ದುಬೈ(ಮಾ.03): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥರಾಗಿ ಮರು ನೇಮಕಗೊಂಡಿದ್ದಾರೆ. 

ಶನಿವಾರ ಇಲ್ಲಿ ಮುಕ್ತಾಯಗೊಂಡ 6 ದಿನಗಳ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕುಂಬ್ಳೆ 3 ವರ್ಷಗಳ ಕಾಲ ಹುದ್ದೆಯಲ್ಲಿ ಇರಲಿದ್ದು, ಇದು ಅವರ ಕೊನೆ ಅವಧಿಯಾಗಿದೆ. 2012ರಲ್ಲಿ ಅವರು ಮೊದಲ ಬಾರಿಗೆ ಕ್ರಿಕೆಟ್‌ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬಳಿಕ 2016ರಲ್ಲಿ 2ನೇ ಅವಧಿಗೆ ಮರು ನೇಮಕಗೊಂಡಿದ್ದರು.

ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್‌ ಸಮಿತಿ ಹಲವು ಅಮೂಲಾಗ್ರ ಬದಲಾವಣೆಯನ್ನು ತಂದಿದೆ. ಅದರ ವಿವರ ಇಲ್ಲಿದೆ ನೋಡಿ...

ಐಸಿಸಿ ನಿಯಮಗಳಲ್ಲಾದ ಪ್ರಮುಖ ಹೊಸ ಬದಲಾವಣೆಗಳಿವು