ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನವಾಗಿ ಭೀಕರ ದುರಂತ ಸಂಭವಿಸಿದೆ. ಡೇವಿಡ್ ವಾರ್ನರ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಲಟ್‌ನ ಸಮಯಪ್ರಜ್ಞೆಯಿಂದ ಸಾವಿರಾರು ಜನರ ಪ್ರಾಣ ಉಳಿದಿದೆ.
ಬೆಂಗಳೂರು: ಜೂನ್ 12ರಂದು ಅಹಮದಾಬಾದ್‌ನಿಂದ ಮಧ್ಯಾಹ್ನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಗಳನ್ನು ಹೊತ್ತು ಲಂಡನ್‌ಗೆ ಸಾಗುತ್ತಿದ್ದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನವು ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡು ಭೀಕರ ದುರ್ಘಟನೆ ನಡೆದಿದೆ. ಇದು ದೇಶದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ವೈಮಾನಿಕ ದುರಂತ ಎನಿಸಿಕೊಂಡಿದೆ. ಇದರ ಬೆನ್ನಲ್ಲೇ ಬೋಯಿಂಗ್ 787 ವಿಮಾನದ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗಳು ಶುರುವಾಗಿವೆ. ಈ ದುರಂತಕ್ಕೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕಂಬನಿ ಮಿಡಿದಿದ್ದಾರೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್, ಈ ಘಟನೆಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಇನ್ನು ಯಾವತ್ತೂ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಫ್ಲೈಟ್ AI 1717 - ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭ್‌ಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನದ ರನ್‌ವೇ ನಿಂದ ಟೇಕ್ ಆಫ್ ಆಗಿ ಕೆಲವೇ ಸೆಕೆಂಡ್‌ಗಳಲ್ಲಿ ಸಂಪರ್ಕ ಕಡಿತಗೊಂಡು ಪತನಗೊಂಡಿತ್ತು. ಈ ಏರ್‌ಕ್ರಾಪ್ಟ್ ಅನ್ನು ಅನುಭವಿ ಪೈಲೇಟ್ ಕ್ಯಾಪ್ಟನ್ ಸುಮೀತ್ ಸಬರ್‌ವಾಲ್ ಹಾಗೂ ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು. ಇವರು ಸುಮಾರು 9,300 ಗಂಟೆಗಳ ಪ್ಲೈಟ್ ಅವರ್ಸ್ ಅನುಭವ ಹೊಂದಿದ್ದರು. ಇಷ್ಟೆಲ್ಲಾ ವಿಮಾನ ಹಾರಾಟದ ಅನುಭವವಿದ್ದರೂ, ವಿಮಾನ ಪತನವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏರ್‌ಲೈನ್ಸ್ ಆಪರೇಷನ್‌ನ ಸೇಫ್ಟಿ ಪ್ರೋಟೋಕಾಲ್, ಏರ್‌ಕ್ರಾಪ್ಟ್ ನಿರ್ವಹಣೆ ಹಾಗೂ ಒಟ್ಟಾರೆ ವಿಮಾನ ಪತನದ ವೈಫಲ್ಯದ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಡೇವಿಡ್ ವಾರ್ನರ್!
ಅಹಮದಾಬಾದ್‌ನ ಈ ಏರ್ ಇಂಡಿಯಾ ಫ್ಲೈಟ್ AI 1717 - ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ದುರಂತಕ್ಕೆ ಆಸ್ಟ್ರೇಲಿಯಾದ ಅನುಭವಿ ಕ್ರಿಕೆಟಿಗ ಡೇವಿಡ್ ವಾರ್ನರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೇಸರ ಹಾಗೂ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಯೂಟ್ಯೂಬ್ ಕಮೆಂಟ್‌ನ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಡೇವಿಡ್ ವಾರ್ನರ್, ಈ ಘಟನೆ ನಡೆದಿರುವುದು ನಿಜವೇ ಆಗಿದ್ದರೇ, ನಿಜಕ್ಕೂ ಶಾಕಿಂಗ್. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಘಟನೆ ತಿಳಿದ ಬಳಿಕವಂತು ನಾನು ಇನ್ಯಾವತ್ತೂ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವುದಿಲ್ಲ ಎಂದು ಡೇವಿಡ್ ವಾರ್ನರ್ ಬರೆದುಕೊಂಡಿದ್ದಾರೆ.
ಡೇವಿಡ್ ವಾರ್ನರ್ ಅವರು ಈ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಡೇವಿಡ್ ವಾರ್ನರ್‌ಗೆ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನಾಯಕರಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್ ವಾರ್ನರ್, 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು.
ಪೈಲಟ್ ಯತ್ನದಿಂದ 2000 ಜನ ಬಚಾವ್!
ಅಹಮದಾಬಾದ್: ಗುರುವಾರ ಪತನವಾದ ಏರ್ ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500 ರಿಂದ 2,000 ಜನರ ಪ್ರಾಣ ಉಳಿಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
“ವಿಮಾನ ಪತನವಾಗುವಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ವಿಮಾನನಮ್ಮ ಮೇಲೆ ತೀರಾ ಹತ್ತಿರದಿಂದ ಹಾದುಹೋಯಿತು. ಅವಘಡದ ಸದ್ದು ಕೇಳಿ, ಸ್ಥಳಕ್ಕೆ ಓಡಿದೆವು. ವಿಮಾನ ಅಪಾಯಕಾರಿಯಾಗಿ ಮನೆಗಳಿಗೆ ಸಮೀಪದಲ್ಲೇ ಹಾದುಹೋಯಿತು. ಪೈಲಟ್ ವಸತಿ ಪ್ರದೇಶದಿಂದ ವಿಮಾನವನ್ನು ಬೇರೆಡೆ ತಿರುಗಿಸಿ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಸಿದ್ದಾರೆ. ಅವರಿಗೆ ಸೆಲ್ಯೂಟ್' ಎಂದಿದ್ದಾರೆ.
