ನವದೆಹಲಿ(ಮೇ.30): ಫಿಕ್ಸಿಂಗ್ ಮುಕ್ತವಾಗಿಸಲು ಪ್ರತಿ ಕ್ರಿಕೆಟ್ ಮಂಡಳಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಠಿಣ ನಿಯಮ ಜಾರಿಯಲ್ಲಿದೆ. ಆದರೆ ಕ್ರಿಕೆಟ್ ಫಿಕ್ಸಿಂಗ್ ಪ್ರಕರಣಗಳು ಈಗಲೂ ಕೇಳಿ ಬರುತ್ತಿದೆ. ಇದೀಗ ಬಂಧಿತ ಬುಕ್ಕಿ ಸಂಜೀವ್ ಚಾವ್ಲಾ ನೀಡಿದ ಹೇಳಿಕೆ ಅಭಿಮಾನಿಗಳಿಗ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ನಿಜವೇ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಕ್ರಿಕೆಟ್‌ನಲ್ಲಿ ಬಹುತೇಕ ಎಲ್ಲಾ ಪಂದ್ಯಗಳು ಒಂದಲ್ಲ ಒಂದು ರೀತಿ ಫಿಕ್ಸ್ ಆಗಿರುತ್ತವೆ ಎಂದು ವಿಚಾರಣೆಯಲ್ಲಿ ಬುಕ್ಕಿ ಸಂಜೀವ್ ಚಾವ್ಲಾ ಹೇಳಿದ್ದಾರೆ.  

ಕರಿಯರ್ ಉತ್ತುಂಗದಲ್ಲಿ ನಾಯಕತ್ವ ಕಳೆದುಕೊಂಡು ನಿಷೇಧಕ್ಕೆ ಗುರಿಯಾದ ಐವರು ಕ್ರಿಕೆಟರ್ಸ್!.

2000ನೇ ಇಸವಿಯಲ್ಲಿ ನಡೆದ ಹಾಗೂ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಮ್ಯಾಚ್ ಫಿಕ್ಸಿಂಗ್ ರೂವಾರಿ ಸಂಜೀವ್ ಚಾವ್ಲಾ. ಬುಕ್ಕಿ ಸಂಜೀವ್ ಚಾವ್ಲಾ ಸೌತ್ ಆಫ್ರಿಕಾ ನಾಯಕ ಹ್ಯಾನ್ಸಿ ಕ್ರೋನಿಯೆ ಬಳಿ ಪಂದ್ಯವನ್ನು ಫಿಕ್ಸ್ ಮಾಡಿದ್ದರು. ಬಳಿಕ ಬಹುದೊಡ್ಡ ವಿವಾದ ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲ ಕ್ರೋನಿಯೆ ತಪ್ಪೊಪ್ಪಿಕೊಂಡಿದ್ದರು. ಅಮಾನತ್ತಾದ ಕ್ರೋನಿಯೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

KPL ಫಿಕ್ಸಿಂಗ್‌: 16 ಮಂದಿ ವಿರುದ್ಧ ಚಾರ್ಜ್ ಶೀಟ್

1990-2000ನೇ ಇಸವಿಯಲ್ಲಿ ಕ್ರಿಕೆಟ್ ಪಂದ್ಯದ ಮೇಲೆ ಭೂಗತ ಜಗತ್ತಿನ ಸಂಪೂರ್ಣ ಕೈವಾಡವಿತ್ತು. ಈಗಲೂ ಪಂದ್ಯ ಫಿಕ್ಸ್ ಆಗುತ್ತವೆ. ಇದರಲ್ಲೂ ಭೂಗತ ಜಗತ್ತಿನ ಕೈವಾಡವಿದೆ. ಹೆಚ್ಚು ಕಡಿಮೆ ಎಲ್ಲಾ ಪಂದ್ಯಗಳು ಫಿಕ್ಸ್ ಆಗಿರುತ್ತದೆ ಎಂದು ಸಂಜೀವ್ ಚಾವ್ಲಾ ಹೇಳಿದ್ದಾರೆ. ಅಭಿಮಾನಿಗಳು ಆನಂದಿಸುವ ಪ್ರತಿ ಪಂದ್ಯ ಫಿಕ್ಸಿಂಗ್ ಆಗಿದೆ ಎಂದಿದ್ದಾರೆ. 

ಚಾವ್ಲಾ ಹೇಳಿಕೆ ಇದೀಗ ಕ್ರಿಕೆಟ್ ವಲಯವನ್ನೇ ಅನುಮಾನದಿಂದ ನೋಡುವಂತಾಗಿದೆ. ಇತ್ತ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ದೆಹಲಿ ಪೊಲೀಸರು ವಿಚಾರಣೆ ಹಂತದಲ್ಲಿ ಎಲ್ಲಾ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಂಪೂರ್ಣ ವಿಚಾರಣೆ ಬಳಿಕ ಹೇಳಿಕೆಯ ಸತ್ಯಾಸತ್ಯತೆ ಕುರಿತು ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

2000ನೇ ಇಸವಿ ಫಿಕ್ಸಿಂಗ್ ಪ್ರಕರಣ
ಸೌತ್ ಆಫ್ರಿಕಾ ಹಾಗೂ ಭಾರತ ನಡುವಿನ ಸರಣಿ ಅತ್ಯಂತ ವಿವಾದಾತ್ಮಕ ಸರಣಿಯಾಗಿ ಮಾರ್ಪಟ್ಟಿತ್ತು. ಸೌತ್ ಆಫ್ರಿಕಾ ನಾಯಕ ಪಂದ್ಯ ಫಿಕ್ಸಿಂಗ್ ಮಾಡಿದ ಆರೋಪ ಗುರಿಯಾದರು.   ವಿಚಾರಣೆಯಲ್ಲಿ ತಪ್ಪು ಒಪ್ಪಿಕೊಂಡಿದ್ದರು, ಇಷ್ಟೇ ಅಲ್ಲ, ಹ್ಯಾನ್ಸಿ ಕ್ರೊನಿಯೆ ತನಗೆ ಸಂಜೀವ್ ಚಾವ್ಲಾ ಪರಿಚಯಿಸಿದ್ದು, ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್ ಎಂದಿದ್ದರು. ಹೀಗಾಗಿ ಫಿಕ್ಸಿಂಗ್ ಪ್ರಕರಣ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೂ ಸುತ್ತಿಕೊಂಡಿತ್ತು. ಅಜರ್ ಸೇರಿದಂತೆ ಹಲವರು ಅಮಾನತ್ತಾಗಿದ್ದರು. ಆದರೆ ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.