Asianet Suvarna News Asianet Suvarna News

ಪಾಕ್‌ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?

* ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡ ಭಾರತ

* ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತು

* ಪತ್ರಕರ್ತನ ಪ್ರಶ್ನೆಗೆ ಹೊಹ್ಲಿ ಗರಂ

Virat Kohli Shuts Down A Journalist On The Question Of Replacing Rohit Sharma With Ishan Kishan  by Priyam Singh pod
Author
Bangalore, First Published Oct 25, 2021, 1:07 PM IST

ಯುಎಇ(ಅ.25): ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿದೆ. ಈ ಪಂದ್ಯದುದ್ದಕ್ಕೂ ಭಾರತ ತಂಡವು ಬಹಳಷ್ಟು ಒತ್ತಡದಲ್ಲಿರುವಂತೆ ಕಾಣಿಸಿತ್ತು. ಪಂದ್ಯದ ನಂತರ ಪತ್ರಿಕಾಗೋಷ್ಠಿಗೆ ಬಂದಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ(Virat kohli), ಪತ್ರಕರ್ತರೊಬ್ಬರು, ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್(Ishan Kishan) ಅವರನ್ನು ಆಟವಾಡಿಸಬೇಕಿತ್ತಾ? ಎಂದು ಪ್ರಶ್ನಿಸಿದ್ದಾಗ ಕೊಹ್ಲಿ ಕೆಂಡಾಮಂಡಲಗೊಂಡಿದ್ದಾರೆ. ಇನ್ನು ಅಭ್ಯಾಸ ಪಂದ್ಯದಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ.

ಪತ್ರಕರ್ತನ ಪ್ರಶ್ನೆ ಏನು?

ವಾಸ್ತವವಾಗಿ ವಿರಾಟ್ ಕೊಹ್ಲಿ ಬಳಿ ಪತ್ರಕರ್ತ ರೋಹಿತ್ ಶರ್ಮಾ(Rohit Sharma) ಬದಲಿಗೆ ಇಶಾನ್ ಕಿಶನ್‌ರನ್ನು ಆಟವಾಡಿಸಬೇಕಿತ್ತಾ? ಎಂದು ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಕೊಹ್ಲಿ ಟಿ 20 ತಂಡದಿಂದ ನಾನು ರೋಹಿತ್ ಶರ್ಮಾ ಅವರನ್ನು ಕೈಬಿಡಬೇಕೆಂದು ನೀವು ಬಯಸುತ್ತೀರಾ? ಎಂದು ಗರಂ ಆಗೇ ಮರು ಪ್ರಶ್ನೆ ಹಾಕಿದ್ದಾರೆ. ನಿಮಗೆ ಏನಾದರೂ ವಿವಾದ ಬೇಕಿದ್ದರೆ ನನಗೆ ತಿಳಿಸಬಹುದು. ಅದಕ್ಕೆ ತಕ್ಕಂತೆ ಉತ್ತರಿಸುತ್ತೇನೆ ಎಂದೂ ಟಾಂಗ್ ಕೊಟ್ಟಿದ್ದಾರೆ.

ರೋಹಿತ್ ಶರ್ಮಾ ಪಾಕಿಸ್ತಾನದ(Pakistan) ವಿರುದ್ಧ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ ಮತ್ತು ಮೊದಲ ಎಸೆತದಲ್ಲೇ ಔಟಾದರು. ಅವರನ್ನು ಶಾಹೀನ್ ಅಫ್ರಿದಿ ಔಟ್ ಮಾಡಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ಇದು ತುಂಬಾ ಧೈರ್ಯಶಾಲಿ ಪ್ರಶ್ನೆ. ನಿಮ್ಮ ಅಭಿಪ್ರಾಯವೇನು ಸರ್? ನಾನು ಅತ್ಯುತ್ತಮವಾದ ತಂಡವನ್ನು ಆರಿಸಿಲ್ಲವೇ? ನಿಮ್ಮ ಅಭಿಪ್ರಾಯ ಏನು? ನೀವು T20 ಅಂತರಾಷ್ಟ್ರೀಯ ಪಂದ್ಯಗಳಿಂದ ರೋಹಿತ್ ಶರ್ಮಾ ಅವರನ್ನು ಹೊರಗಿಡುತ್ತೀರಾ? ನಾವು ಆಡಿದ ಕೊನೆಯ ಪಂದ್ಯದಲ್ಲಿ ಅವರು ಮಾಡಿದ್ದೇನು ನಿಮಗೆ ಗೊತ್ತಾ? ಎಂದು ಕೇಳಿದ್ದಾರೆ.

29 ವರ್ಷಗಳ ಬಳಿಕ ಟೀಂ ಇಂಡಿಯಾ ಸೋಲು 

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ಭಾರತದ ಮೊದಲ ನಾಯಕನಾಗಿದ್ದಾರೆ. 29 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ನಡೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಸೋಲು ಆಗಿದೆ. ಇದಕ್ಕೂ ಮುನ್ನ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ತಂಡ ಸೋಲನುಭವಿಸಬೇಕಾಯಿತು.

ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು

ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭಿಕ ರೋಹಿತ್ ಶರ್ಮಾ ಅವರಿಂದ ಹೆಚ್ಚಿನ ನಿರೀಕ್ಷೆಗಳಿದ್ದವು ಆದರೆ ರೋಹಿತ್ ಶರ್ಮಾ ತಮ್ಮ ಮೊದಲ ಎಸೆತದಲ್ಲೇ ಔಟಾದರು. ಅವರು ಶಾಹೀನ್ ಅಫ್ರಿದಿ ಅವರಿಂದ LBW ಮಾಡಿದರು. ಭಾರತ ತಂಡದ ಸೋಲಿಗೆ ರೋಹಿತ್ ಆರಂಭಿಕ ಔಟಾದದ್ದೇ ದೊಡ್ಡ ಕಾರಣ.

Follow Us:
Download App:
  • android
  • ios