Asianet Suvarna News Asianet Suvarna News

IPL Bidding : ಇಂದು 2 ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್..!

* ಸೋಮವಾರವಾದ ಇಂದು ಹೊಸ 2 ಐಪಿಎಲ್‌ ತಂಡಗಳಿಗೆ ಬಿಡ್ಡಿಂಗ್

* ಹೊಸ ತಂಡದ ಪಾಲುದಾರರಾಗಲು ಗೌತಮ್ ಗಂಭೀರ್ ಆಸಕ್ತಿ

* 2022ರ ಐಪಿಎಲ್‌ನಲ್ಲಿ 10 ತಂಡಗಳು ಸ್ಪರ್ಧೆ

All Cricket Fans Need to Know 2 New IPL Teams Bidding kvn
Author
Bengaluru, First Published Oct 25, 2021, 1:22 PM IST

ದುಬೈ(ಅ.25): 2022ರ ಐಪಿಎಲ್‌ನಲ್ಲಿ (IPL 2022) 10 ತಂಡಗಳು ಸ್ಪರ್ಧಿಸಲಿದ್ದು, 2 ಹೊಸ ತಂಡಗಳಿಗಾಗಿ ಸೋಮವಾರ ಬಿಡ್ಡಿಂಗ್‌ ನಡೆಯಲಿದೆ. ತಂಡ ಖರೀದಿಸಲು ಭಾರೀ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದ್ದು, ಪ್ರತಿ ತಂಡವು 7,000 ಕೋಟಿ ರು.ನಿಂದ 10,000 ಕೋಟಿ ರು.ವರೆಗೂ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ.

22 ಸಂಸ್ಥೆಗಳು 10 ಲಕ್ಷ ರುಪಾಯಿ ಪಾವತಿಸಿ ಟೆಂಡರ್‌ ಪ್ರತಿಯನ್ನು ಖದೀರಿಸಿದ್ದು, ಪ್ರತಿ ತಂಡದ ಮೂಲಬೆಲೆಯನ್ನು 2,000 ಕೋಟಿ ರು.ಗೆ ಬಿಸಿಸಿಐ (BCCI) ನಿಗದಿ ಪಡಿಸಿದೆ. ಅಂದರೆ ತಂಡದ ಬಿಡ್ಡಿಂಗ್‌ ಈ ಮೊತ್ತದಿಂದ ಆರಂಭಗೊಳ್ಳಲಿದೆ. ಮೂಲಬೆಲೆಯೇ ಅಧಿಕವಾಗಿರುವ ಕಾರಣ, 6 ಇಲ್ಲವೇ 7 ಸಂಸ್ಥೆಗಳ ನಡುವೆ ಮಾತ್ರ ತಂಡ ಖರೀದಿಗೆ ಪ್ರಬಲ ಪೈಪೋಟಿ ನಡೆಯಬಹುದು ಎನ್ನಲಾಗಿದೆ.

IPL ಪ್ರಸಾರ ಹಕ್ಕು ಹರಾಜಿಗೆ ತಯಾರಿ, 36,000 ಕೋಟಿ ರೂ ನಿರೀಕ್ಷೆಯಲ್ಲಿ BCCI!

ಬಿಸಿಸಿಐ ಗರಿಷ್ಠ 3 ಸಂಸ್ಥೆ ಇಲ್ಲವೇ ವ್ಯಕ್ತಿಗಳು ಒಗ್ಗೂಡಿ ತಂಡ ಖರೀದಿಸಲು ಸಹ ಅವಕಾಶ ಕಲ್ಪಿಸಿದೆ. ತಂಡ ಖರೀದಿಸಲು ಮುಂದಾಗುವ ಸಂಸ್ಥೆ ಕಳೆದ 3 ವರ್ಷಗಳಲ್ಲಿ ವಾರ್ಷಿಕ 3,000 ಕೋಟಿ ರು. ವ್ಯವಹಾರ ನಡೆಸಿರಬೇಕಿದೆ. ಒಕ್ಕೂಟದಡಿ ತಂಡ ಖರೀದಿಸುವುದಾದರೆ ಪ್ರತಿ ಸದಸ್ಯ ಇಲ್ಲವೇ ಸಂಸ್ಥೆ ಕಳೆದ 3 ವರ್ಷಗಳಲ್ಲಿ ವಾರ್ಷಿಕ 2500 ಕೋಟಿ ರು. ವ್ಯವಹಾರ ನಡೆಸಿರಬೇಕು ಎನ್ನುವ ಷರತ್ತನ್ನು ಬಿಸಿಸಿಐ ವಿಧಿಸಿದೆ.

ಪಾಕ್‌ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?

ಅದಾನಿ, ಗೋಯೆಂಕಾ ಫೇವರಿಟ್‌

ತಂಡ ಖರೀದಿಸಲು ಕೆಲ ಪ್ರತಿಷ್ಠಿತ ಸಂಸ್ಥೆಗಳು ಆಸಕ್ತಿ ತೋರಿವೆ. ಈ ಪೈಕಿ ಅದಾನಿ ಗ್ರೂಪ್(Adani Group), ಗೋಯೆಂಕಾ, ಕೋಟಕ್‌, ಅರುಬಿಂದೋ ಫಾರ್ಮಾ, ಟೋರೆಂಟ್‌ ಸಮೂಹ, ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಅತ್ಯಂತ ಜನಪ್ರಿಯ ತಂಡ ಮ್ಯಾಂಚೆಸ್ಟರ್‌ ಯುನೈಟೆಡ್‌ನ (Manchester United) ಮಾಲಿಕರಾದ ಏವ್ರಮ್‌ ಗ್ಲೇಜರ್‌ ಇದ್ದಾರೆ. ಅದಾನಿ ಹಾಗೂ ಗೋಯೆಂಕಾ ಸಂಸ್ಥೆಗಳು ತಂಡ ಖರೀದಿಸುವ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿವೆ ಎನ್ನಲಾಗಿದೆ. ಗೋಯೆಂಕಾ ಸಂಸ್ಥೆಯ ಮಾಲಿಕ ಸಂಜೀವ್‌ ಗೋಯೆಂಕಾ, 2 ವರ್ಷಗಳ ಕಾಲ ಪುಣೆ ಸೂಪರ್‌ಜೈಂಟ್ಸ್‌ ತಂಡವನ್ನು ಹೊಂದಿದ್ದರು.

7 ನಗರಗಳ ಪೈಕಿ 2 ನಗರಗಳಿಗೆ ಬಿಡ್‌

ಹರಾಜಿನಲ್ಲಿ ತಂಡ ಖರೀದಿಸುವ ಸಂಸ್ಥೆಯು 7 ನಗರಗಳ ಪೈಕಿ ಒಂದು ನಗರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆಸನ ಸಾಮರ್ಥ್ಯದ ಆಧಾರದ ಮೇಲೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ(1 ಲಕ್ಷಕ್ಕೂ ಹೆಚ್ಚು ಆಸನ) ಹಾಗೂ ಲಖನೌನ ಏಕನಾ ಕ್ರೀಡಾಂಗಣ(70000 ಆಸನ ಸಾಮರ್ಥ್ಯ)ವನ್ನು ತಂಡಗಳು ಆಯ್ಕೆ ಮಾಡಿಕೊಳ್ಳಬಹುದು. ಈ ಎರಡು ನಗರಗಳಲ್ಲದೆ ಇಂದೋರ್‌, ಗುವಾಹಟಿ, ಕಟಕ್‌, ಧರ್ಮಶಾಲಾ ಹಾಗೂ ಪುಣೆಯನ್ನು ಸಹ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹಳೆದ 8 ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ ಎನ್ನಲಾಗಿದೆಯಾದರೂ, ಈ ಕುರಿತಂತೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ

IPL 2022; ಹೊಸ ತಂಡ ಖರೀದಿ ಮಾಡುವತ್ತ ದೀಪಿಕಾ-ರಣವೀರ್ ಚಿತ್ತ

ತಂಡವೊಂದರಲ್ಲಿ ಗಂಭೀರ್‌ ಪಾಲುದಾರ?

ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ, 2 ಬಾರಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಗೌತಮ್‌ ಗಂಭೀರ್‌ (Gautam Gambhir) ತಂಡವೊಂದರಲ್ಲಿ ಪಾಲುದಾರರಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಗಂಭೀರ್‌ ಸುಮಾರು 300 ಕೋಟಿ ರುಪಾಯಿ ಹೂಡಿಕೆ ಮಾಡಲು ಸಿದ್ಧರಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Follow Us:
Download App:
  • android
  • ios