಿಯೊಂದರಲ್ಲಿ ನೇಪಾಳ ತಂಡದ ಆಟಗಾರ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಪುರುಷ/ಮಹಿಳಾ ಟಿ20 ಕ್ರಿಕೆಟ್‌ನಲ್ಲೇ ನೂತನ ದಾಖಲೆಯಾಗಿದೆ. ಇಲ್ಲಿನ ಪೊಕಹರಾದಲ್ಲಿ ಸೋಮವಾರ ನಡೆದ 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌ನ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯವೊಂದರಲ್ಲಿ ನೇಪಾಳ ತಂಡದ ಆಟಗಾರ್ತಿ ಅಂಜಲಿ ಚಾಂದ್‌, ಯಾವುದೇ ರನ್‌ ನೀಡದೆ 6 ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ: ಸಂತಸದ ಅಲೆಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್; ಆಸೀಸ್ ಆಟಗಾರ್ತಿಗೆ 1 ನಿಷೇಧ!

ಮಾಲ್ಡೀವ್ಸ್ ವಿರು​ದ್ಧದ ಮಹಿಳಾ ಟಿ20ಕ್ರಿಕೆಟ್‌ ಪಂದ್ಯದಲ್ಲಿ ಅಂಜಲಿ, ಹ್ಯಾಟ್ರಿಕ್‌ ಸಹಿತ ಸೊನ್ನೆಗೆ 6 ವಿಕೆಟ್‌ ಕಿತ್ತರು. ಮಹಿಳಾ ಟಿ20 ಕ್ರಿಕೆಟ್‌ನ ಉದ್ಘಾ​ಟನಾ ಪಂದ್ಯ​ದಲ್ಲೇ ಅಂಜಲಿ ವಿಶ್ವ​ದಾ​ಖ​ಲೆಗೆ ಸಾಕ್ಷಿ​ಯಾ​ಗಿದೆ. ಪಂದ್ಯದಲ್ಲಿ 13 ಎಸೆ​ತ​ಗ​ಳಲ್ಲಿ 6 ವಿಕೆಟ್‌ ಕಿತ್ತ ಅಂಜಲಿ, ಕೊನೆಯ 3 ಎಸೆ​ತ​ಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆ​ದರು. ಅವರ 2.1 ಓವ​ರ್‌​ಗ​ಳಲ್ಲಿ 2 ಮೇಡನ್‌ ಒಳ​ಗೊಂಡಿ​ದ್ದ​ವು. ಪುರು​ಷರ ಅಥವಾ ಮಹಿಳಾ ಟಿ20ಯಲ್ಲಿ ದಾಖ​ಲಾದ ಅತ್ಯು​ತ್ತಮ ಬೌಲಿಂಗ್‌ ಪ್ರದ​ರ್ಶ​ನ​ವಿದು. 2019ರ ಜನವರಿಯಲ್ಲಿ ಚೀನಾ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಮಲೇಷ್ಯಾ ಬೌಲರ್‌ ಮಸ್‌ ಎಲೈಸಾ 6 ರನ್‌ಗಳಿಗೆ 3 ವಿಕೆಟ್‌ ಪಡೆದಿದ್ದರು.

ಇದನ್ನೂ ಓದಿ: 15 ವರ್ಷದ ಶಫಾಲಿ ವರ್ಮಾ ಅಬ್ಬರ; ಭಾರತಕ್ಕೆ ಸುಲಭ ಜಯ

ಮಾಲ್ಡೀವ್‌್ಸ 10.1 ಓವ​ರ್‌​ಗ​ಳಲ್ಲಿ 16 ರನ್‌ಗಳಿಸಿ ಆಲೌ​ಟಾ​ಯಿತು. ನೇಪಾಳ ತಂಡ, ಮಾಲ್ಡೀವ್‌್ಸ ನೀಡಿದ ಈ ಅಲ್ಪ ಗುರಿಯನ್ನು ಕೇವಲ 5 ಎಸೆ​ತ​ಗ​ಳಲ್ಲಿ 17 ರನ್‌ ಗಳಿ​ಸುವ ಮೂಲಕ ಜಯದ ನಗೆ ಬೀರಿತು. ಇತ್ತೀ​ಚೆಗೆ ಬಾಂಗ್ಲಾ​ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ ದೀಪಕ್‌ ಚಹರ್‌ 7 ರನ್‌ ನೀಡಿ 6 ವಿಕೆಟ್‌ ಪಡೆದು ದಾಖಲೆ ನಿರ್ಮಿಸಿದ್ದರು.