ಕರಿಯರ್ ಉತ್ತುಂಗದಲ್ಲಿ ನಾಯಕತ್ವ ಕಳೆದುಕೊಂಡು ನಿಷೇಧಕ್ಕೆ ಗುರಿಯಾದ ಐವರು ಕ್ರಿಕೆಟರ್ಸ್!
ಕ್ರಿಕೆಟ್ ಇತಿಹಾಸದಲ್ಲಿ ಹಲವು ಕ್ರಿಕೆಟಿಗರು ವಿವಾದಗಳಿಂದ ಕರಿಯರ್ ಅಂತ್ಯಗೊಳಿಸಿದ್ದಾರೆ. ತಮ್ಮ ಕರಿಯರ್‌ನ ಉತ್ತುಂಗದಲ್ಲಿರುವಾಗಲೇ ವಿವಾದ ಮೈಮೇಲೇ ಎಳೆದುಕೊಂಡು ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಇಷ್ಟೇ ಅಲ್ಲ ನಿಷೇಧಕ್ಕೂ ಒಳಗಾಗಿದ್ದಾರೆ. ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಸೇರಿದಂತೆ ಕರಿಯರ್ ಉತ್ತುಂಗದಲ್ಲಿ ಕಣ್ಣೀರು ಹಾಕಿದ ಕ್ರಿಟರ್ಸ್ ವಿವರ ಇಲ್ಲಿದೆ.
ಸೌತ್ ಆಫ್ರಿಕಾ ಕಂಡ ಅತ್ಯುತ್ತಮ ಕ್ರಿಕೆಟಿಗ ಹಾಗೂ ನಾಯಕ ಹ್ಯಾನ್ಸಿ ಕ್ರೊನಿಯ 7ನೇ ಏಪ್ರಿಲ್ 2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾದರು
ಭಾರತದ ಬುಕ್ಕಿ ಸಂಜಯ್ ಚಾವ್ಲಾ ಜೊತೆ ಸೇರಿಕೊಂಡು ನಾಗ್ಪುರ ಪಂದ್ಯವನ್ನು ಫಿಕ್ಸ್ ಮಾಡಿರುವುದು ಸಾಬೀತಾಯಿತು. ಹೀಗಾಗಿ ಹ್ಯಾನ್ಸಿ ಕ್ರೊನಿಯೆ ನಾಯಕತ್ವ ಮಾತ್ರವಲ್ಲ ಅಜೀವ ನಿಷೇಧ ಎದುರಿಸಿದರು. ಆದರೆ 2002ರಲ್ಲಿ ಹ್ಯಾನ್ಸಿ ಕ್ರೊನಿಯೆ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.
ಹ್ಯಾನ್ಸಿ ಕ್ರೋನಿಯೆ ವಿಚಾರಣೆಯಲ್ಲಿ ಭಾರತದ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರು ಕೇಳಿ ಬಂದಿತ್ತು. ಇತ್ತ ವಿಚಾರಣೆ ಬಳಿಕ ಬಿಸಿಸಿಐ ಮೊಹಮ್ಮದ್ ಅಜರುದ್ದೀನ್ ಹಾಗೂ ಅಜಯ್ ಶರ್ಮಾಗೆ ಅಜೀವ ನಿಷೇಧ ಹೇರಿದರು. ಅಜಯ್ ಜಡೇಜಾಗೆ 5 ವರ್ಷ ನಿಷೇಧ ಹೇರಲಾಯಿತು.
ಮೊಹಮ್ಮದ್ ಅಜರುದ್ದೀನ್ ನಾಯಕತ್ವ ಕಳೆದುಕೊಂಡರು, ನಿಷೇಧದ ಸಮಯದಲ್ಲಿ ಸತತ ಕಾನೂನು ಹೋರಾಟ ಮಾಡಿದ ಅಜರ್ 2012ರಲ್ಲಿ ತನ್ನ ಮೇಲಿನ ಆರೋಪಗಳಿಂದ ಹೊರಬಂದರು.
2018ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರ್ ಮಾಡಿ ಸಿಕ್ಕಿಬಿದ್ದರು. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬೆನ್‌ಕ್ರಾಫ್ಟ್ ಮೇಲೆ ನಿಷೇಧ ಹೇರಲಾಯಿತು.
ಸ್ಟೀವ್ ಸ್ಮಿತ್ ನಾಯಕತ್ವ ಕಳೆದುಕೊಂಡರು. ಒಂದು ವರ್ಷಗಳ ಬಳಿಕ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಬಾಂಗ್ಲಾದೇಶ ಅಲ್ರೌಂಡರ್ ಶಕೀಬ್ ಅಲ್ ಹಸನ್ ವಿಶ್ವದ ಅತ್ಯುತ್ತಮ ಆಲ್ರೌಂಡರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಫಿಕ್ಸಿಂಗ್‌ಗಾಗಿ ಬುಕ್ಕಿಗಳು ಸಂಪರ್ಕ ಮಾಡಲು ಯತ್ನಿಸಿದ್ದ ವಿಚಾರವನ್ನು ಗೌಪ್ಯವಾಗಿಟ್ಟ ಕಾರಣಕ್ಕೆ ಶಕೀಬ್‌ಗೆ ನಿಷೇಧ ಹೇರಲಾಗಿದೆ.
ಅಕ್ಟೋಬರ್ 29, 2020ರಲ್ಲಿ ಶಕೀಬ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಅವಕಾಶ ನೀಡಲಾಗಿದೆ. ಆದರೆ ಶಕೀಬ್ ನಾಯಕತ್ವ ಕಳೆದುಕೊಂಡಿದ್ದಾರೆ.
ಕೀನ್ಯಾ ತಂಡದ ನಾಯಕ ಮಾರಿಸ್ ಒಡುಂಬೆ 1994ರಲ್ಲಿ ಬ್ರಿಯಾನ್ ಲಾರಾ ಆಟೋಗ್ರಾಫ್ ಕೇಳಿದ್ದರು. ಆದರೆ ನಿರಾಕರಿಸಲಾಗಿತ್ತು. 1996ರ ವಿಶ್ವಕಪ್ ಟೂರ್ನಿಯಲ್ಲಿ ಲಾರಾ ವಿಕೆಟ್ ಕಬಳಿಸಿ ಬಳಿಕ ಲಾರಾಗೆ ಖುದ್ದು ಆಟೋಗ್ರಾಫ್ ನೀಡಿದ ಪ್ರತಿಭಾನ್ವಿತ. ಆದರೆ 2004ರಲ್ಲಿ ನಾಯಕ ಮಾರಿಸ್ ಒಡುಂಬೆ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿದರು
2004ರಲ್ಲಿ ಮಾರಿಸ್ ಒಡುಂಬೆ ಆರೋಪ ಸಾಬೀತಾಗಿತ್ತು. ಹೀಗಾಗಿ 5 ವರ್ಷಗಳ ನಿಷೇಧ ಹೇರಲಾಯಿತು