IPL ಪ್ರಸಾರ ಹಕ್ಕು ಹರಾಜಿಗೆ ತಯಾರಿ, 36,000 ಕೋಟಿ ರೂ ನಿರೀಕ್ಷೆಯಲ್ಲಿ BCCI!
- IPL ಬ್ರಾಡ್‌ಕಾಸ್ಟಿಂಗ್ ರೈಟ್ಸ್ ಹರಾಜಿಗೆ ಬಿಸಿಸಿಐ ಸಿದ್ಧತೆ
- ಸ್ಟಾರ್ ಇಂಡಿಯಾ ಬಳಿ ಇರುವ ಹಕ್ಕು ಮುಂದಿನ ಆವೃತ್ತಿಗೆ ಅಂತ್ಯ
- ಶೀಘ್ರದಲ್ಲೇ ಹರಾಜಿಗೆ ಬಿಸಿಸಿಐ ತಯಾರಿ,ವಿದೇಶಿ ಕಂಪನಿಗಳ ಆಸಕ್ತಿ
ಮುಂಬೈ(ಅ.22): IPL 2021ರ ಟೂರ್ನಿ ಅಂತ್ಯಗೊಂಡು ಇದೀಗ ಬಿಸಿಸಿಐ(BCCI) ಟಿ20 ವಿಶ್ವಕಪ್ ಟೂರ್ನಿ ಮೇಲೆ ಚಿತ್ತ ಹರಿಸಿದೆ. ಇದರ ನಡುವೆ ಮುಂಬರವು ಐಪಿಎಲ್ ಟೂರ್ನಿ ಹಾಗೂ ಪ್ರಸಾರ ಹಕ್ಕು ಹರಾಜಿಗೆ ತಯಾರಿ ನಡೆಸುತ್ತಿದೆ. ಕಾರಣ ಸದ್ಯ ಸ್ಟಾರ್ ಇಂಡಿಯಾ ಜೊತೆ ಮಾಡಿಕೊಂಡಿರುವ 5 ವರ್ಷಗಳ ಒಪ್ಪಂದ 2022ರ ಐಪಿಎಲ್ ಟೂರ್ನಿಯೊಂದಿಗೆ ಅಂತ್ಯಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಶೀಘ್ರದಲ್ಲೇ ಐಪಿಎಲ್ ಬ್ರಾಡ್‌ಕಾಸ್ಟಿಂಗ್ ರೈಟ್ಸ್(Broadcasting Rights) ಮಾರಾಟ ಮಾಡಲಿದೆ.
ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಐಪಿಎಲ್ ತಂಡ ಖರೀದಿ ಸಾಧ್ಯತೆ!
2018 ರಿಂದ 2022ರ ವರೆಗಿನ 5 ವರ್ಷಗಳ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು. ಹರಾಜಿನಲ್ಲಿ ಸೋನಿ ಸೇರಿದಂತೆ ಹಲವು ದಿಗ್ಗಜ ಕಂಪನಿಗಳನ್ನು ಹಿಂದಿಕ್ಕಿದ ಸ್ಟಾರ್ ಇಂಡಿಯಾ ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕಿಗಾಗಿ 16,347.50 ಕೋಟಿ ರೂಪಾಯಿ ನೀಡಿತ್ತು. ಆದರೆ ಮುಂಬರುವ 5 ವರ್ಷಗಳ ಪ್ರಸಾರ ಹಕ್ಕು ಹರಾಜಿನಲ್ಲಿ ಬಿಸಿಸಿಐ ಇದರ ದುಪ್ಪಟ್ಟು ಹಣದ ನಿರೀಕ್ಷೆಯಲ್ಲಿದೆ.
ಬಿಸಿಸಿಐ ಮೂಲಗಳ ಪ್ರಕಾರ ಈ ಬಾರಿಯ ಹರಾಜು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಲಿದೆ. 2023ರಿಂದ 2027ರ ವರೆಗಿನ ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕು ಬರೋಬ್ಬರಿ 5 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 36,000 ಕೋಟಿ ರೂಪಾಯಿಗಿ ಹರಾಜಾಗುವ ಸಾಧ್ಯತೆ ಇದೆ. ಮಾರ್ಕೆಟ್ ತಜ್ಞರು ಈ ಕುರಿತು ಅಭಿಪ್ರಾಯಪಟ್ಟಿದ್ದಾರೆ.
IPL ಎಂ ಎಸ್ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ CSK..!
ಮುಂದಿನ 5 ವರ್ಷಗಳ ಐಪಿಎಲ್ ಟೂರ್ನಿಯಲ್ಲಿ ಕೆಲ ವಿಶೇಷತೆಗಳಿವೆ. ಜೊತೆಗೆ ಆದಾಯವೂ ಹೆಚ್ಚಾಗಲಿದೆ. ಕಾರಣ 8ರ ಬದಲು 10 ತಂಡಗಳು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗಲಿದೆ. ಹೊಸ ಎರಡು ತಂಡ ಹಾಗೂ ಪಂದ್ಯಗಳಿಂದ 7,000 ದಿಂದ 10,000 ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಹೀಗಾಗಿ 36,000 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಹರಾಜಾದರೆ ಅಚ್ಚರಿಯಿಲ್ಲ.
ಅಮೆರಿಕದ ಕೆಲ ಕಂಪನಿಗಳು ಐಪಿಎಲ್ ಪ್ರಸಾರ ಹಕ್ಕು ಪಡೆಯಲು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಬಿಸಿಸಿಐಗೆ ಮನವಿ ಮಾಡಿಕೊಂಡಿದೆ. ಶೀಘ್ರದಲ್ಲೇ ಬಿಸಿಸಿಐ ಟೆಂಡರ್ ಕರೆಯಲಿದೆ. ಐಪಿಎಲ್ ಪ್ರಸಾರ ಹಕ್ಕು ಖರೀದಿಗೆ ಎಂದಿನಂತೆ ಸ್ಟಾರ್ ಇಂಡಿಯಾ, ಸೋನಿ ಮುಂಚೂಣಿಯಲ್ಲಿರಲಿದೆ. ಇದರ ಜೊತೆಗೆ ರಿಲಯನ್ಸ್ ಕೂಡ ಪ್ರಸಾರ ಹಕ್ಕು ಖರೀದಿಗೆ ಆಸಕ್ತಿ ತೋರಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
2008 ರಿಂದ 2017ರ ವರೆಗಿನ 10 ವರ್ಷಗಳ ಒಪ್ಪಂದಕ್ಕೆ ಸೋನಿ 11,050 ಕೋಟಿ ರೂಪಾಯಿ ನೀಡಿತ್ತು. ಆದರೆ 2027ರಿಂದ 2022ರ 5 ವರ್ಷದ ಒಪ್ಪಂದ 16,000 ಕೋಟಿ ರೂಪಾಯಿ ಹರಾಜಾಗಿದೆ. ಇದೀಗ ಮತ್ತೆ ದುಪ್ಪಟ್ಟಗಾವುದರಲ್ಲಿ ಯಾವುದೇ ಅನುಮಾನವಿಲ್ಲ.
IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!
ಅಕ್ಟೋಬರ್ 25 ರಂದು ಬಿಸಿಸಿಐ ಟೆಂಡರ್ ಕರೆಯಲು ನಿರ್ಧರಿಸಿದೆ. ಇದರ ಜೊತೆಗೆ ಹೊಸ ಎರಡು ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಕೂಡ ಆರಂಭಗೊಳ್ಳಲಿದೆ. ಹೊಸ ಎರಡು ತಂಡದ ಬಿಡ್ಡಿಂಗ್ ಪ್ರಕ್ರಿಯೆಯಿಂದ ಬಿಸಿಸಿಐಗೆ ಸರಿಸುಮಾರು 10,000 ಕೋಟಿ ರೂಪಾಯಿ ಆದಾಯ ಬರಲಿದೆ.