Asianet Suvarna News Asianet Suvarna News

T20 World Cup: ಇಂದು ಅಫ್ಘಾನಿಸ್ತಾನ, ನಮೀಬಿಯಾ ಕದನ!

*ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ಬೀಗಿರುವ ನಮೀಬಿಯಾ
*ಪಾಕಿಸ್ತಾನ ವಿರುದ್ಧ ಸೋಲನುಭವಿಸಿರುವ ಆಫ್ಘನ್‌
*ಐಸಿಸಿ ವಿಶ್ವಕಪ್‌ನ 27ನೇ ಪಂದ್ಯ!

Afghanistan and Namibia are set to lock horns i T20 World Cup
Author
Bengaluru, First Published Oct 31, 2021, 7:28 AM IST

ಅಬು ಧಾಬಿ (ಅ. 31): ವಿಶ್ವಕಪ್‌ ಸೂಪರ್‌-12ರ ಹಂತದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ಬೀಗಿರುವ ನಮೀಬಿಯಾ ತಂಡ ಭಾನುವಾರ ಅಫ್ಘಾನಿಸ್ತಾನ ಸವಾಲನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿರುವ ಆಫ್ಘನ್‌ ಸೆಮಿಫೈನಲ್‌ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಕಾತರಿಸುತ್ತಿದ್ದರೆ, ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ನಮೀಬಿಯಾ ಆಫ್ಘನ್‌ಗೂ ಶಾಕ್‌ ನೀಡುವ ನಿರೀಕ್ಷೆಯಲ್ಲಿದೆ. ಪಂದ್ಯ ಭಾನುವಾರ (ಅ. 31) ಮಧ್ಯಾಹ್ನ 3.30ಕ್ಕೆ ಅಬು ಧಾಬಿಯಲ್ಲಿ ಆರಂಭವಾಗಲಿದೆ. 

ಸಂಭವನೀಯ ಆಟಗಾರರ ಪಟ್ಟಿ

ಅಫ್ಘಾನಿಸ್ತಾನ:   ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ , ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್,  ಮೊಹಮ್ಮದ್ ನಬಿ , ಅಸ್ಗರ್ ಅಫ್ಘಾನ್, ಗುಲ್ಬದಿನ್ ನೈಬ್, ಕರೀಮ್ ಜನತ್ / ಹಮಿರೆದ್ ಹಸ್ಸಾನ್ / ಹಮಿರೆದ್ ನೈಬ್, ರಶೀದ್ ಖಾನ್,  ನವೀನ್-ಉಲ್-ಹಕ್, ಮುಜೀಬ್-ಉರ್-ರಹಮಾನ್.

ಆರ್‌ಸಿಬಿ, ಬೆಂಗ್ಳೂರು ಬುಲ್ಸ್‌ಗೆ ರಾಯಭಾರಿಯಾಗಿದ್ದ ಪವರ್‌ಸ್ಟಾರ್‌

ನಮೀಬಿಯಾ: ಕ್ರೇಗ್ ವಿಲಿಯಮ್ಸ್, ಜೇನ್ ಗ್ರೀನ್, ಗೆರ್ಹಾರ್ಡ್ ಎರಾಸ್ಮಸ್, ಡೇವಿಡ್ ವೈಸ್, ಮೈಕೆಲ್ ವ್ಯಾನ್ ಲಿಂಗೆನ್,  ಜೆ ಜೆ ಸ್ಮಿತ್, ಜಾನ್ ಫ್ರೈಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲೋಫ್ಟಿ -ಈಟನ್, ರೂಬೆನ್ ಟ್ರಂಪೆಲ್ಮನ್,  ಬರ್ನಾರ್ಡ್ ಸ್ಕೋಲ್ಟ್ಜ್

ಪಿಚ್‌ ರಿಪೋರ್ಟ್‌ 

ಮಧ್ಯಾಹ್ನದ ಪಂದ್ಯದ ಪ್ರಾರಂಭದಲ್ಲಿ ಅಬುಧಾಬಿಯ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ ಎಂದು ಮುನ್ಸೂಚನೆ ಇದೆ. ಪ್ರತಿ ಬಾರಿಯಂತೆ ಸ್ಪಿನ್ನರ್‌ಗಳಿಗೆ ಅನುಕೂಲದ ನಿರೀಕ್ಷೆಯಿದೆ, ಮತ್ತು ಉದ್ದ ಬೌಂಡರಿಗಳುಳ್ಳ ಈ ಮೈದಾನ ಬೌಲಿಂಗ್ ತಂಡಕ್ಕೆ ಹೆಚ್ಚು ಅನುಕೂಲಕರವಾಗಿರಲಿದೆ.

ಭಾನುವಾರ ಭಾರತ VS ನ್ಯೂಜಿಲೆಂಡ್‌ ನಿರ್ಣಾಯಕ ಪಂದ್ಯ!

 ಟಿ20 ವಿಶ್ವಕಪ್‌ನ (T20 World Cup) ತಮ್ಮ ಆರಂಭಿಕ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ಭಾರತ (India) ಹಾಗೂ ನ್ಯೂಜಿಲೆಂಡ್‌ (New Zealand) ಭಾನುವಾರ (ಅ. 31) ನಿರ್ಣಾಯಕ ಪಂದ್ಯ ಆಡಲಿವೆ. ಈ ಪಂದ್ಯ ಗೆಲ್ಲುವ ತಂಡಕ್ಕೆ ಸೆಮಿಫೈನಲ್‌ ಹಾದಿ ಸುಗಮವಾಗುವ ನಿರೀಕ್ಷೆ ಇದ್ದು, ಸೋಲುವ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಭಾನುವಾರ ಸಂಜೆ 7.30ಕ್ಕೆ ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ.

ಆಸ್ಟ್ರೇಲಿಯಾ ಕಟ್ಟಿ ಹಾಕಿದ ಇಂಗ್ಲೆಂಡ್, ಸಾಧಾರಣ ಗುರಿ

‘ಬಿ’ ಗುಂಪಿನಿಂದ ಸೆಮಿಫೈನಲ್‌ಗೆ ಏರಲು 2 ತಂಡಗಳಿಗೆ ಅವಕಾಶ ಇದೆ. 6 ತಂಡಗಳ ಪೈಕಿ ಪಾಕಿಸ್ತಾನ ಈಗಾಗಲೇ ಭಾರತ, ನ್ಯೂಜಿಲೆಂಡ್‌, ಅಫ್ಘಾನಿಸ್ತಾನವನ್ನು ಸೋಲಿಸಿದ್ದು, ಸೆಮಿಫೈನಲ್‌ ಸೀಟು ಬಹುತೇಕ ಖಚಿತಪಡಿಸಿಕೊಂಡಿದೆ. ಉಳಿದೆರಡು ತಂಡಗಳಾದ ನಮೀಬಿಯಾ (Namibia) ಹಾಗೂ ಸ್ಕಾಟ್ಲೆಂಡ್‌ (Scotland) ಅದಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಭಾರತ, ನ್ಯೂಜಿಲೆಂಡ್‌ ಈವರೆಗೆ ಪಾಕಿಸ್ತಾನ ವಿರುದ್ಧವಷ್ಟೇ ಆಡಿದ್ದು, ಈ ತಂಡಗಳು ಇನ್ನೂ 4 ಪಂದ್ಯ ಆಡಬೇಕಿದೆ. ಈ ಪೈಕಿ, ಭಾನುವಾರದ ಪಂದ್ಯ ಹೊರತುಪಡಿಸಿದರೆ, ಉಳಿದ ಮೂರನ್ನು ಅಷ್ಟಾಗಿ ಬಲಾಢ್ಯ ಅಲ್ಲದ ಆಫ್ಘನ್‌, ನಮೀಬಿಯಾ ಹಾಗೂ ಸ್ಕಾಟ್ಲೆಂಡ್‌ ವಿರುದ್ಧ ಆಡಬೇಕಿದೆ. ಹಾಗಾಗಿ, ಭಾನುವಾರದ ಪಂದ್ಯ ‘ವರ್ಚುವಲ್‌ ಕ್ವಾರ್ಟರ್‌ಫೈನಲ್‌’ ಎನಿಸಿಕೊಂಡಿದೆ.

ಇಂಗ್ಲೆಂಡ್‌ ಅಜೇಯ ಆಟ 

ಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ (Australia Cricket Team) ಹಾಗೂ ಇಂಗ್ಲೆಂಡ್ ತಂಡಗಳು (England Cricket Team) ಮುಖಾಮುಖಿಯಾಗಿದ್ದವು. ಕಡಿಮೆ ಮೊತ್ತಕ್ಕೆ ಕಾಂಗರೂಗಳನ್ನು ಕಟ್ಟಿಹಾಕಿದ್ದ ಇಂಗ್ಲೆಂಡ್ ಬಹಳ ಸಲೀಸಾಗಿ ಗುರಿ ಮುಟ್ಟಿ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿಕೊಂಡಿದೆ

ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಮತ್ತೊಮ್ಮೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ಮಿಲ್ಲರ್ (David Miller) ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ 4 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ವನಿಂದು ಹಸರಂಗ (Wanindu Hasaranga) ಹ್ಯಾಟ್ರಿಕ್ ವ್ಯರ್ಥವಾದರೆ, ಕೊನೆಯ ಓವರ್‌ನಲ್ಲಿ ಮಿಲ್ಲರ್ ಸತತ 2 ಸಿಕ್ಸರ್ ಸಿಡಿಸಿ ಗೆಲುವಿನ ಹೀರೋ ಎನಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

Follow Us:
Download App:
  • android
  • ios