Asianet Suvarna News Asianet Suvarna News

ನನ್ನ ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದೆ, ಕ್ರಿಕೆಟ್‌ ಆಡೋದಿಲ್ಲ.. ಆದರೆ ಆರ್‌ಸಿಬಿ ತಂಡದಲ್ಲಿರ್ತೇನೆ ಎಂದ ಎಬಿಡಿ!

ಮುಂದಿನ ವರ್ಷದ ಐಪಿಎಲ್‌ ವೇಳೆ ಆರ್‌ಸಿಬಿ ತಂಡಕ್ಕೆ ಮರಳುವುದಾಗಿ ದಕ್ಷಿಣ ಆಫ್ರಿಕಾದ ಸೂಪರ್‌ ಸ್ಟಾರ್‌ ಆಟಗಾರ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ. ಆದರೆ ಆಟಗಾರನಾಗಿ ಮರಳುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಗೂ ಮಾಜಿ ನಾಯಕ ಸ್ಪಷ್ಟಪಡಿಸಿದ್ದಾರೆ.
 

AB de Villiers drops huge medical update, vows RCB return in IPL 2023 san
Author
First Published Oct 4, 2022, 4:47 PM IST

ಬೆಂಗಳೂರು (ಅ.4): ದಕ್ಷಿಣ ಆಫ್ರಿಕಾದ ಸೂಪರ್‌ ಸ್ಟಾರ್‌ ಆಟಗಾರ ಹಾಗೂ ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಎಬಿ ಡಿವಿಲಿಯರ್ಸ್‌ 2023ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮರಳುವುದು ಖಚಿತಪಡಿಸಿದ್ದಾರೆ. ಆದರೆ, ಆಟಗಾರನಾಗಿ ತಂಡಕ್ಕೆ ಮರಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿರುವ ಎಬಿಡಿ, ಈ ವರ್ಷ ಆರ್‌ಸಿಬಿಯ ಅಭಿಯಾನದಲ್ಲಿ ಭಾಗಿಯಾಗಿರಲಿಲ್ಲ. ಅದರೆ, 2023ರಲ್ಲಿ ಖಂಡಿತವಾಗಿ ಆರ್‌ಸಿಬಿ ತಂಡದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾವು ಇನ್ನೆಂದೂ ಕ್ರಿಕೆಟ್‌ ಆಡುವುದಿಲ್ಲ ಎಂದು ಹೇಳಿರುವ ಡಿವಿಲಿಯರ್ಸ್‌ ಇತ್ತೀಚೆಗಷ್ಟೇ ಕಣ್ಣಿಗೆ ಶಸ್ತ್ರಚಿಕಿತ್ಸೆಯಾಗಿದೆ ಎಂದು ಹೇಳಿದ್ದಾರೆ. ಆದರೆ, ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೀವು ನನ್ನನ್ನು ನೋಡಬಹುದು ಎಂದು ಎಬಿಡಿ ಹೇಳಿದ್ದಾರೆ. ಮುಂದಿನ ವರ್ಷದ ಐಪಿಎಲ್‌ ಆಯಾ ಫ್ರಾಂಚೈಸಿಗಳ ಮೂಲ ಸ್ಥಳಗಳಿಗೆ ಮರಳಲಿದೆ. ಆರ್‌ಸಿಬಿ ತಂಡ ಚಿನ್ನಸ್ವಾಮಿಯಲ್ಲಿ ಆಡುವುದನ್ನು ತಾವು ಎದುರು ನೋಡುತ್ತಿದ್ದಾಗಿ ತಿಳಿಸಿದ್ದು, ಐಪಿಎಎಲ್‌ ಟ್ರೋಫಿ ಗೆಲ್ಲುವ ನಿಟ್ಟಿನಲ್ಲಿ ತಂಡಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ನಾನು ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಇರಲಿದ್ದೇನೆ. ಆದರೆ, ಕ್ರಿಕೆಟಿಗನಾಗಿ ಇರುವುದಿಲ್ಲ. ಈವರೆಗೂ ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಆರ್‌ಸಿಬಿ ಅಭಿಮಾನಿಗಳಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಕಳೆದೊಂದು ದಶಕದಲ್ಲಿ ನನಗೆ ಬೆಂಬಲ ನೀಡಿದ ಆರ್‌ಸಿಬಿ ಟೀಮ್‌ ಹಾಗೂ ಸಿಬ್ಬಂದಿಗೆ ನಾನು ಥ್ಯಾಂಕ್ಸ್‌ ಹೇಳಲು ಬಯಸುತ್ತೇನೆ. ಆದರೆ, ಇನ್ನು ಕ್ರಿಕೆಟ್‌ ಆಡಲು ನನಗೆ ಸಾಧ್ಯವಿಲ್ಲ. ಏಕೆಂದರೆ, ನನ್ನ ಬಲಗಣ್ಣಿಗೆ ಸ್ವಲ್ಪ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಯಾಗಿದೆ' ಎಂದು ಸೋಷಿಯಲ್‌ ಮೀಡಿಯಾ ಸಂವಾದದ ವೇಳೆ ಹೇಳಿದ್ದಾರೆ.

ಅವರ ಮುಂಬರುವ ಯೂಟ್ಯೂಬ್ ಚಾನೆಲ್ (You Tube) ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಡಿವಿಲಿಯರ್ಸ್(Ab De Villiers) ತಮ್ಮ ಭವಿಷ್ಯದ ಯೋಜನೆಗಳನ್ನು ಒಳಗೊಂಡಂತೆ ಹಲವಾರು ವಿಷಯಗಳ ಕುರಿತು ಮಾತನಾಡಿದರು. ಡಿವಿಲಿಯರ್ಸ್ ಖಂಡಿತವಾಗಿಯೂ ಒಲವು ತೋರದಿರುವ ಒಂದು ಪ್ರೊಫೈಲ್, ಸದ್ಯಕ್ಕೆ ಕೋಚಿಂಗ್ ಆಗಿದೆ.  ತಮ್ಮ ಸ್ಮರಣೀಯ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ ಬಳಿಕ ಎಬಿಡಿ (ABD) ತಮ್ಮ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಆದರೆ, ಕೋಚ್‌ ಆದಲ್ಲಿ ತಂಡದೊಂದಿಗೆ ಹೆಚ್ಚಿನ ಸಮಯ ಪ್ರಯಾಣ ಬೆಳೆಸಬೇಕಿರುವ ಕಾರಣ ಸದ್ಯಕ್ಕೆ ಆ ಹುದ್ದೆಯ ಕಡೆ ಗಮನ ನೀಡುತ್ತಿಲ್ಲ ಎಂದಿದ್ದಾರೆ.

 

IPL 2022 : ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!

ಸದ್ಯಕ್ಕಂತೂ ಯಾವುದೇ ತಂಡಕ್ಕೆ ಕೋಚ್ (Coach) ಆಗುವ ಬಗ್ಗೆ ಯೋಚನೆ ಮಾಡಿಲ್ಲ. ನಾನು ಈವರೆಗೂ ಕಲಿತಿದ್ದನ್ನು ಬೇರೆಯವರೊಂದಿಗೆ ಹಂಚಿಕೊಳ್ಳೋದು ನನಗೆ ಬಹಳ ಇಷ್ಟ. ಆ ದಿನವೂ ಬರುತ್ತದೆ. ಆದರೆ, ಅದಕ್ಕಾಗಿ ಒಂದು ತಂಡಕ್ಕೆ ಸೇರುವುದಿಲ್ಲ. ಕೋಚಿಂಗ್‌ಗೆ ಸೇರಿಕೊಂಡರೆ, ಮತ್ತೆ ಪ್ರಯಾಣ ಮಾಡಬೇಕಾಗುತ್ತದೆ. ಅಂದಾಜು 18 ವರ್ಷಗಳ ಕಾಲ ವಿಶ್ವದೆಲ್ಲೆಡೆ ಪ್ರಯಾಣ ಮಾಡಿದ್ದೇನೆ. ಈಗ ನನ್ನ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ ಎಂದು ಹೇಳಿದ್ದಾರೆ.

IPL 2022 ಮಿಸ್ಟರ್​ 360 ಎಬಿಡಿ ನೆನಪಿಸಿದ 22ರ ಹುಡುಗ ಆಯುಷ್ ಬದೋನಿ..!

ಇದೇ ವೇಳೆ ಲಜೆಂಡ್ಸ್‌ ಲೀಗ್‌ ಕ್ರಿಕೆಟ್‌ನಲ್ಲಿ (Legends League ) ಆಡುವ ಅವಕಾಶವೂ ಬಂದಿತ್ತು ಎಂದು ಹೇಳಿರುವ ಡಿವಿಲಿಯರ್ಸ್‌, ಆದರೆ, ಕಣ್ಣಿನ ಶಸ್ತ್ರಚಿಕಿತ್ಸೆಯ ಕಾರಣ ಆಡಲು ಸಾಧ್ಯವಾಗಿಲ್ಲ ಎಂದರು. ಲೆಜೆಂಡ್ಸ್ ಲೀಗ್ ದಿಗ್ಗಜ ಕ್ರಿಕೆಟಿಗರನ್ನು ಒಳಗೊಂಡ ಟೂರ್ನಿ ಎನಿಸಿದೆ. ಇದರಲ್ಲಿ ಆಡಲು ಅವರಿಗೆ ದೊಡ್ಡ ಮೊತ್ತದ ಆಫರ್‌ ಬಂದಿತ್ತಾದರೂ, ಕಣ್ಣಿನ ಕಾರಣದಿಂದಾಗಿ ಆಡಿರಲಿಲ್ಲ. ನನಗೆ ವಯಸ್ಸಾಗಿದೆ. ಬಹುಶಃ ಲಜೆಂಡ್ಸ್‌ ಲೀಗ್‌ನಲ್ಲಿ ಮೋಜಿನ ಸಂಗತಿಗಳು ಸಿಗುತ್ತಿದ್ದವು. ನನಗೂ ಆಹ್ವಾನವಿತ್ತು. ಆದರೆ, ಕಣ್ಣಿನ ಶಸ್ತ್ರಚಿಕಿತ್ಸೆ ಆದ ಕಾರಣ ಆಡಿರಲಿಲ್ಲ. ನೀವಂದುಕೊಳ್ಳಬಹುದು, ನಾನು ಒಂದು ಕಣ್ಣಿನಲ್ಲಿ ಬೇಕಾದರೆ ಆಡಬಲ್ಲೆ ಎಂದು. ಆದರೆ, ನಾನದನ್ನು ಮಾಡೋದಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.

Follow Us:
Download App:
  • android
  • ios