ಅಹಮದಾಬಾದ್‌ ಟೆಸ್ಟ್ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 480 ರನ್‌ಗಳಿಗೆ ಆಲೌಟ್ಆಕರ್ಷಕ ಶತಕ ಚಚ್ಚಿದ ಉಸ್ಮಾನ್ ಖವಾಜ, ಕ್ಯಾಮರೋನ್ ಗ್ರೀನ್6 ವಿಕೆಟ್ ಕಬಳಿಸಿ ಮಿಂಚಿದ ರವಿಚಂದ್ರನ್ ಅಶ್ವಿನ್

ಅಹಮದಾಬಾದ್‌(ಮಾ.10): ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್‌ ಆಕರ್ಷಕ ಶತಕದ ಹೊರತಾಗಿಯೂ ರವಿಚಂದ್ರನ್ ಅಶ್ವಿನ್‌ ಮಿಂಚಿನ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 480 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ರವಿಚಂದ್ರನ್ ಅಶ್ವಿನ್ 91 ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್‌ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆಹಾಕುವಲ್ಲಿ ಸಫಲವಾಗಿದೆ. ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 409 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಚಹಾ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್, ಉಸ್ಮಾನ್ ಖವಾಜ ಅವರ ಬಲಿ ಪಡೆಯುವಲ್ಲಿ ಯಶಸ್ವಿಯಾದರು. 180 ರನ್ ಬಾರಿಸಿ ದ್ವಿಶತಕದತ್ತ ದಾಪುಗಾಲಿಡುತ್ತಿದ್ದ ಉಸ್ಮಾನ್ ಖವಾಜ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು. ಉಸ್ಮಾನ್ ಖವಾಜ 422 ಎಸೆತಗಳನ್ನು ಎದುರಿಸಿ 21 ಬೌಂಡರಿ ಸಹಿತ 180 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಮರ್ಫಿ-ಲಯನ್ ಅಮೂಲ್ಯ ಜತೆಯಾಟ: 409 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಾಗ 9ನೇ ವಿಕೆಟ್‌ಗೆ ಜತೆಯಾಟ ಟೋಡ್ ಮರ್ಫಿ ಹಾಗೂ ನೇಥನ್ ಲಯನ್‌ ಜೋಡಿ 116 ಎಸೆತಗಳನ್ನು ಎದುರಿಸಿ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 475ರ ಗಡಿ ದಾಟಿಸಿದರು. ಟೋಡ್‌ ಮರ್ಫಿ 61 ಎಸೆತಗಳನ್ನು ಎದುರಿಸಿ 41 ರನ್ ಗಳಿಸಿ ಅಶ್ವಿನ್‌ಗೆ 5ನೇ ಬಲಿಯಾದರು. ಇನ್ನು ಮತ್ತೊಂದು ತುದಿಯಲ್ಲಿ 96 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್‌ ಬಾರಿಸಿ ಅಶ್ವಿನ್‌ಗೆ ಆರನೇ ಬಲಿಯಾದರು.

Ahmedabad Test: ಅಶ್ವಿನ್ ಖಾತೆಗೆ ಮತ್ತೆ ಮೂರು ವಿಕೆಟ್‌, ನಾನೂರರ ಗಡಿ ದಾಟದ ಕಾಂಗರೂ ಪಡೆ..!

Scroll to load tweet…

ಅನಿಲ್ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್‌ ಕುಂಬ್ಳೆ 111 ವಿಕೆಟ್ ಕಬಳಿಸುವ ಮೂಲಕ, ಭಾರತ ಪರ ಗರಿಷ್ಠ ವಿಕೆಟ್ ಸರದಾರರಾಗಿ ಹೊರಹೊಮ್ಮಿದ್ದರು. ಇದೀಗ ಚೆನ್ನೈ ಮೂಲದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಿನ್‌ ಮರ್ಫಿ ವಿಕೆಟ್‌ ಕಬಳಿಸುವ ಮೂಲಕ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 112 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 32ನೇ ಬಾರಿಗೆ 5+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.