T20 World Cup: ಆಸ್ಟ್ರೇಲಿಯಾ ಕಟ್ಟಿ ಹಾಕಿದ ಇಂಗ್ಲೆಂಡ್, ಸಾಧಾರಣ ಗುರಿ

* ಕಡಿಮೆ ಮೊತ್ತಕ್ಕೆ ಆಸ್ಟ್ರೇಲಿಯಾ ಕಟ್ಟಿಹಾಕಿದ ಇಂಗ್ಲೆಂಡ್
* ಕೊನೆ ಹಂತದಲ್ಲಿ ಅಬ್ಬರಿಸಿದರೂ ಸಾಕಾಗಲಿಲ್ಲ
* ಇಂಗ್ಲೆಂಡ್ ಗೆ ಸಾಧಾರಣ  ಗುರಿ ನೀಡಿದ ಆಸ್ಟ್ರೇಲಿಯಾ

T20 World Cup Eng VS Aus  England dominate Australia to keep them to 125 mah

ದುಬೈ(ಅ.30): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ (Australia Cricket Team) ಹಾಗೂ ಇಂಗ್ಲೆಂಡ್ ತಂಡಗಳು (England Cricket Team) ಮುಖಾಮುಖಿಯಾಗಿವೆ.   ಬಲಿಷ್ಠ ತಂಡಗಳ ಸೆಣೆಸಾಟದಲ್ಲಿ  ಇಂಗ್ಲೆಂಡ್ ಆರಂಭಿಕ ಮೇಲುಗೈ ಪಡೆದುಕೊಂಡಿದೆ.

ಬಿಗಿಯಾದ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 125 ರನ್ ಗೆ ಕಟ್ಟಿ ಹಾಕಿದೆ. ಅರೋನ್ ಫಿಂಚ್ ಮಾತ್ರ  ಒಂದು ಕಡೆ ಇನಿಂಗ್ಸ್ ಕಟ್ಟುವ ಕೆಲಸ ಮಾಡಿದರು.

T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..

ಫಿಂಚ್  44  ರನ್ ಗಳಿಸಿದ್ದು ಬಿಟ್ಟರೆ ಆಸೀಸ್ ನ ಅಗ್ರ ಕ್ರಮಾಂಕ  ಇಂಗ್ಲೆಂಡ್ ಗೆ ತಲೆಬಾಗಿತು. ವಾರ್ನರ್, ಸ್ಮಿತ್, ಮ್ಯಾಕ್ಸ್ ವೆಲ್, ಸ್ಟೋನಿಸ್ ಯಾರೂ ಸಹ ಎರಡು ಅಂಕಿ ದಾಖಲಿಸಲಿಲ್ಲ. ಕೊನೆಯಲ್ಲಿ ರನ್ ಗತಿ ಏರಿಸುವ ಪ್ರಯತ್ನ ಆಸೀಸ್ ನಿಂದ ಆಯಿತು. ಕ್ರಿಸ್ ಜೋರ್ಡಾನ್ ಮೂರು ವಿಕೆಟ್ ಕಿತ್ತರು. ವೋಕ್ಸ್ ಎರಡು ವಿಕೆಟ್ ಪಡೆದುಕೊಂಡರು. 

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ನಗೆ ಬೀರಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ. 

 

 

Latest Videos
Follow Us:
Download App:
  • android
  • ios