ಸೂಪರ್ ಓವರ್ ಡ್ರಾಮಾದ ಬಗ್ಗೆ ತುಟಿಬಿಚ್ಚಿದ ಎಬಿಡಿ: ರೋಹಿತ್ ಶರ್ಮಾ ವಿರುದ್ದ ತಿರುಗಿಬಿದ್ದ ಆರ್‌ಸಿಬಿ ಮಾಜಿ ಕ್ರಿಕೆಟಿಗ..!
ಆಫ್ಘಾನಿಸ್ತಾನ ಎದುರಿನ ಮೊದಲೆರಡು ಪಂದ್ಯಗಳಿಗೆ ಹೋಲಿಸಿದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯವು ಹೆಚ್ಚು ರೋಚಕತೆಯಿಂದ ಕೂಡಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಎರಡು ಸೂಪರ್‌ಗಳು ನಡೆದವು.
ಬೆಂಗಳೂರು(ಜ.22): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ನಡೆದ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಈ ಸರಣಿಯಲ್ಲಿ ಬರೋಬ್ಬರಿ 14 ತಿಂಗಳ ಬಳಿಕ ಚುಟುಕು ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವಲ್ಲಿ ಟೀಂ ಇಂಡಿಯಾ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.
ಆಫ್ಘಾನಿಸ್ತಾನ ಎದುರಿನ ಮೊದಲೆರಡು ಪಂದ್ಯಗಳಿಗೆ ಹೋಲಿಸಿದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯವು ಹೆಚ್ಚು ರೋಚಕತೆಯಿಂದ ಕೂಡಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಎರಡು ಸೂಪರ್‌ಗಳು ನಡೆದವು. ಕೊನೆಗೂ ಎರಡನೇ ಸೂಪರ್‌ನಲ್ಲಿ ಭಾರತ ತಂಡವು 10 ರನ್ ಅಂತರದ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡೆರಡು ಬಾರಿ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೂರನೇ ಮದುವೆಯಾದ ಶೋಯೆಬ್ ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಕೆ..!
ಮೊದಲ ಸೂಪರ್ ಓವರ್‌ನಲ್ಲಿ ಭಾರತ ಗೆಲ್ಲಲು 6 ಎಸೆತಗಳಲ್ಲಿ 17 ರನ್ ಅಗತ್ಯವಿತ್ತು. ರೋಹಿತ್ ಶರ್ಮಾ 14 ರನ್ ಬಾರಿಸಿ ಕೊನೆಯ ಎಸೆತ ಬಾಕಿ ಇರುವಂತೆಯೇ ಕ್ರೀಸ್‌ಗೆ ವಾಪಾಸ್ಸಾಗಿದ್ದರು. ಅದನ್ನು ನೋಡಿದರೆ ಅವರು ರಿಟೈರ್ಡ್ ಔಟ್ ಆಗಿ ಪೆವಿಲಿಯನ್ ಸೇರಿದರೇನೋ ಎನ್ನುವಂತಿತ್ತು. ಒಂದು ವೇಳೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲಿಳಿದ ಆಟಗಾರ/ಆಟಗಾರ್ತಿ ಔಟ್ ಆದರೆ, ಮತ್ತೊಂದು ಸೂಪರ್ ಓವರ್ ಆಡುವಂತಿಲ್ಲ ಎನ್ನುವುದು ಈಗಿರುವ ರೂಲ್ಸ್ ಆಗಿದೆ.
ಹೀಗಿದ್ದೂ ರೋಹಿತ್ ಶರ್ಮಾ, ಎರಡನೇ ಸೂಪರ್ ಓವರ್ ಬ್ಯಾಟಿಂಗ್ ಮಾಡಲಿಳಿದಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇದಷ್ಟೇ ಅಲ್ಲದೇ ರೋಹಿತ್ ಶರ್ಮಾ ರಿಟೈರ್ಡ್ ಔಟ್ ಆಗಿದ್ದರೋ ಅಥವಾ ರಿಟೈರ್ಡ್ ಹರ್ಟ್ ಆಗಿದ್ದರೋ ಎನ್ನುವುದು ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
Super Over Mind Game: ರೋಹಿತ್ ಶರ್ಮಾರದ್ದು ಅಶ್ವಿನ್ ಲೆವೆಲ್ ಥಿಂಕಿಂಗ್ ಎಂದ ರಾಹುಲ್ ದ್ರಾವಿಡ್
ಇದೀಗ ಈ ಕುರಿತಂತೆ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಬಲ್ ಸೂಪರ್ ಓವರ್ ನಂಬಲಸಾಧ್ಯ (ಸ್ಮೈಲ್ಸ್). ಮೊದಲ ಸೂಪರ್ ಓವರ್‌ನಲ್ಲಿ ನೀವು ಔಟ್ ಎಂದು ಘೋಷಿಸಿದರೆ ನೀವು ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಬಹುಶಃ ಅವರು ಗಾಯದ ಕಾರಣದಿಂದ ನಿವೃತ್ತರಾದರು ಎಂದು ಅವರು ಹೇಳಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಬಹುಶಃ ಅವನನ್ನು ಔಟ್ ತೋರಿಸಲು ಇದು ಸ್ಕೋರಿಂಗ್ ಮಿಸ್ಟೇಕ್ ಆಗಿರಬಹುದು ಎಂದು ಎಬಿಡಿ ಹೇಳಿದ್ದಾರೆ.