Asianet Suvarna News Asianet Suvarna News

Covid 19 Crisis: ಕೊರೋನಾ ಸೋಂಕಿನಿಂದ 4 ತಿಂಗಳ ಮಗು ಸಾವು

ರಾಜ್ಯದಲ್ಲಿನ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತಲೂ ಕಡಿಮೆ ಆಗಿದ್ದು,  ಈವೆರೆಗೆ ಬಿಎಂಪಿ ವ್ಯಾಪ್ತಿಯಲ್ಲಿ 19,935 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ

4 month old baby succumbs to Covid 19 in Bengaluru mnj
Author
Bengaluru, First Published Mar 21, 2022, 8:54 AM IST

ಬೆಂಗಳೂರು (ಮಾ. 21):  ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಸದ್ಯ ನಗರದಲ್ಲಿ ಒಂದೇ ಒಂದು ಕಂಟೈನ್ಮೆಂಟ್‌ ವಲಯವಿದೆ. ಭಾನುವಾರ 91 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ನಾಲ್ಕು ತಿಂಗಳ ಗಂಡು ಮಗುವೊಂದು ಮೃತಪಟ್ಟಿದೆ. ನಗರದ ಏಕೈಕ ಕಂಟೈನ್ಮೆಂಟ್‌ ವಲಯ ಬೆಂಗಳೂರು ದಕ್ಷಿಣದಲ್ಲಿದೆ. 125 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,706ಕ್ಕೆ ಕುಸಿದಿದೆ.

ಹೀಗಿದ್ದರೂ ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ನಗರದ ಪಾಲು ಶೇ.85.51 ಇದೆ. 43 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, 10 ಮಂದಿ ತೀವ್ರ ನಿಗಾ ವಿಭಾಗ, 3 ಮಂದಿ ಆಮ್ಲಜನಕ ಯುಕ್ತ ಹಾಸಿಗೆ ಮತ್ತು 23 ಮಂದಿ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: Coroanavirus: ಯುರೋಪ್‌ನಲ್ಲಿ ಒಮಿಕ್ರೋನ್‌ 2ನೇ ಅಲೆ, ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ

ಲಸಿಕೆ ಅಭಿಯಾನ: ಬಿಬಿಎಂಪಿ ವ್ಯಾಪ್ತಿಯಲ್ಲಿ 19,935 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 5,884 ಮಂದಿ ಮೊದಲ ಡೋಸ್‌, 12,007 ಮಂದಿ ಎರಡನೇ ಡೋಸ್‌ ಮತ್ತು 2,044 ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1.82 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಬರೀ 109 ಕೋವಿಡ್‌ ಹೊಸ ಕೇಸ್‌: ರಾಜ್ಯದಲ್ಲಿನ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತಲೂ ಕಡಿಮೆ ಆಗಿದೆ. 109 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ನಾಲ್ಕು ತಿಂಗಳ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ 143 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,995ಕ್ಕೆ ಕುಸಿದಿದೆ. 

27,838 ಕೋವಿಡ್‌ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ. 0.39 ದಾಖಲಾಗಿದೆ. ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಕೋವಿಡ್‌ ಪೀಡಿತ ನಾಲ್ಕು ತಿಂಗಳ ಗಂಡು ಮಗು ಮತ್ತು ಹಾಸನದಲ್ಲಿ 61ರ ಹರೆಯದ ಪುರುಷ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿಗಂಟಲು ನೋವಿನ ಸಮಸ್ಯೆ, ಕೊರೋನಾದಿಂದಾನ ? ಹವಾಮಾನ ಬದಲಾವಣೆಯಿಂದಾನ ತಿಳ್ಕೊಳ್ಳಿ

ಬೆಂಗಳೂರು ನಗರದಲ್ಲಿ 91, ಮೈಸೂರು 4, ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೊಪ್ಪಳ, ಮಂಡ್ಯ, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಯಾದಗಿರಿಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.44 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 39.02 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,037 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ: ಭಾನುವಾರ 9,562 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 1,358 ಮಂದಿ ಮೊದಲ ಡೋಸ್‌, 7,577 ಮಂದಿ ಎರಡನೇ ಡೋಸ್‌ ಮತ್ತು 627 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 10.25 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ.
 

Follow Us:
Download App:
  • android
  • ios