Asianet Suvarna News Asianet Suvarna News

Ahmedabad Test ಶುಭ್‌ಮನ್‌ ಗಿಲ್ ಸೆಂಚುರಿ, ಕೊಹ್ಲಿ ಫಿಫ್ಟಿ, ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು..!

* ಅಹಮದಾಬಾದ್‌ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಚಚ್ಚಿದ ಶುಭ್‌ಮನ್ ಗಿಲ್
* ಮೂರನೇ ದಿನದಾಟದಂತ್ಯಕ್ಕೆ 289 ರನ್ ಬಾರಿಸಿದ ಟೀಂ ಇಂಡಿಯಾ
* ಅಜೇಯ ಶತಕ ಸಿಡಿಸಿ ಮಿಂಚಿದ ಮಾಜಿ ನಾಯಕ ವಿರಾಟ್ ಕೊಹ್ಲಿ

Ahmedabad Test Virat Kohli Hits Fifty India Fight back against Australia on Day 3 kvn
Author
First Published Mar 11, 2023, 5:09 PM IST

ಅಹಮದಾಬಾದ್‌(ಮಾ.11): ಶುಭ್‌ಮನ್‌ ಗಿಲ್‌ ಆಕರ್ಷಕ ಶತಕ ಹಾಗೂ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ ನೆರವಿನಿಂದ ನೆರವಿನಿಂದ ಆಸ್ಟ್ರೇಲಿಯಾ ಎದುರಿನ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ತಿರುಗೇಟು ನೀಡುವತ್ತ ಹೆಜ್ಜೆಹಾಕಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ಕೇವಲ 3 ವಿಕೆಟ್ ಕಳೆದುಕೊಂಡು 289 ರನ್ ಬಾರಿಸಿದ್ದು, ಇನ್ನು ಕೇವಲ 191 ರನ್‌ಗಳ ಹಿನ್ನಡೆಯಲ್ಲಿದೆ. ವಿರಾಟ್ ಕೊಹ್ಲಿ 59 ಹಾಗೂ ರವೀಂದ್ರ ಜಡೇಜಾ 16 ರನ್‌ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಕೆಟ್‌ ನಷ್ಟವಿಲ್ಲದೇ 36 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜೋಡಿ 74 ರನ್‌ಗಳ ಜತೆಯಾಟವಾಡಿತು. ನಾಯಕ ರೋಹಿತ್ ಶರ್ಮಾ 58 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಗಿಲ್-ಪೂಜಾರ ಶತಕದ ಜತೆಯಾಟ: ಮೂರನೇ ದಿನದಾಟದ ಮೊದಲ ಸೆಷನ್‌ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 129 ರನ್‌ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ಸೆಷನ್‌ನಲ್ಲಿ ಕೊಂಚ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಎರಡನೇ ಸೆಷನ್‌ನಲ್ಲಿ ಭಾರತ ಕೇವಲ 57 ರನ್ ಕಲೆಹಾಕಿತು. ಚಹಾ ವಿರಾಮಕ್ಕೆ ಇನ್ನೊಂದು ಓವರ್ ಇದ್ದಾಗ ಚೇತೇಶ್ವರ್ ಪೂಜಾರ ವಿಕೆಟ್ ಕಬಳಿಸುವಲ್ಲಿ ಟೋಡ್‌ ಮರ್ಫಿಗೆ ವಿಕೆಟ್‌ ಒಪ್ಪಿಸಿದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 121 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 42 ರನ್‌ ಬಾರಿಸಿ ಟೋಡ್ ಮರ್ಫಿ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಎರಡನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ ಹಾಗೂ ಶುಭ್‌ಮನ್‌ ಗಿಲ್‌ ಜೋಡಿ 248 ಎಸೆತಗಳನ್ನು ಎದುರಿಸಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Ahmedabad Test: ಶುಭ್‌ಮನ್ ಗಿಲ್‌ ಆಕರ್ಷಕ ಶತಕ, ಆಸೀಸ್‌ಗೆ ತಿರುಗೇಟು ನೀಡುವತ್ತ ಭಾರತ..!

ಶುಭ್‌ಮನ್ ಗಿಲ್ ಆಕರ್ಷಕ ಶತಕ: ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶುಭ್‌ಮನ್ ಗಿಲ್, ಇದೀಗ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಿನದಾಟದ ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗಿಲ್, ಆ ಬಳಿಕ ಕೊಂಚ ಎಚ್ಚರಿಯ ಆಟಕ್ಕೆ ಮೊರೆ ಹೋದರು. ಶುಭ್‌ಮನ್ ಗಿಲ್ 194 ಎಸೆತಗಳನ್ನು ಎದುರಿಸಿ ಟೆಸ್ಟ್‌ ಕ್ರಿಕೆಟ್‌ ವೃತ್ತಿಜೀವನದ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಜತೆಗೆ ಕೆ ಎಲ್ ರಾಹುಲ್ ಬಳಿಕ ಆಸ್ಟ್ರೇಲಿಯಾ ಎದುರು ಶತಕ ಚಚ್ಚಿದ ಎರಡನೇ ಅತಿಕಿರಿಯ ಆರಂಭಿಕ ಬ್ಯಾಟರ್ ಎನ್ನುವ ಹಿರಿಮೆಗೆ 23 ವರ್ಷದ ಗಿಲ್ ಪಾತ್ರರಾದರು. ಅಂತಿಮವಾಗಿ ಶುಭ್‌ಮನ್ ಗಿಲ್‌ 235 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 128 ರನ್‌ ಬಾರಿಸಿ ನೇಥನ್‌ ಲಯನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಕೊಹ್ಲಿ ಆಕರ್ಷಕ ಫಿಫ್ಟಿ: ಪೂಜಾರ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ ಕೂಡಾ ಎಚ್ಚರಿಕೆಯ ಆರಂಭವನ್ನು ಪಡೆದರು. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ, ಇದೀಗ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಗಿಲ್ ಜತೆ ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ 100 ಎಸೆತಗಳನ್ನು ಎದುರಿಸಿ 58 ರನ್‌ಗಳ ಜತೆಯಾಟವಾಡಿದರು. ಇನ್ನು ಬರೋಬ್ಬರಿ 14 ತಿಂಗಳ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಒಟ್ಟು 107 ಎಸೆತಗಳನ್ನು ಎದುರಿಸಿ ವಿರಾಟ್ ಕೊಹ್ಲಿ ಫಿಫ್ಟಿ ಬಾರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ವಿರಾಟ್ ಕೊಹ್ಲಿ 128 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 59 ರನ್‌ ಗಳಿಸಿದರೆ, ಜಡೇಜಾ 16 ರನ್‌ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌:

ಆಸ್ಟ್ರೇಲಿಯಾ: 480/10(ಮೊದಲ ಇನಿಂಗ್ಸ್‌)
ಉಸ್ಮಾನ್ ಖವಾಜ: 180
ಕ್ಯಾಮರೋನ್ ಗ್ರೀನ್: 114

ರವಿಚಂದ್ರನ್ ಅಶ್ವಿನ್: 91/6

ಭಾರತ: 
ಶುಭ್‌ಮನ್ ಗಿಲ್: 128
ವಿರಾಟ್ ಕೊಹ್ಲಿ: 56*

ಮ್ಯಾಥ್ಯೂ ಕುಹ್ಮೆಮಾನ್: 43/1

(* ಮೂರನೇ ದಿನದಾಟ ಮುಕ್ತಾಯದ ವೇಳೆಗೆ)

Follow Us:
Download App:
  • android
  • ios