Asianet Suvarna News Asianet Suvarna News

ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಸೇರಿ 7 ರಾಜ್ಯದಲ್ಲಿ ಕೋವಿಡ್ ಆತಂಕ, ಹಾಟ್‌ಸ್ಪಾಟ್ ಗುರುತಿಸಲು ಸೂಚನೆ!

ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು 6 ಸಾವಿರ ಹೊಸ ಪ್ರಕರಣ ದಾಖಲಾಗಿದೆ. ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಕೋವಿಡ್ ಗಣನೀಯ ಏರಿಕೆಯಾಗಿದೆ. ಇದೀಗ ಕೋವಿಡ್ ಹಾಟ್‌ಸ್ಪಾಟ್ ಗುರುತಿಸಲು ಕೇಂದ್ರ ರಾಜ್ಯಗಳಿಗೆ ಸೂಚನೆ ನೀಡಿದೆ. ಇದರ ಜೊತೆ ಕೆಲ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ.
 

Covid 19 raise in Poll bound Karnataka and 6 other state Center ask to increase testing and vaccination ckm
Author
First Published Apr 7, 2023, 8:46 PM IST

ನವದೆಹಲಿ(ಏ.07): ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ರಾಜಕೀಯ ಪಕ್ಷಗಳ ರ್ಯಾಲಿ, ರೋಡ್ ಶೋ, ಸಮಾವೇಶಗಳ ಅಬ್ಬರ ಹೆಚ್ಚಾಗಲಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತದಲ್ಲಿ ಗಣನೀಯ ಕೋವಿಡ್ ಏರಿಕೆಯ 7 ರಾಜ್ಯಗಳನ್ನು ಗುರುತಿಸಿದೆ. ಇದರಲ್ಲಿ ಕರ್ನಾಟಕವೂ ಸೇರಿಕೊಂಡಿದೆ. ಗಣನೀಯ ಏರಿಕೆಯಿಂದ ಇಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರು, ಅಧಿಕಾರಿಗಳ ಜೊತೆ ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿಯಾ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ರಾಜ್ಯಗಳಿಗೆ ಮಹತ್ವದ ಸೂಚನೆಯನ್ನು ನೀಡಿದ್ದಾರೆ. 

ಕರ್ನಾಟಕ, ಕೇರಳ, ಮಹಾರಾಷ್ಟ್ರ, ದೆಹಲಿ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಹರ್ಯಾಣದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಇಂದು 926 ಕೋವಿಡ್ ಪ್ರಕರಣ ದಾಖಲಾಗಿದೆ. 3 ಮಂದಿಗೆ ಕೋವಿಡ್‌ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. 

Covid and Health: ಕೊರೋನಾ ಬಂದಿದ್ದೇ ಬಂದಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಲ್ಲಿ ವಿಪರೀತ ಏರಿಕೆ

ಮಹತ್ವದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ರಾಜ್ಯಕ್ಕೆ ಸಲಹೆ ನೀಡಿದ್ದಾರೆ. ರಾಜ್ಯಗಳು ಜಾಗರೂಕರಾಗಿರಬೇಕು ಮತ್ತು ಕೋವಿಡ್-19 ನಿರ್ವಹಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮಾಂಡವಿಯಾ ಹೇಳಿದ್ದಾರೆ. 2023ರ ಏಪ್ರಿಲ್ 10 ಮತ್ತು 11ರಂದು ಎಲ್ಲ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಸನ್ನದ್ಧತಾ ಪ್ರದರ್ಶನ ನಡೆಸುವಂತೆ ಹಾಗೂ 2023ರ ಏಪ್ರಿಲ್ 8 ಮತ್ತು 9ರಂದು ಜಿಲ್ಲಾಡಳಿತಗಳು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಸೂಚಿಸಿದರು. ʻಐಎಲ್ಐʼ/ʻಎಸ್ಎಆರ್‌ಐʼ ಪ್ರಕರಣಗಳ ಏರಿಳಿತ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಹಾಗೂ ಕೋವಿಡ್-19 ಮತ್ತು ಇನ್‌ಫ್ಲುಯೆಂಜಾ ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸುವ ಮೂಲಕ ʻಹಾಟ್‌ಸ್ಪಾಟ್‌ʼಗಳನ್ನು ಮುಂಚಿತವಾಗಿ ಗುರುತಿಸುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು. ಇದೇ ವೇಳೆ, ಪಾಸಿಟಿವ್‌ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ ಹೆಚ್ಚಿಸುವಂತೆ ಸೂಚಿಸಿದರು. 

23 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪ್ರತಿ ದಶಲಕ್ಷಕ್ಕೆ ನಡೆಸಿದ ಸರಾಸರಿ ಪರೀಕ್ಷೆಗಳ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಹೊಸ ಕೋವಿಡ್ ರೂಪಾಂತರಗಳ ಹೊರತಾಗಿಯೂ, 'ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕೆ ಮತ್ತು ಕೋವಿಡ್ ಸೂಕ್ತ ನಡೆವಳಿಕೆಯ ಅನುಸರಣೆ' ಎಂಬ ಐದು ಹಂತಗಳ ಕಾರ್ಯತಂತ್ರವು ಕೋವಿಡ್ ನಿರ್ವಹಣೆಗೆ ಕಾರ್ಯತಂತ್ರವಾಗಿ ಮುಂದುವರಿಯುತ್ತದೆ ಎಂದು ಡಾ.ಮಾಂಡವಿಯಾ ಹೇಳಿದರು. ಇದರಿಂದ ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.  2023ರ ಏಪ್ರಿಲ್ 7ಕ್ಕೆ ಕೊನೆಗೊಳ್ಳುವ ವಾರದ ಹೊತ್ತಿಗೆ, ಪ್ರಸ್ತುತ ಇರುವ ಪ್ರತಿ ದಶಲಕ್ಷಕ್ಕೆ 100 ಪರೀಕ್ಷೆಗಳ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಯಿತು. ಪರೀಕ್ಷೆಗಳಲ್ಲಿ ʻಆರ್‌ಟಿ-ಪಿಸಿಆರ್‌ʼ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸಲಹೆ ನೀಡಲಾಯಿತು.

 

ಕೋವಿಡ್ ಹೆಚ್ಚಳ ನಡುವೆ ಡೆಡ್ಲಿ ಮಾಬರ್ಗ್ ವೈರಸ್ ಪತ್ತೆ, ತಾಂಝಾನಿಯಾಗೆ ಪ್ರಯಾಣಕ್ಕೆ ನಿರ್ಬಂಧ!
 
ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣವು ಕ್ರಮೇಣ ಏರಿಕೆಯಾಗುತ್ತಿರುವ ಬಗ್ಗೆ ರಾಜ್ಯಗಳಿಗೆ ವಿವರಿಸಲಾಯಿತು. 2023ರ ಮಾರ್ಚ್ 17ಕ್ಕೆ ಕೊನೆಗೊಂಡ ವಾರದಲ್ಲಿ  571 ಇದ್ದ ಸರಾಸರಿ ದೈನಂದಿನ ಪ್ರಕರಣಗಳ ಸಂಖ್ಯೆಯು 2023ರ ಏಪ್ರಿಲ್ 07ಕ್ಕೆ ಕೊನೆಗೊಂಡ ವಾರದಲ್ಲಿ 4,188ಕ್ಕೆ ಏರಿದೆ; ಮತ್ತು 2023ರ ಏಪ್ರಿಲ್  7ಕ್ಕೆ ಕೊನೆಗೊಂಡ ವಾರದಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರವು ಶೇ.3.02ಕ್ಕೆ ಏರಿದೆ ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಲಾಯಿತು. ಇದೇ ವೇಳೆ, ಜಾಗತಿಕವಾಗಿ 88,503 ದೈನಂದಿನ ಸರಾಸರಿ ಪ್ರಕರಣಗಳು ವರದಿಯಾಗಿವೆ, ಕಳೆದ ಒಂದು ವಾರದಲ್ಲಿ ಜಾಗತಿಕ ಪ್ರಕರಣಗಳಲ್ಲಿ ಅಗ್ರ ಐದು ದೇಶಗಳ ಪಾಲು ಶೇ.62.6 ರಷ್ಟಿದೆ ಎಂದು ಮಾಹಿತಿ ನೀಡಲಾಯಿತು. 

Follow Us:
Download App:
  • android
  • ios