Asianet Suvarna News Asianet Suvarna News

T20 World Cup 2021: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ!

  • ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಮಹತ್ವದ ಪಂದ್ಯ
  • ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ
  • ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ
     
20 World Cup 2021 Srilanka won toss and chose bowl first against england ckm
Author
Bengaluru, First Published Nov 1, 2021, 7:05 PM IST
  • Facebook
  • Twitter
  • Whatsapp

ಶಾರ್ಜಾ(ನ.01): ಇಂಗ್ಲೆಂಡ್(England) ಹಾಗೂ ಶ್ರೀಲಂಕಾ(Srlinka) ನಡುವಿನ T20 World Cup 2021 ಟೂರ್ನಿಯ ಮಹತ್ವದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

T20 World Cup: ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

ಇಂಗ್ಲೆಂಡ್ ಪ್ಲೇಯಿಂಗ್ 11:
ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೋ, ಇಯಾನ್ ಮಾರ್ಗನ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಆಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಟೈಮಲ್ ಮಿಲ್ಸ್

ಶ್ರೀಲಂಕಾ ಪ್ಲೇಯಿಂಗ್ 11:
ಪಥಮ್ ನಿಸಾಂಕ, ಕುಸಾಲ್ ಪರೇರಾ, ಚಾರಿತ್ ಅಸಲಂಕಾ, ಭಾನುಕ ರಾಜಪಕ್ಸ, ಅವಿಶ್ಕಾ ಫರ್ನಾಂಡೋ, ವಾವಿಂಡು ಹಸರಂಗ, ದಸೂನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷನ, ಲಹೀರು ಕುಮಾರ

ಆರಂಭಿಕ 3 ಪಂದ್ಯದಲ್ಲಿ 3ರಲ್ಲೂ ಗೆಲುವು ಸಾಧಿಸಿರುವ ಇಂಗ್ಲೆಂಡ್, ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇತ್ತ ಶ್ರೀಲಂಕಾ ಕೂಡ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. 

ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಹೋರಾಟದಲ್ಲಿ ಇಂಗ್ಲೆಂಡ್ ಹೆಚ್ಚು ಮೇಲುಗೈ ಸಾಧಿಸಿದೆ. 12 ಮುಖಾಮುಖಿಯಲ್ಲಿ 8 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಕಂಡಿದೆ. ಇದರಲ್ಲಿ ಟಿ20 ಟೂರ್ನಿಯಲ್ಲಿ 4 ಬಾರಿ ಮುಖಾಮುಖಿಯಾಗಿದ್ದು, 3ರಲ್ಲಿ ಇಂಗ್ಲೆಂಡ್ ಗೆಲುುವು ಸಾಧಿಸಿದೆ.

T20 World Cup: ಟೀಂ ಇಂಡಿಯಾ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು..!

ಈ ಹಿಂದಿನ ದ್ವಿಪಕ್ಷೀಯ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಇಂಗ್ಲೆಂಡ್, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಜೊತೆಗೆ ಈಗಾಲೇ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್ ಹಾದಿ ಖಚಿತಪಡಿಸಿಕೊಳ್ಳಲು ಸಜ್ಜಾಗಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲೂ ಚೇಸಿಂಗ್ ತಂಡಕ್ಕೆ ಹೆಚ್ಚಿನ ಯಶಸ್ಸು ಸಿಕ್ಕಿದೆ. ಇಂಗ್ಲೆಂಡ್ ತಂಡವನ್ನು 14 ರಿಂದ 150 ರನ್‌ಗೆ ಕಟ್ಟಿಹಾಕಿದರೆ ಇಂಗ್ಲೆಂಡ್ ಚೇಸಿಂಗ್ ಸುಲಭವಾಗಲಿದೆ. ಆದರೆ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ಇಂಗ್ಲೆಂಡ್ ಅಬ್ಬರಿಸುವ ವಿಶ್ವಾಸದಲ್ಲಿದೆ.  ಕಳೆದ 3 ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡೀದೆ. ಚೇಸಿಂಗ್ ತಂಡಕ್ಕ ಅಡ್ವಾಂಟೇಜ್ ಹೆಚ್ಚಿರುವುದರಿಂದ ಇಂದಿನ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ.

ಟಾಸ್ ಸೋತ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡ ತಾವು ಬೌಲಿಂಗ್ ಮಾಡಲು ಇಚ್ಚಿಸಿದ್ದರು ಎಂದಿದ್ದಾರೆ. ಆದರೆ ಹೊಸ ಸವಾಲನ್ನು ಎದುರಿಸಲ ಇಂಗ್ಲೆಂಡ್ ಸಜ್ಜಾಗಿದೆ. ಹೀಗಾಗಿ ಮೊದಲು ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಇಯಾನ್ ಮಾರ್ಗನ್ ಟಾಸ್ ಬಳಿಕ ಹೇಳಿದ್ದಾರೆ.

ಅಂಕಪಟ್ಟಿ:
ಮೊದಲ ಗುಂಪಿನಲ್ಲಿರುವ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಸೆಮಿಫೈನಲ್ ಪ್ರವೇಶಕ್ಕೆ ಹಾತೊರೆಯುತ್ತಿದೆ. ಇಂಗ್ಲೆಂಡ್ ಆಡಿದ 3 ಪಂದ್ಯದಲ್ಲಿ 3ರಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ 6 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದ ಗೆಲುವು ಇಂಗ್ಲೆಂಡ್ ತಂಡದ ಸೆಮಿಫೈನಲ್ ಹಂತಕ್ಕೆ ಪ್ರವೇಶ ಖಚಿತಪಡಿಸಲಿದೆ. ಶ್ರೀಲಂಕಾ ಆಡಿದ 3 ಪಂದ್ಯಲ್ಲಿ 2 ಸೋಲು ಹಾಗೂ 1 ಗೆಲವು ಕಂಡಿದೆ. ಈ ಮೂಲಕ 4ನೇ ಸ್ಥಾನದಲ್ಲಿದೆ. 

ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ 3ರಲ್ಲಿ ತಲಾ ಎರಡೆರಡು ಗೆಲುವು ಸಾಧಿಸಿ 2 ಮತ್ತು 3ನೇ ಸ್ಥಾನದಲ್ಲಿದೆ. ಇನ್ನು ವೆಸ್ಟ್ ಇಂಡೀಸ್ 2 ಸೋಲು 1 ಗೆಲುವಿನ ಮೂಲಕ 5ನೇ ಸ್ಥಾನದಲ್ಲಿದ್ದರೆ, ಆಡಿದ 3ರಲ್ಲೂ ಸೋಲು ಅನುಭವಿಸಿರುವ ಬಾಂಗ್ಲಾದೇಶ 6ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. 
 

Follow Us:
Download App:
  • android
  • ios