ಢಾಕಾ[ನ.21]: ಭಾರತ ಅಂಡರ್‌-23 ಕ್ರಿಕೆಟ್‌ ತಂಡ ಇಲ್ಲಿ ನಡೆ​ಯು​ತ್ತಿ​ರುವ ಉದ​ಯೋ​ನ್ಮುಖ ತಂಡಗಳ ಟೂರ್ನಿಯ ಸೆಮಿ​ಫೈ​ನಲ್‌ನಲ್ಲಿ ಬದ್ಧವೈರಿ ಪಾಕಿ​ಸ್ತಾನದ ವಿರುದ್ಧ 3 ರನ್‌ಗಳ ವೀರೋ​ಚಿತ ಸೋಲು ಕಂಡು ಟೂರ್ನಿ​ಯಿಂದ ಹೊರ​ಬಿ​ದ್ದಿದೆ. 

ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಬುಧ​ವಾರ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿ​ಸ್ತಾನ 50 ಓವ​ರಲ್ಲಿ 7 ವಿಕೆಟ್‌ ನಷ್ಟ​ಕ್ಕೆ 267 ರನ್‌ ಗಳಿ​ಸಿತು. ಕಠಿಣ ಗುರಿ ಬೆನ್ನ​ತ್ತಿದ ಭಾರತ ಸನ್ವಿರ್‌ ಸಿಂಗ್‌ (76) ಹೋರಾ​ಟದ ಹೊರ​ತಾ​ಗಿಯೂ ಗೆಲುವು ಸಾಧಿ​ಸಲು ಆಗ​ಲಿಲ್ಲ. ಕೊನೆ ಓವ​ರಲ್ಲಿ ಭಾರ​ತದ ಗೆಲು​ವಿಗೆ 8 ರನ್‌ಗಳು ಬೇಕಿ​ದ್ದವು. ಆದರೆ ತಂಡ ಗಳಿ​ಸಿದ್ದು ಕೇವಲ 4 ರನ್‌ ಮಾತ್ರ. ತಂಡವನ್ನು ಮುನ್ನಡೆ​ಸಿದ ಕರ್ನಾ​ಟಕದ ಬಿ.ಆರ್‌.ಶ​ರತ್‌ (47) ಹಾಗೂ ಅರ್ಮಾನ್‌ ಜಾಫರ್‌ (46) ಉಪ​ಯುಕ್ತ ರನ್‌ ಕೊಡುಗೆ ನೀಡಿ​ದರೂ, ಭಾರ​ತ ಗೆಲು​ವಿನ ದಡ ಮುಟ್ಟ​ಲಿಲ್ಲ. 50 ಓವ​ರಲ್ಲಿ 8 ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿ​ಸ​ಲಷ್ಟೇ ಶಕ್ತ​ವಾ​ಯಿತು.

KPL ಕ್ರಿಕೆಟ್ ಫಿಕ್ಸಿಂಗ್; ಪುತ್ರನ ಮೇಲಿನ ಆರೋಪಕ್ಕೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ!

ಪಾಕಿ​ಸ್ತಾನ ಆರಂಭಿಕ ಒಮೈರ್‌ ಯೂಸುಫ್‌ (66)ರ ಅರ್ಧ​ಶ​ತಕ, ಸೈಫ್‌ ಬದರ್‌(47)ರ ಆಕ​ರ್ಷಕ ಆಟದ ನೆರವಿ​ನಿಂದ ಉತ್ತಮ ಮೊತ್ತ ಕಲೆಹಾಕಿತು. ಗುರು​ವಾರ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಆಫ್ಘಾ​ನಿ​ಸ್ತಾನ ಹಾಗೂ ಬಾಂಗ್ಲಾ​ದೇಶ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ. ನ.23ರಂದು ಫೈನಲ್‌ ಪಂದ್ಯ ನಡೆ​ಯ​ಲಿದೆ. ಕಳೆದ ಆವೃ​ತ್ತಿಯಲ್ಲಿ ಭಾರತ ತಂಡ ರನ್ನರ್‌-ಅಪ್‌ ಆಗಿತ್ತು.

ಸ್ಕೋರ್‌: 
ಪಾಕಿಸ್ತಾನ 267/7 (ಯೂಸುಫ್‌ 66, ಸೈಫ್‌ 47, ಶಿವಂ ಮಾವಿ 2-53)
ಭಾರತ 264/8 (ಸನ್ವಿರ್‌ 76, ಶರತ್‌ 47, ಸೈಫ್‌ 2-57)