* ಭಾರತ-ಶ್ರೀಲಂಕಾ ಎರಡನೇ ಟಿ20 ಪಂದ್ಯ* ಭಾರತ ವಿರುದ್ಧ ಶ್ರೀಲಂಕಾಗೆ 4 ವಿಕೆಟ್‌ ರೋಚಕ ಗೆಲುವು * 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು

ಕೊಲಂಬೊ,(ಜು.28): ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 4 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರಂತೆ ಸಮಬಲ ಸಾಧಿಸಿವೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊರೋನಾ ಕಾರಣದಿಂದ ಘಟಾನುಘಟಿ ಆಟಗಾರರ ಅನುಪಸ್ಥಿತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯ್ತು.

ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ಕೆ.. ಪಡಿಕ್ಕಲ್-ಗಾಯಕ್ವಾಡ್‌ಗೆ ಅವಕಾಶ

ಭಾರತ ಪರ ಇನಿಂಗ್ಸ್​ ಆರಂಭಿಸಿದ ಶಿಖರ್ ಧವನ್-ರುತುರಾಜ್ ಗಾಯಕ್ವಾಡ್ ಭಾರತಕ್ಕೆ ಉತ್ತಮ ಭಾರತ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 49 ರನ್​ ಕಲೆಹಾಕಿತು. ಇದರೊಂದಿಗೆ ಭಾರತ 133 ರನ್ ಗುರಿ ನೀಡಿತು. 

ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 19.4 ಕೊನೆಯ ಓವರ್‌ನಲ್ಲಿ ತಿಣುಕಾಡಿ ಗೆಲುವಿನ ಗುರಿ ಮುಟ್ಟಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಲಂಕಾ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಕಪ್ ಆಸೆ ಜೀವಂತ ಉಳಿಸಿಕೊಂಡಿದೆ.

ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 8 ಆಟಗಾರರು ಕೂಡ ಐಸೋಲೇಷನ್​​ಗೆ ಒಳಗಾಗಿದ್ದು, ತಂಡದಲ್ಲಿ 4 ಬದಲಾವಣೆ ಮಾಡಲಾಗಿತ್ತು.