ಮುಂಬೈ(ನ.05): ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಹಾಗೂ ಶ್ರೇಷ್ಠ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಉಪಯುಕ್ತ ಸಲಹೆ ನೀಡಿದ್ದಾರೆ. ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಆಗಲು ಪ್ರಯತ್ನಿಸಬೇಡ, ರಿಷಬ್ ಪಂತ್ ಆಗಿರುವು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮುಗಿಯಿತಾ ದಿಗ್ಗಜ ಕ್ರಿಕೆಟಿಗನ ಕರಿಯರ್; ಕಮೆಂಟರಿಯತ್ತ ಮುಖ ಮಾಡಿದ ಧೋನಿ!

ರಿಷಬ್ ಪಂತ್ ಅತ್ಯುತ್ತಮ ಹಾಗೂ ಪ್ರತಿಭಾವಂತ ಕ್ರಿಕೆಟಿಗ. ತನ್ನ ಆಟದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಇದರ ಬದಲಾಗಿ ಧೋನಿ ರೀತಿ ಆಗಲು ಪ್ರಯತ್ನಿಸಿದರೆ ಯಶಸ್ಸು ಸಿಗುವುದಿಲ್ಲ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ. ಇದೇ ವೇಳೆ ಧೋನಿ ಜೊತೆ ಪಂತ್ ಹೋಲಿಕೆ ಮಾಡಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ಮಾಡಿದ 5 ಅದ್ಭುತ ಟ್ವೀಟ್‌: ಮಿಸ್ ಮಾಡದೇ ನೋಡಿ!

ಎಂ.ಎಸ್.ಧೋನಿ ದಿಗ್ಗಜ. ಯಾರಿಂದಲೂ ಧೋನಿಯಾಗಲು ಸಾಧ್ಯವಿಲ್ಲ. ಧೋನಿಯಿಂದ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿಯಬೇಕು. ಧೋನಿ ಮಾರ್ಗದರ್ಶನ, ಸಲಹೆ ಪಡೆದರೆ ಉತ್ತಮ ಎಂದು ಗಿಲ್‌ಕ್ರಿಸ್ಟ್ ಸಲಹೆ ನೀಡಿದ್ದಾರೆ. ಪಂತ್ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.