Asianet Suvarna News Asianet Suvarna News

ಎಲ್ಲಾ 16 ಆಟಗಾರರು ಒಂದೇ ಪ್ರೇಮ್‌ನಲ್ಲಿ..! T20 World Cup ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 16ರಿಂದ ಆರಂಭ
ಟೂರ್ನಿಗೂ ಮುನ್ನ ಫೋಟೋಗೆ ಫೋಸ್ ನೀಡಿದ 16 ತಂಡದ ನಾಯಕರು
ಟಿ20 ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ

All 16 Captains In One Frame Ahead Of T20 World Cup 2022 pic goes viral kvn
Author
First Published Oct 15, 2022, 5:18 PM IST

ಸಿಡ್ನಿ(ಅ.15): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾಗಲಿದ್ದು, ಕ್ವಾಲಿಫೈಯರ್ ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವು ನಮೀಬಿಯಾ ವಿರುದ್ದ ಕಣಕ್ಕಿಯಲಿದೆ. ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ 16 ತಂಡಗಳ ನಾಯಕರು ಒಟ್ಟಿಗೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲಾ 16 ನಾಯಕರು ಒಂದೇ ಫ್ರೇಮ್‌ನಲ್ಲಿ ಎಂದು ತಲೆಬರಹ ನೀಡಿದೆ. ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು, 40 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 

ಇನ್ನು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ಕಿರು ಪರಿಚಯವನ್ನು ಮತ್ತೊಮ್ಮೆ ಮಾಡಿಕೊಳ್ಳುವುದಾದರೇ, ಈ ಚುಟುಕು ಮಹಾ ಸಂಗ್ರಾಮವು ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾದ 7 ನಗರಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಈಗಾಗಲೇ 8 ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿವೆ. ಇನ್ನು 8 ತಂಡಗಳು ಅರ್ಹತಾ ಸುತ್ತಿನಲ್ಲಿ ಕಾದಾಡಲಿದ್ದು, ಈ ಪೈಕಿ 4 ತಂಡಗಳು ಸೂಪರ್‌ 12 ಹಂತಕ್ಕೆ ಪ್ರವೇಶ ಪಡೆಯಲಿವೆ. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 12 ಹಂತಕ್ಕೆ ನೇರ ಅರ್ಹತೆ ಪಡೆಯಲು ವಿಫಲವಾಗಿದ್ದು, ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುತ್ತಿವೆ. 

ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೂಪರ್ 12 ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿವೆ. ಇನ್ನು ಅರ್ಹತಾ ಸುತ್ತಿನಲ್ಲಿ ನಮೀಬಿಯಾ, ನೆದರ್‌ಲೆಂಡ್ಸ್‌, ಶ್ರೀಲಂಕಾ, ಯುಎಇ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್‌ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ. ಈ 8 ತಂಡಗಳ ಪೈಕಿ 4 ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ.

ನವೆಂಬರ್ 13ರಂದು ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ತಂಡವು ಬರೋಬ್ಬರಿ 1.6 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 13 ಕೋಟಿ ರುಪಾಯಿ) ನಗದು ಬಹುಮಾನ ಪಡೆಯಲಿದೆ. ಟಿ20 ವಿಶ್ವಕಪ್ ವಿಜೇತ ತಂಡವು 1.6 ಮಿಲಿಯನ್ ಡಾಲರ್ ಬಹುಮಾನ ಪಡೆದರೆ, ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ತಂಡವು ಚಾಂಪಿಯನ್ ತಂಡವು ಪಡೆಯುವ ಬಹುಮಾನದ ಅರ್ಧದಷ್ಟು ನಗದು ಬಹುಮಾನ(ಆರೂವರೆ ಕೋಟಿ ರುಪಾಯಿ) ಪಡೆಯಲಿದೆ ಎಂದು ಐಸಿಸಿ ತಿಳಿಸಿದೆ. 

T20 World Cup: ಇಂಡೋ-ಪಾಕ್ ಆಟಗಾರರು ಮುಖಾಮುಖಿಯಾದಾಗ ಏನೆಲ್ಲಾ ಮಾತಾಡ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಒಟ್ಟಾರೆ 5.6 ಮಿಲಿಯನ್ ಡಾಲರ್‌(45.57 ಕೋಟಿ ರುಪಾಯಿ)ಗಳ ಪೈಕಿ ಸೆಮಿಫೈನಲ್ ಪ್ರವೇಶಿಸುವ ಪ್ರತಿ ತಂಡಗಳು ತಲಾ  4,00,000 ಡಾಲರ್‌ಗಳನ್ನು (3 ಕೋಟಿ 25 ಲಕ್ಷ) ಪಡೆಯಲಿವೆ. ಇನ್ನು ಸೂಪರ್ 12 ಹಂತದಲ್ಲೇ ಮುಗ್ಗರಿಸುವ 8 ತಂಡಗಳು ತಲಾ 70,000 ಡಾಲರ್ (56 ಲಕ್ಷ) ಬಹುಮಾನ ಪಡೆಯಲಿವೆ.

ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡ ತಂಡವು ಪ್ರತಿ ಪಂದ್ಯದ ಗೆಲುವಿಗೆ 40,000 ಡಾಲರ್(32.5 ಲಕ್ಷ ರುಪಾಯಿ) ನಗದು ಬಹುಮಾನ ಪಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ಜರುಗಲಿವೆ. ಇನ್ನು ಅರ್ಹತಾ ಸುತ್ತಿನಲ್ಲಿಯೇ ಹೊರಬೀಳುವ 4 ತಂಡಗಳು ತಲಾ 32 ಲಕ್ಷ ರುಪಾಯಿ ಬಹುಮಾನ ಪಡೆಯಲಿವೆ. 

Follow Us:
Download App:
  • android
  • ios