Asianet Suvarna News Asianet Suvarna News

Tim Paine: ನಾಲ್ಕರಿಂದ ಐದು ಮಂದಿಯಿಂದ ಇಡೀ ಟೆಸ್ಟ್‌ ಸರಣಿ ಅಪಾಯಕ್ಕೊಳಗಾಗುತ್ತಿತ್ತು..!

2020-21ರ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಬೀಗಿದ್ದ ಟೀಂ ಇಂಡಿಯಾ
ಕೋವಿಡ್ ಭೀತಿಯ ನಡುವೆಯೇ ಆಯೋಜನೆಗೊಂಡಿದ್ದ ಕ್ರಿಕೆಟ್‌ ಸರಣಿ
ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಗಂಭೀರ ಆರೋಪ ಮಾಡಿದ ಟಿಮ್ ಪೈನ್

4 to 5 Guys Put Whole Test Series At Risk Says Tim Paine kvn
Author
Bengaluru, First Published Jun 17, 2022, 5:44 PM IST

ಮೆಲ್ಬೊರ್ನ್‌(ಜೂ.17): ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳ ನಡುವಿನ 2020-21ನೇ ಸಾಲಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯೂ (Border-Gavaskar Trophy 2020-21) ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಸ್ಮರಣೀಯ ಸರಣಿಗಳಲ್ಲಿ ಒಂದು ಎನಿಸಿದೆ. ಗಾಯದ ಸಮಸ್ಯೆಯ ಹೊರತಾಗಿಯೂ ಆಸೀಸ್‌ ನೆಲದಲ್ಲಿ ಟೀಂ ಇಂಡಿಯಾ (Team India), ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಟೀಂ ಇಂಡಿಯಾ, ಅಮೋಘ ಪ್ರದರ್ಶನ ತೋರುವ ಮೂಲಕ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರ್ಯಿಕ ಸಾಧನೆ ಮಾಡಿತ್ತು.

ಮೆಲ್ಬೊರ್ನ್‌ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಟೀಂ ಇಂಡಿಯಾ ಸಿಡ್ನಿ ಟೆಸ್ಟ್‌ಗೆ ಸಜ್ಜಾಗಿತ್ತು. ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಹೋಟೆಲ್‌ನಲ್ಲಿರುವ ಬದಲು ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಮೆಲ್ಬೊರ್ನ್‌ನ ರೆಸ್ಟೋರೆಂಟ್‌ನಲ್ಲಿ ರೋಹಿತ್ ಶರ್ಮಾ, ಶುಭ್‌ಮನ್‌ ಗಿಲ್‌, ರಿಷಭ್ ಪಂತ್, ಪೃಥ್ವಿ ಶಾ ಹಾಗೂ ನವದೀಪ್ ಸೈನಿ ಕಾಣಿಸಿಕೊಂಡಿದ್ದರು.  

ಕೊರೋನಾ ಆತಂಕದ ನಡುವೆ ಬಯೋ-ಬಬಲ್‌ನೊಳಗೆ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆಯೋಜನೆಗೊಂಡಿತ್ತು. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಮೈದಾನ ಆತಿಥ್ಯ ವಹಿಸಿತ್ತು. ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಕೋವಿಡ್ ಟೆಸ್ಟ್‌ನಲ್ಲಿ ಈ ಎಲ್ಲಾ ಆಟಗಾರರ ಕೋವಿಡ್ ರಿಪೋರ್ಟ್‌ ನೆಗೆಟಿವ್ ಬಂದಿತ್ತು.

Ind vs SA: ಸರಣಿ ಸಮಬಲದ ಕಾತರದಲ್ಲಿ ಟೀಂ ಇಂಡಿಯಾ...!

ವೂಟ್ ಸೆಲೆಕ್ಟ್‌ನ 'ಬಂದನ್‌ ಮೇ ಥಾ ಧಮ್' ಡಾಕ್ಯೂಮೆಂಟರಿ ಸೀರಿಸ್‌ನಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್‌ ಪೈನ್, ಆ ನಾಲ್ಕೈದು ಆಟಗಾರರಿಂದ ಇಡೀ ಟೆಸ್ಟ್ ಸರಣಿ ಅಪಾಯಕ್ಕೊಳಗಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ (Pat Cummins), ಈ ಟೆಸ್ಟ್ ಸರಣಿಗಾಗಿ ಕೆಲ ಆಟಗಾರರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಕೆಲವರಂತು ತಮ್ಮ ಕುಟುಂಬವನ್ನು ತೊರೆದು ಕ್ರಿಸ್ಮಸ್ ಆಚರಿಸಿದ್ದರು. ಒಂದು ಕಡೆ ನಮ್ಮ ತಂಡ ಈ ರೀತಿ ತ್ಯಾಗಗಳನ್ನು ಮಾಡಿದರೆ, ಮತ್ತೊಂದು ಕಡೆ ಇನ್ನೊಂದು ತಂಡ ಎಲ್ಲಾ ನೀತಿ-ನಿಯಮಗಳನ್ನು ಗಾಳಿಗೆ ತೂರಿದ್ದರು ಹಾಗೂ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಕಮಿನ್ಸ್ ಹೇಳಿದ್ದರು.

2020-21ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಇದಾದ ಬಳಿಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಮೆಲ್ಬೊರ್ನ್‌, ಬ್ರಿಸ್ಬೇನ್‌ ಪಂದ್ಯಗಳನ್ನು ಗೆಲ್ಲುವ ಮೂಲಕ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.

Follow Us:
Download App:
  • android
  • ios