Asianet Suvarna News Asianet Suvarna News

ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಸೋಲುಣಿಸಿದ ಆಫ್ಘಾನಿಸ್ತಾನ..!

* ಪಾಕಿಸ್ತಾನ ಎದುರು ಮೊದಲ ಟಿ20 ಗೆಲುವು ಸಾಧಿಸಿದ ಆಫ್ಘಾನಿಸ್ತಾನ
* ಮೊದಲ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು ಪಾಕ್‌ಗೆ ಹೀನಾಯ ಸೋಲು
* ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಮೊಹಮ್ಮದ್ ನಬಿ

Afg vs Pak Mohammad Nabi all round brilliance helps Afghanistan beat Pakistan for the first time kvn
Author
First Published Mar 25, 2023, 10:43 AM IST

ಶಾರ್ಜಾ(ಮಾ.25): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿದ ಮೊಹಮ್ಮದ್ ನಬಿ, ಪಾಕಿಸ್ತಾನ ಎದುರು ಆಫ್ಘಾನಿಸ್ತಾನ ತಂಡವು ಟಿ20 ಕ್ರಿಕೆಟ್‌ನಲ್ಲಿ ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಶಾರ್ಜಾ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಎದುರು ಆಫ್ಘಾನಿಸ್ತಾನ ತಂಡವು 6 ವಿಕೆಟ್‌ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಬೌಲಿಂಗ್‌ನಲ್ಲಿ ಕೇವಲ 12 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದ್ದ ಮೊಹಮ್ಮದ್ ನಬಿ, ಬ್ಯಾಟಿಂಗ್‌ನಲ್ಲಿ ಅಜೇಯ 38 ರನ್ ಬಾರಿಸುವ ಮೂಲಕ ಆಫ್ಘಾನಿಸ್ತಾನ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. 

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಕ್ರಿಕೆಟ್ ತಂಡವು ನಿಧಾನಗತಿಯ ಆರಂಭವನ್ನು ಪಡೆಯಿತು. ಆದರೆ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪತನವಾಗುತ್ತಿದ್ದಂತೆಯೇ ಪಾಕಿಸ್ತಾನ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಆಫ್ಘಾನಿಸ್ತಾನ ತಂಡದ ಫಜಲ್ ಫಾರೂಕಿ ಹಾಗೂ ಮುಜೀಬ್ ಉರ್ ರೆಹಮಾನ್ ಪಾಕಿಸ್ತಾನದ ಬ್ಯಾಟರ್‌ಗಳಿಗೆ ಸುಲಭವಾಗಿ ರನ್ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ಪರಿಣಾಮ 17 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ ತಂಡವು 65 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 7 ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಪಾಕಿಸ್ತಾನ ತಂಡದ ಪರ ಬ್ಯಾಟಿಂಗ್‌ನಲ್ಲಿ ಕೊಂಚ ಪ್ರತಿರೋಧ ತೋರಿದ ಇಮಾದ್ ವಾಸಿಂ 32 ಎಸೆತಗಳನ್ನು ಎದುರಿಸಿ ಕೇವಲ 18 ರನ್‌ ಬಾರಿಸಿದರು. ಇದು ಪಾಕಿಸ್ತಾನ ಪರ ಮೊದಲ ಟಿ20 ಪಂದ್ಯದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಮೊಹಮ್ಮದ್ ನಬಿ ಪಾಹೀಮ್ ಅಶ್ರಫ್ ಹಾಗೂ ನಸೀಂ ಶಾ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು ಜಮಾನ್ ಖಾನ್(8) ಹಾಗೂ ಇನ್ಶಾನುಲ್ಲಾ(6) ಅಜೇಯ ಬ್ಯಾಟಿಂಗ್ ನಡೆಸುವ ಮೂಲಕ ಪಾಕ್ ತಂಡವು ಆಲೌಟ್ ಆಗದಂತೆ ನೋಡಿಕೊಂಡರು. ಅಂತಿಮವಾಗಿ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 92 ರನ್ ಗಳಿಸಲಷ್ಟೇ ಶಕ್ತವಾಯಿತು.

Asia Cup 2023: ಪಾಕಿಸ್ತಾನದಲ್ಲೇ ಟೂರ್ನಿ, ಆದ್ರೂ ಪಾಕ್‌ಗೆ ಹೋಗದೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಟೀಂ ಇಂಡಿಯಾ..!

ಇನ್ನು ಆಫ್ಘಾನಿಸ್ತಾನ ಪರ ಸಂಘಟಿತ ಪ್ರದರ್ಶನ ತೋರಿದ ಫಜಲ್‌ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್ ಹಾಗೂ ಮೊಹಮ್ಮದ್ ನಬಿ ತಲಾ 2 ವಿಕೆಟ್ ಪಡೆದರೆ, ಅಜ್ಮತುಲ್ಲಾ, ನವೀನ್ ಉಲ್ ಹಕ್ ಹಾಗೂ ನಾಯಕ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು 23 ರನ್ ಗಳಿಸುತ್ತಿದ್ದಂತೆಯೇ ಇಬ್ರಾಹಿಂ ಜದ್ರಾನ್ ಹಾಗೂ ಗುಲ್ಬದ್ದೀನ್ ನೈಬ್ ವಿಕೆಟ್ ಕಳೆದುಕೊಂಡಿತು. ಆದರೆ ರೆಹಮನುಲ್ಲಾ ಗುರ್ಬಾಜ್(16), ಮೊಹಮ್ಮದ್ ನಬಿ ಹಾಗೂ ನಜೀಬುಲ್ಲಾ ಜದ್ರಾನ್(17) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

Follow Us:
Download App:
  • android
  • ios