ನವ​ದೆ​ಹ​ಲಿ(ಅ.27):  ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ದೃಷ್ಟಿ​ಕೋ​ನ​ವನ್ನು ಮಾಜಿ ನಾಯಕ ಅನಿಲ್‌ ಕುಂಬ್ಳೆ ಬೆಂಬ​ಲಿ​ಸಿ​ದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಪ್ರೇಕ್ಷ​ಕ​ರನ್ನು ಕರೆ​ತ​ರು​ವುದಕ್ಕೆ ದೇಶ​ದೆ​ಲ್ಲೆಡೆ 5 ಪ್ರಮುಖ ಮೈದಾ​ನ​ಗ​ಳನ್ನು ಗುರು​ತಿ​ಸ​ಬೇ​ಕೆಂದು ನಾಯಕ ಕೊಹ್ಲಿ ಪ್ರಸ್ತಾ​ಪಿ​ಸಿ​ದ್ದರು. 

ಇದನ್ನೂ ಓದಿ: ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ 5 ಕ್ರೀಡಾಂಗಣ ಸಾಕು; ವಿರಾಟ್ ಕೊಹ್ಲಿ!

ಕೊಹ್ಲಿ ಹೊಂದಿರುವ ದೃಷ್ಟಿ​ಕೋ​ನ​ವನ್ನು ಕುಂಬ್ಳೆ ಬೆಂಬ​ಲಿ​ಸಿ​ರು. ‘ನಾನು ಕೋಚ್‌ ಆಗಿ​ದ್ದಾಗ 6 ವಿವಿಧ ಮೈದಾ​ನ​ಗ​ಳಲ್ಲಿ ಟೆಸ್ಟ್‌ ಆಡಿ​ದ್ದೆವು. ಆದರೆ ಇಂದೋ​ರ್‌​ನಲ್ಲಿ ಮಾತ್ರ ಪ್ರೇಕ್ಷ​ಕರು ತುಂಬಿ​ದ್ದರು. 80-90ರ ದಶ​ಕ​ದಲ್ಲಿ ನಿರ್ಧಿಷ್ಟಮೈದಾ​ನ​ಗ​ಳಲ್ಲಿ ಟೆಸ್ಟ್‌ ಆಯೋ​ಜಿ​ಸುತ್ತಿ​ದ್ದರು. ಹೊಸ​ವ​ರ್ಷಕ್ಕೆ ಕೋಲ್ಕತಾ ಟೆಸ್ಟ್‌, ಪೊಂಗಲ್‌ ಹಬ್ಬಕ್ಕೆ ಚೆನ್ನೈ​ನಲ್ಲಿ ಟೆಸ್ಟ್‌ ನಡೆ​ಯು​ತ್ತಿತ್ತು. ಟೆಸ್ಟ್‌ ಋುತು ಡೆಲ್ಲಿ​ಯಲ್ಲಿ ಆರಂಭ​ವಾಗಿ, ಬೆಂಗ​ಳೂರು, ಮುಂಬೈನಲ್ಲಿ ಪಂದ್ಯ​ಗಳು ನಡೆ​ಯು​ತ್ತಿ​ದ್ದ​ವು’ ಎಂದು ಕುಂಬ್ಳೆ ತಿಳಿ​ಸಿ​ದ​ರು.

ಇದನ್ನೂ ಓದಿ: ಅನಿಲ್ ಕುಂಬ್ಳೆ ಕೆಳಗಿಳಿಸಿದ್ದು ಕೊಹ್ಲಿ; ಸೀಕ್ರೆಟ್ ಬಿಚ್ಚಿಟ್ಟ ಬಿಸಿಸಿಐ ನಿರ್ಗಮಿತ COA!

ಸೌತ್ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ 5 ಟೆಸ್ಟ್ ಮೈದಾನವನ್ನು ಗುರುತಿಸಬೇಕು. ಈ ಮೈದಾನದಲ್ಲಿ ಮಾತ್ರ ಟೆಸ್ಟ್ ಪಂದ್ಯ ಆಡಿಸಬೇಕು ಎಂದಿದ್ದರು. ರಾಂಚಿ ಟೆಸ್ಟ್ ಪಂದ್ಯಕ್ಕೆ ಅಭಿಮಾನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ 5 ಮೈದಾನಗಳನ್ನು  ಗುರುತಿಸಿಲು ಕೊಹ್ಲಿ ಸೂಚಿಸಿದ್ದರು.