Asianet Suvarna News Asianet Suvarna News

ಮೂರನೇ ಮದುವೆಯಾದ ಶೋಯೆಬ್ ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಕೆ..!

2010ರಲ್ಲಿ ವಿವಾಹವಾಗಿದ್ದ ಸಾನಿಯಾ-ಮಲಿಕ್‌ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಹಬ್ಬುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈ ನಡುವೆ ಶನಿವಾರ ಮಲಿಕ್‌ ಬೇರೊಂದು ಮದುವೆಯಾಗಿದ್ದರು.

Sania Mirza finally breaks silence on shock divorce after Shoaib Malik gets married for 3rd time kvn
Author
First Published Jan 22, 2024, 2:21 PM IST | Last Updated Jan 22, 2024, 2:21 PM IST

ನವದೆಹಲಿ(ಜ.22): ಭಾರತದ ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಕೆಲ ತಿಂಗಳುಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರು ಎಂದು ಸಾನಿಯಾರ ಕುಟುಂಬಸ್ಥರು ಭಾನುವಾರ ಸ್ಪಷ್ಟಪಡಿಸಿದ್ದಾರೆ.

2010ರಲ್ಲಿ ವಿವಾಹವಾಗಿದ್ದ ಸಾನಿಯಾ-ಮಲಿಕ್‌ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಹಬ್ಬುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈ ನಡುವೆ ಶನಿವಾರ ಮಲಿಕ್‌ ಬೇರೊಂದು ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಸಾನಿಯಾ ಕುಟುಂಬಸ್ಥರು ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ನೀಡಿದ್ದು, ‘ಇಬ್ಬರೂ ಕೆಲ ತಿಂಗಳ ಹಿಂದೆಯೇ ವಿಚ್ಛೇದಿತರಾಗಿದ್ದಾರೆ. ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಶುಭ ಹಾರೈಸಿದ್ದಾರೆ’ ಎಂದಿದೆ. ಅಲ್ಲದೆ, ಸಾನಿಯಾ ತಮ್ಮ ವೈಯಕ್ತಿಕ ಬದುಕನ್ನು ಯಾವತ್ತೂ ಸಾರ್ವಜನಿಕ ವಲಯದಿಂದ ದೂರವಿರಿಸಿದ್ದಾರೆ. ಸದ್ಯದ ಸೂಕ್ಷ್ಮ ಪರಿಸ್ಥಿತಿಯಲ್ಲೂ ಸಾನಿಯಾರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು’ ಎಂದು ವಿನಂತಿಸಿದ್ದಾರೆ.

ಸಾನಿಯಾ ಹಾಗೂ ಮಲಿಕ್‌ 2010ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಮಗನಿದ್ದಾರೆ. 2022ರಿಂದಲೂ ಸಾನಿಯಾ-ಮಲಿಕ್‌ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದಾಗಿ ಊಹಾಪೋಹ ಹರಿದಾಡುತ್ತಿದ್ದವು. ಆದರೆ ಈ ವರೆಗೆ ಇಬ್ಬರೂ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಈ ನಡುವೆ ಮಲಿಕ್‌ 2ನೇ ವಿವಾಹವಾಗಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾರ ತಂದೆ ಇಮ್ರಾನ್‌ ಪ್ರತಿಕ್ರಿಯೆ ನೀಡಿದ್ದು, ಮಲಿಕ್‌ಗೆ ಸಾನಿಯಾ ವಿಚ್ಛೇದನ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ನಟಿ ಸನಾಗೂ ಇದು 2ನೇ ಮದುವೆ. ಈ ಮೊದಲು 2020ರಲ್ಲಿ ಗಾಯಕ ಉಮೈರ್‌ ಜಸ್ವಾಲ್‌ ಜೊತೆ ಮದುವೆಯಾಗಿದ್ದ ಸನಾ, ಕಳೆದ ವರ್ಷ ದೂರವಾಗಿದ್ದರು.
 

Latest Videos
Follow Us:
Download App:
  • android
  • ios