ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು

ಶುಕ್ರವಾರ ದೇಶದಲ್ಲಿ ಕಳೆದ ಸೆಪ್ಟೆಂಬರ್‌ನಿಂದಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ಮುಂದಿನ 20 ದಿನಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು. ದೇಶದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಬಹುದು. ಇದಾದ ಬಳಿಕ ಸೋಂಕು ಇಳಿಕೆಯಾಗಲಿದೆ. 

Coronavirus Cases May Rise in Next 15 to 20 days in India grg

ನವದೆಹಲಿ(ಏ.08): ‘ದೇಶದಲ್ಲಿ ಕೋವಿಡ್‌ ಸೋಂಕು ಮುಂದಿನ 15ರಿಂದ 20 ದಿನಗಳಲ್ಲಿ ತಾರಕಕ್ಕೆ ಏರಬಹುದು. ಆದರೆ 4ನೇ ಅಲೆ ಉಂಟಾಗುವ ಭಯವಿಲ್ಲ. ಕೋವಿಡ್‌ ಸಾಂಕ್ರಾಮಿಕ ಈಗಾಗಲೇ ಎಂಡೆಮಿಕ್‌ ಹಂತಕ್ಕೆ ತಲುಪಿದ್ದು, ಲಕ್ಷಣಗಳು ತೀರಾ ಸೌಮ್ಯವಾಗಿವೆ. ಕೇವಲ ಕೆಮ್ಮು, ನೆಗಡಿಗೆ ಸೀಮಿತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾಕು’ ಎಂದು ತಜ್ಞರು ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಈಗ ನಿತ್ಯ 5-6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾತಿ ಆರಂಭವಾಗಿದ್ದು, ಇದರ ನಡುವೆಯೇ ತಜ್ಞರ ಈ ಹೇಳಿಕೆ ಬಂದಿದೆ.

‘ಶುಕ್ರವಾರ ದೇಶದಲ್ಲಿ ಕಳೆದ ಸೆಪ್ಟೆಂಬರ್‌ನಿಂದಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ಮುಂದಿನ 20 ದಿನಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು. ದೇಶದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಬಹುದು. ಇದಾದ ಬಳಿಕ ಸೋಂಕು ಇಳಿಕೆಯಾಗಲಿದೆ’ ಎಂದು ಕೋವಿಡ್‌ ತಜ್ಞರಾದ ರಘುವಿಂದರ್‌ ಪರಾಶರ್‌ ಅವರು ಹೇಳಿದ್ದಾರೆ. ‘ಅಲ್ಲದೇ ದೇಶದಲ್ಲಿ ಈಗ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಎಕ್ಸ್‌ಬಿಬಿ.1.16 ಕಾರಣವಾಗಿದೆ. ಆದರೆ ಈ ಹಿಂದೆ 2ನೇ ಅಲೆಗೆ ಕಾರಣವಾಗಿದ್ದ ‘ಡೆಲ್ಟಾ’ ಉಪತಳಿಯಷ್ಟುಇದು ಶಕ್ತಿ ಹೊಂದಿಲ್ಲ’ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಸೇರಿ 7 ರಾಜ್ಯದಲ್ಲಿ ಕೋವಿಡ್ ಆತಂಕ, ಹಾಟ್‌ಸ್ಪಾಟ್ ಗುರುತಿಸಲು ಸೂಚನೆ!

ಸೋಂಕು ಹೆಚ್ಚಾದರೂ ಭಯವಿಲ್ಲ:

ಕೋವಿಡ್‌ ತಾರಕಕ್ಕೇರಿದರೂ 4ನೇ ಅಲೆಯ ಭಯವಿಲ್ಲ. ಏಕೆಂದರೆ ಕೋವಿಡ್‌ ಸೋಂಕಿನಿಂದಾಗಿ ಈಗ ಸಾಮಾನ್ಯಕೆಮ್ಮು, ನೆಗಡಿ, ಗಂಟಲು ಕೆರೆತದಂಥ ಲಕ್ಷಣಗಳು ಮಾತ್ರ ಉಂಟಾಗುತ್ತಿವೆ. ಏಕೆಂದರೆ ಕೋವಿಡ್‌ ಬಹುತೇಕ ಎಂಡೆಮಿಕ್‌ ಹಂತಕ್ಕೆ ತಲುಪಿದೆ. ಸಾವು-ನೋವು, ಆಸ್ಪತ್ರೆ ದಾಖಲೀಕರಣವು 2ನೇ ಅಲೆಯಷ್ಟುಇರುವುದಿಲ್ಲ’ ಎಂದಿದ್ದಾರೆ.

‘ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹೆಚ್ಚಳವಾದರೂ ಸಹ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಇನ್ನು ಮುಂದೆ ಕೋವಿಡ್‌ ಸಹ ಸಾಮಾನ್ಯ ಶೀತ ಹರಡುವ ವೈರಸ್‌ನಂತೆ ಪದೇ ಪದೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಜನರು ಲಸಿಕೆ ಪಡೆದಿದ್ದಾರೆ ಹಾಗೂ ಈ ಹಿಂದೆ ಸೋಂಕಿಗೆ ಒಳಗಾದವರಲ್ಲಿ ಪ್ರತಿಕಾಯ ಉತ್ಪತ್ತಿ ಆಗಿವೆ. ಹೀಗಾಗಿ ಈಗ ಹೆಚ್ಚು ಕೇಸು ದಾಖಲಾಗುತ್ತಿದ್ದರೂ ಆಸ್ಪತ್ರೆ ದಾಖಲೀಕರಣ, ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಸೋಂಕಿತರು ಆಸ್ಪತ್ರೆಗೆ ಬಂದರೂ ಹೊರರೋಗಿಗಳ ವಿಭಾಗದಲ್ಲಿ ಅವರ ತಪಾಸಣೆ ನಡೆಸಿ ಮಾತ್ರೆ, ಚುಚ್ಚುಮದ್ದು ನೀಡಿ ಮನೆಗೆ ಕಳಿಸಲಾಗುತ್ತಿದೆ’ ಎಂದು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.

ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!

ಮುನ್ನೆಚ್ಚರಿಕೆ ಅಗತ್ಯ:

‘ಆದರೆ ಲಕ್ಷಣಗಳು ಸೌಮ್ಯವಾಗಿದ್ದರೂ ಸೋಂಕಿನಿಂದ ರಕ್ಷಿಸಿಕೊಳ್ಳಲು ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಇರುವವರು ಮಾಸ್‌್ಕ ಧರಿಸುವುದು ಸೇರಿ ಇತರ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಷ್ಟುಮಾಡಿದರೆ ಸಾಕು. ಸೋಂಕಿನಿಂದ ದೂರ ಉಳಿಯಬಹುದು’ ಎಂದು ಹರ್ಯಾಣದ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್‌ ಗೌತಮ್‌ ಮೆನನ್‌ ಹೇಳಿದ್ದಾರೆ.

ಸಿದ್ಧತೆ ಕೈಗೊಳ್ಳಲು ಕೇಂದ್ರದ ಸೂಚನೆ

ನವದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ನಿರ್ವಹಣಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಲಸಿಕಾಕರಣ ಹೆಚ್ಚಿಸಲು, ಜಿನೋಮ್‌ ಸೀಕ್ವೆನ್ಸಿಂಗ್‌ ನಡೆಸಲು ಹಾಗೂ ಕೋವಿಡ್‌ ಸನ್ನಡತೆ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದೆ.

Latest Videos
Follow Us:
Download App:
  • android
  • ios