Asianet Suvarna News Asianet Suvarna News

15 ವರ್ಷದ ಶಫಾಲಿ ವರ್ಮಾ ಅಬ್ಬರ; ಭಾರತಕ್ಕೆ ಸುಲಭ ಜಯ

15 ವರ್ಷದ ಶಫಾಲಿ ವರ್ಮಾ ವೆಸ್ಟ್ ಇಂಡೀಸ್ ವಿರುದ್ದ ಸತತ ಎರಡನೇ ಟಿ20 ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ಸುಲಭ ಗೆಲುವು ದಾಖಲಿಸಲು ನೆರವಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

2nd T20I Shafali Verma Deepti Sharma power India Women team win over West Indies
Author
West Indies, First Published Nov 12, 2019, 12:23 PM IST

ಗ್ರಾಸ್ ಐಲೆಟ್[ನ.12]: ಶಫಾಲಿ ವರ್ಮಾ ಅವರ ಸತತ 2ನೇ ಅರ್ಧಶತಕ, ದೀಪ್ತಿ ಶರ್ಮಾರ ಆಕರ್ಷಕ ಬೌಲಿಂಗ್ (4-10) ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. 

ಸಚಿನ್ ದಾಖಲೆ ಮುರಿದ 15 ವರ್ಷದ ಶಫಾಲಿ

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ದೀಪ್ತಿ ಶರ್ಮಾ ಮಾರಕ ದಾಳಿಗೆ ಕೆರಿಬಿಯನ್ ಪಡೆ ತತ್ತರಿಸಿ ಹೋಯಿತು. ವಿಂಡೀಸ್ ಪಾಳಯದಲ್ಲಿ ಮೂವರು ಬ್ಯಾಟ್ಸ್’ವುಮನ್ ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ದೀಪ್ತಿ 4 ವಿಕೆಟ್ ಪಡೆದರೆ, ಶಿಖಾ ಪಾಂಡೆ, ರಾಧಾ ಯಾದವ್ ಹಾಗೂ ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು.

ಟಿ20: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

ಸುಲಭ ಗುರಿ ಬೆನ್ನತ್ತಿದ ಭಾರತ 10.3 ಓವರ್‌ಗಳಲ್ಲಿ ಜಯದ ಸಂಭ್ರಮ ಆಚರಿಸಿತು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ 30 ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದ ಶಫಾಲಿ, ಎರಡನೇ ಪಂದ್ಯದಲ್ಲೂ ಮತ್ತೊಂದು ಅರ್ಧಶತಕ ದಾಖಲಿಸಿದರು. ಶಫಾಲಿ 35 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 69 ರನ್’ಗಳಿಸಿ ಅಜೇಯರಾಗಿ ಉಳಿದರು. ಶಫಾಲಿಗೆ ಉತ್ತಮ ಸಾಥ್ ನೀಡಿದ ಸ್ಮೃತಿ ಮಂಧನಾ 30 ರನ್ ಬಾರಿಸಿದರು. ಭಾರತ ಪರ ಕೇವಲ 10 ರನ್ ನೀಡಿ 4 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸ್ಕೋರ್: 

ವಿಂಡೀಸ್ 20 ಓವರಲ್ಲಿ 103/7(ಚೆಡೀನ್ 32, ದೀಪ್ತಿ 4-10)

ಭಾರತ 10.3.೩ ಓವರಲ್ಲಿ 104/10(ಶಫಾಲಿ 69, ಸ್ಮತಿ 30)
 

Follow Us:
Download App:
  • android
  • ios